ಸಾಮಾನ್ಯ ಕಾರ್ಯಕರ್ತ ಲಕ್ಷ್ಮಣ್ ಗೆಲುವಿಗೆ ಶ್ರಮಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.27:- ಸಾಮಾನ್ಯ ಕಾರ್ಯಕರ್ತರಾದ ಲಕ್ಷ್ಮಣ್ ಅವರಿಗೆ ಪಕ್ಷ ಟಿಕೇಟ್ ನೀಡಿದ್ದು, ಅವರ ಗೆಲುವೊಂದೆ ನಮ್ಮಲ್ಲರ ಗುರಿ ಆಗಿರಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ ಹೇಳಿದರು.
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿರುವ ಹಳೆ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾನು ರಾಜ್ಯಾಧ್ಯಕ್ಷನಾದ ಬಳಿಕ ಎಸ್ಸಿ ಘಟಕದಲ್ಲಿ ಎಲ್ಲಾ ಸಮಿತಿಗಳಿಗೆ ರಾಜ್ಯದಾದ್ಯಂತ 400ಕ್ಕೂ ಹೆಚ್ಚು ಮಂದಿಯನ್ನು ನೇಮಕಗೊಳಿಸುವ ಮೂಲಕ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಲು ಶ್ರಮಿಸಿದ್ದೇನೆ. ಮೈಸೂರು ಕ್ಷೇತ್ರ ಕೇವಲ ಲಕ್ಷ್ಮಣ್ ಅವರ ಗೆಲುವಲ್ಲ ಇದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಖರ್ಗೆ ಸೇರಿ ಇಡೀ ಕಾಂಗ್ರೆಸ್‍ನ ಗೆಲುವಾಗಿದೆ ಎಂದರು.
ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದ್ದಾರೆ. ಇದನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ದೇಶದಲ್ಲಿ ಕಾಂಗ್ರೆಸ್ ಉಳಿದರೇ ಮಾತ್ರವೇ ತಳಸಮುದಾಯ ಉಳಿಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವೂ ಸೇರಿ ಕನಿಷ್ಠ ರಾಜ್ಯದಲ್ಲಿ 20ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಮುಖಂಡರು, ಪದಾಧಿಕಾರಿಗಳು ಹೆಚ್ಚು ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅನೂಕೂಲಗಳ ಬಗ್ಗೆ ತಿಳಿಸಿಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮೈಸೂರು ವಿಭಾಗದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆರ್.ವಿನೋದ್ ಸೇರಿ ಅನೇಕರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ಪರಿಶಿಷ್ಟ ಜಾತಿ ವಿಭಾಗದ ಮೈಸೂರು ನಗರ ಅಧ್ಯಕ್ಷ ಕೆ.ರಮೇಶ್, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಸದಸ್ಯ ಹಾಗೂ ಮಾದ್ಯಮ ವಕ್ತಾರ ಎಸ್.ರಾಕೇಶ್ ಕುಮಾರ್, ಹಿರಿಯ ಉಪಾಧ್ಯಕ್ಷ ಮಂಟೆಲಿಂಗಯ್ಯ, ಜಗದೀಶ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಮೂರ್ತಿ, ಉಪಾಧ್ಯಕ್ಷ ಬಸವರಾಜ್ ಇನ್ನಿತರರು ಉಪಸ್ಥಿತರಿದ್ದರು.