ಸಾಮಾನ್ಯ ವಿಮಾ ಕಾರ್ಮಿಕರ ಮುಷ್ಕರ

ಕಲಬುರಗಿ,ಜು.15-ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕ ವಲಯದ ಎಲ್ಲ ಸಾಮಾನ್ಯ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಕಾರ್ಮಿಕರು ನಗರದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ವಿಭಾಗೀಯ ಕಚೇರಿ ಮುಂದೆ ಇಂದು ಮುಷ್ಕರ ನಡೆಸಿದರು.
ವೇತನ ಪರಿಷ್ಕರಣೆ (1.8.2017 ರಿಂದ 31.7.2022 ರವರೆಗೆ) ಮಾಡಬೇಕು, ಸಾರ್ವಜನಿಕ ಸಾಮಾನ್ಯ ವಿಮೆಯನ್ನು ಖಾಸಗೀಕರಣ ಮಾಡುವುದನ್ನು ತಡೆಯಬೇಕು, ಕುಟುಂಬ ಪಿಂಚಣಿ ಶೇ.30ಕ್ಕೆ ಏರಿಕೆ ಮಾಡಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದರು.
ಕಾರ್ಮಿಕ ಮುಖಂಡರಾದ ಆರ್.ಎಸ್.ಗುಗವಾಡ, ಎಂ.ಜಿ.ದೇಶಮುಖ, ಮಲ್ಲಿಕಾರ್ಜುನ ಎಸ್.ಎಚ್., ವಿಜಯಕುಮಾರ, ಜಗನ್ನಾಥ ಆಲಶೆಟ್ಟಿ, ಶರಣಬಸಪ್ಪಾ, ಬಿ.ಪಿ.ಚಿಂಚೋಳಿ, ವ್ಹಿ.ಬಿ.ರಾಠೋಡ, ಬಿ.ಎಸ್.ಹಾವಳಗಿ, ಆರ್.ಎಸ್.ಪುರಾಣಿಕ ಸೇರಿದಂತೆ ಮತ್ತಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಜೆ.ಎಫ್.ಟಿ.ಯು ನೀಡಿದ ಕರೆಯ ಮೇರೆಗೆ ಈ ಮುಷ್ಕರ ನಡೆಸಲಾಯಿತು.