ಸಾಮಾನ್ಯ ಕಾರ್ಯಕರ್ತನಿಗೆ ಜನ ಬೆಂಬಲ ನೀಡುವ ವಿಶ್ವಾಸವಿದೆ

ದಾವಣಗೆರೆ. ಮೇ.12; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜಿ ಅಜಯ್ ಕುಮಾರ್ ಅವರು ಕುಟುಂಬ ಸಮೇತರಾಗಿ ನಗರದ ಎಂ ಸಿಸಿ ಎ ಬ್ಲಾಕ್ ನಲ್ಲಿರುವ ಬಕ್ಕೇಶ್ವರ ಪ್ರೌಢಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.  ನಂತರ ಮಾತನಾಡಿದ ಅವರು ನನ್ನ ಹಕ್ಕು ಚಲಾಯಿಸಿದ್ದೇನೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿದ್ದಾರೆ.ನನ್ನನ್ನು ಅತೀಹೆಚ್ಚಿನ ಮತಗಳ ಅಂತರದಿಂದ ಜನತೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ  ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳು ಹೊಸಬರು ಸುಮಾರು ಒಂದು ವರ್ಷದಿಂದ ನಮ್ಮ ವರಿಷ್ಠರು ಹೇಳಿದ್ದಾರೆ ಅದರಂತೆ ಸುಮಾರು 70 ರಿಂದ 80 ಜನ ಹೊಸಬರಿಗೆ ಅವಕಾಶ ನೀಡಿ ಕೊಟ್ಟಿರುವ ಮಾತು ಉಳಿಸಿಕೊಂಡಿದ್ದಾರೆ.ಸಾಮಾನ್ಯ ಕಾರ್ಯಕರ್ತ ಜೊತೆ ಹಿರಿಯ ಶಾಸಕರ ನಡುವೆ ಟಫ್ ಫೈಟ್ ಇತ್ತು.ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ ಗೆಲ್ಲುವ ವಿಶ್ವಾಸವಿದೆ ಎಂದರು.