ಸಾಮಾನ್ಯರಿಗೂ ಉನ್ನತ ಸ್ಥಾನ ಕಲ್ಪಿಸುವ ಪಕ್ಷ ಬಿಜೆಪಿ

ಬೀದರ್:ಏ.7: ಬಿಜೆಪಿ ವಿಶ್ವದಲ್ಲೇ ಅತೀ ದೊಡ್ಡದಾದ ಪಕ್ಷವಾಗಿದೆ. ಇಂತಹ ಪಕ್ಷದಲ್ಲಿ ಇದ್ದಿರುವುದೇ ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಸಾಮಾನ್ಯರಿಗೂ ಸಹ ಉನ್ನತ ಹುದ್ದೆ ಕೊಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಬಿಜೆಪಿ ದೇಶದ ಸೇವೆಗೆ ಅವಕಾಶ ಕೊಟ್ಟಿದೆ. ಸರ್ವರ ಹಿತದ ಜೊತೆಗೆ ದೇಶದ ಸಮಗ್ರ ವಿಕಾಸಕ್ಕೆ ಬಿಜೆಪಿ ದುಡಿಯುತ್ತಿದೆ. ಅನೇಕರ ಅವಿರತ ಶ್ರಮ, ಹಲವರ ತ್ಯಾಗ, ಬಲಿದಾನ, ಸಂಘರ್ಷದ ಫಲವಾಗಿ ಇಂದು ಪಕ್ಷ ಹೆಮ್ಮರವಾಗಿ ಬೆಳೆದಿದೆ. ಆದರೆ ತನ್ನದೇ ಆದ ಸಿದ್ಧಾಂತ, ವಿಚಾರಧಾರೆಗಳ ಮೇಲೆ ಗಟ್ಟಿಯಾಗಿ ನಿಂತಿದೆ. ಸಣ್ಣ, ಸಣ್ಣ ಕಾರ್ಯಕರ್ತರಿಗೆ, ಸಾಮಾನ್ಯರಿಗೂ ದೊಡ್ಡ ಅವಕಾಶ ಕೊಡುವ ಏಕೈಕ ಪಕ್ಷವಿದು. ಕಾರ್ಯಕರ್ತರ ಶ್ರಮಕ್ಕೆ ಇಲ್ಲಿ ಮಾತ್ರೆ ಬೆಲೆಯಿದೆ ಎಂದು ಹೇಳಿದರು.
ಬಿಜೆಪಿ ನಮಗೆ ಸ್ಥಾನ ಹಾಗೂ ಮಾನ ನೀಡಿದೆ. ಸಮಾಜದಲ್ಲಿ ಹೆಸರು ಹಾಗೂ ಗೌರವ ಕೊಟ್ಟಿದೆ. ನಾವು ಸಹ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ ಪಕ್ಷ ಬೆಳೆಸಬೇಕು. ಬಿಜೆಪಿಯಿಂದಲೇ ನಮ್ಮ ಗುರುತು ಇದೆ. ನಾವು ಪಕ್ಷಕ್ಕೆ ಸದಾ ಲಾಯಲ್ ಆಗಿ ದುಡಿಯಬೇಕು. ಉತ್ತಮ ಹುದ್ದೆಗೇರಿದರೆ, ಅಧಿಕಾರ ಸಿಕ್ಕರೆ ಎಲ್ಲರಿಗೂ ಬೆಳೆಸಬೇಕು. ಪಕ್ಷದ ಸಂಘಟನೆ ಬಲಪಡಿಸÀಬೇಕು. ಎಲ್ಲರಿಗೂ ಬೆಳೆಸಿದಾಗಲೇ ನಾವೂ ಬೆಳೆಯುತ್ತೇವೆ. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರು ಈ ಸಲ ಬಹಳ ಅರ್ಥಪೂರ್ಣವಾಗಿ ಸಂಸ್ಥಾಪನಾ ದಿನವನ್ನು ಆಯೋಜಿಸಿದ್ದಾರೆ. ಹಿಂದಿನ ಜಿಲ್ಲಾಧ್ಯಕ್ಷರಿಗೆ ದಂಪತಿ ಸಹ ಆಹ್ವಾನಿಸಿ ಗೌರವಿಸುವ ಮೂಲಕ ಕಾರ್ಯಕ್ರಮಕ್ಕೆ ಭಾವನಾತ್ಮಕ ಟಚಪ್ ಕೊಟ್ಟಿದ್ದಾರೆ. ಭಾವನೆ, ದೇಶಾಭಿಮಾನ, ಸಂಬಂಧಕ್ಕೆ ಬಿಜೆಪಿಯಲ್ಲಿ ಮಾತ್ರ ಬೆಲೆಯಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಮಾತನಾಡಿ, ದೇಶದ ಅಖಂಡತೆ, ದೇಶದ ಪರಮವೈಭವದ ಪುನರುತ್ಥಾನಕ್ಕೆ ಮೊದಲು ಜನಸಂಘ ಅಸ್ತಿತ್ವಕ್ಕೆ ಬಂತು. 1980ರ ಏಪ್ರಿಲ್ 6 ರಂದು ಇದು ಬಿಜೆಪಿಯಾಗಿ ರಚನೆಗೊಂಡಿತು. ಅಟಲ್ ಬಿಹಾರಿ ವಾಪೇಯಿ ಬಿಜೆಪಿ ಮೊದಲ ಅಧ್ಯಕ್ಷರಾಗಿ ಹಾಗೂ ಇವರ ಜೊತೆಗೆ ಲಾಲಕೃಷ್ಣ ಆಡ್ವಾಣಿ ಇತರರು ಸೇರಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದರು. ಜನಸಂಘದಿಂದ ನಮ್ಮ ದಾರಿ ಆರಂಭವಾಯಿತು. ಶ್ಯಾಮಾಪ್ರಸಾದ ಮುಖರ್ಜಿ ಕಂಡಿದ ಕನಸು ನನಸು ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಬಿಜೆಪಿ ಬರೀ ಪಕ್ಷವಲ್ಲ. ಇದು ದೇಶದ ಭವಿಷ್ಯವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಮತ್ತೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ಇದಕ್ಕಾಗಿ ಕಾರ್ಯಕರ್ತರು ನಿಸ್ವಾರ್ಥ, ನಿಷ್ಠೆಯಿಂದ ದುಡಿದು ಭಾರತಾಂಬೆಗೆ ಅಳಿಲು ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಸೂರ್ಯಕಾಂತ ಢೋಣೆ, ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ, ಎಂಎಲ್‍ಸಿ ರಘುನಾಥರಾವ ಮಲ್ಕಾಪುರೆ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷರುಗಳಾದ ಸುಭಾಷ ಕಲ್ಲೂರ್, ಪ್ರಕಾಶ ಖಂಡ್ರೆ, ಬಾಬುರಾವ ಮದಕಟ್ಟಿ, ನಂದಕಿಶೋರ ವರ್ಮಾ, ಶಿವರಾಜ ಗಂದಗೆ, ಶಿವಾನಂದ ಮಂಠಾಳಕರ್ ಅವರು ಮಾತನಾಡಿ, ಪಕ್ಷದ ಸಂಘಟನೆಗಾಗಿ ಮಾಡಿರುವ ಕಾರ್ಯವನ್ನು ಮೆಲಕು ಹಾಕಿದರು.

ಈ ವೇಳೆ ಎಲ್ಲ ಮಾಜಿ ಜಿಲ್ಲಾ ಅಧ್ಯಕ್ಷರಿಗೆ ದಂಪತಿ ಸಮೇತವಾಗಿ ಗೌರವ ಸನ್ಮಾನ ಮಾಡಲಾಯಿತು. ದಿ.ನಾರಾಯಣರಾವ ಮನ್ನಳ್ಳಿ ಅವರ ಧರ್ಮಪತ್ನಿ, ದಿ.ಅಶೋಕ ಗುತ್ತೇದಾರ್ ಅವರ ಧರ್ಮಪತ್ನಿ ಆಗಮಿಸಿ ಸನ್ಮಾನ ಸ್ವೀಕರಿಸಿದರು. ಪ್ರಮುಖರಾದ ಜಯಕುಮಾರ ಕಾಂಗೆ, ರಾಜಶೇಖರ ಮೂರ್ತಿ, ಕಿರಣ ಪಾಟೀಲ್ ಹಕ್ಯಾಳ್ ಇತರರಿದ್ದರು. ಪೀರಪ್ಪ ಯರನಳ್ಳೆ ನಿರೂಪಣೆ ಮಾಡಿದರೆ, ಮಾಧವ ಹಸೂರೆ ವಂದಿಸಿದರು.

ಕಾಂಗ್ರೆಸ್‍ನವರ ತುಷ್ಠೀಕರಣ, ದೇಶ ಒಡೆಯುವ ಕುತಂತ್ರ ರಾಜಕೀಯಕ್ಕೆ ಪಾಠ ಕಲಿಸಬೇಕಿದೆ. ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಸೆಲ್ಫ್ ಲಾಸ್ಟ್ ಎನ್ನುವ ಘೋಷವಾಕ್ಯದಡಿ ನಾವೆಲ್ಲರೂ ಕೆಲಸ ಮಾಡಲು ಸಂಕಲ್ಪ ಮಾಡಬೇಕು. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ನಮ್ಮದು. ಕಾಂಗ್ರೆಸ್ ಕೇವಲ ಕುಟುಂಬದವರಿಗೆ ಗುರುತಿಸುತ್ತಿದೆ. ದೇಶದ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ.
-ಸೋಮನಾಥ ಪಾಟೀಲ್

ಬಿಜೆಪಿ ಜಿಲ್ಲಾ ಅಧ್ಯಕ್ಷ

ಹಳೇ ದಿನ ಮೆಲಕು ಹಾಕಿದ ಜಿಲ್ಲಾಧ್ಯಕ್ಷರು
ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷದ ಸಂಘಟನೆ ಮಾಡಿದ ಹಾಗೂ ಪಕ್ಷ ಕಟ್ಟಿದ ಹಳೆಯ ದಿನಗಳ ಮೇಲೆ ಮೆಲಕು ಹಾಕಿದರು. 20 ಚದರಡಿ ಜಾಗದಲ್ಲಿ ಕಚೇರಿಯಿಟ್ಟುಕೊಂಡು ಕೆಲಸ ಮಾಡುತ್ತಿದ್ದ ನಾವು ಈಗ ನಾಲ್ಕಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವುದೇ ನೋಡಿ ಅತ್ಯಂತ ಖುಷಿಯಾಗಿದೆ ಎಂದು ಬಾಬುರಾವ ಮದಕಟ್ಟಿ ಹೇಳಿದರು. ಭಾಲ್ಕಿಯಲ್ಲಿ ಜಿರೋ ಇದ್ದ ಬಿಜೆಪಿ ಕಟ್ಟಿದ್ದು, ಇಲ್ಲಿ ಕಮಲ ಅರಳಿಸಿದ್ದೇ ರೋಚಕ ಎಂದು ಶಿವರಾಜ ಗಂದಗೆ ವಿವರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ, ಮಂಡಲ ಅಧ್ಯಕ್ಷ ಆಗಲಿಕ್ಕೂ ಯಾರೂ ಮುಂದೆ ಬರದ ಸ್ಥಿತಿಯಲ್ಲೂ ಹಲವರ ತನು-ಮನ-ಧನದ ಸಹಕಾರದಿಂದ ಪಕ್ಷ ಸಂಘಟನೆ ಮಾಡಲಾಯಿತು ಎಂದು ನಂದಕಿಶೋರ ವರ್ಮಾ ತಿಳಿಸಿದರು. ಹಿಂದಿನವರಿಗೆ ನೆನೆಸಿ ಅವರ ಚಿಂತನೆ, ತತ್ವದಲ್ಲಿ ನಾವೆಲ್ಲ ಸಾಗಬೇಕಿದೆ. ಮುಂಬೈ ಬಳಿಕ ಹುಮನಾಬಾದ್‍ನಲ್ಲೇ ಬಿಜೆಪಿ ಸಂಘಟನೆಗೆ ಚಾಲನೆ ನೀಡಲಾಯಿತು. ಕಾಂಗ್ರೆಸ್‍ನವರ ಮನಿ, ಮಸಲ್ ಪವರ್ ಮಧ್ಯೆ ಪಕ್ಷಕ್ಕೆ ಬೆಳೆಸಿದ್ದು ಸಾಮಾನ್ಯವೇನಲ್ಲ ಎಂದು ಸುಭಾಷ ಕಲ್ಲೂರ್ ಹೇಳಿದರು. ಅಧಿಕಾರಕ್ಕೆ ಬಂದವರು ಯಾವತ್ತೂ ಅಹಂಕಾರ, ದರ್ಪ ಮೆರೆಯಬಾರದು. ಸರಳತೆ, ವಿನಯತೆ ಬೆಳೆಸಿಕೊಳ್ಳಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು. ಮೋದಿ ಅಲೆಯಿದೆ ಎಂದು ಕುಳಿತುಕೊಂಡರೆ ನಡೆಯಲ್ಲ. ಎಲ್ಲರೂ ಜತೆಗೂಡಿ ಕೆಲಸ ಮಾಡಿದಾಗಲೇ ಸಂಘಟನೆ ಬಲಿಷ್ಠವಾಗಿ ಫಲಿತಾಂಶ ನಮ್ಮ ಪರವಾಗಿ ಬರುತ್ತದೆ. ಇಲ್ಲದಿದ್ದರೆ ಎಲ್ಲವೂ ಉಲ್ಟಾ ಆಗುತ್ತದೆ ಎಂದು ಎಚ್ಚರಿಸಿದರು. ಸಂಘಟನಾತ್ಮಕ ಹೊಣೆ ಹೊತ್ತವರು ಅಧಿಕಾರದಲ್ಲಿದ್ದವರು ಹೇಗಿರಬೇಕು ಎಂಬ ಟ್ರೇನಿಂಗ ನೀಡುವ ಅಗತ್ಯವಿದೆ ಎಂದು ಕಲ್ಲೂರ್ ಹೇಳಿದರು. ಕಷ್ಟದ ಸಮಯದಲ್ಲಿ ಪಕ್ಷ ಕಟ್ಟಿ ಬೆಳೆಸಲಾಗಿದೆ. ದೇಶದ ಪರವಾದ ಸಂಘಟನೆ ಮಾಡುವ ಪಕ್ಷದಲ್ಲಿ ಕೆಲಸ ಮಾಡಿದ್ದಕ್ಕೆ ಗರ್ವ ಇದೆ. ಕಾರ್ಯಕರ್ತರ ಶ್ರಮದಿಂದ ಅಧಿಕಾರ ಸಿಕ್ಕಿದೆ. ಮೋದಿ ಹೆಸರಿನಲ್ಲಿ ಶಕ್ತಿಯಿದೆ ಎಂದು ಪ್ರಕಾಶ ಖಂಡ್ರೆ ಹೆಮ್ಮೆಪಟ್ಟರು. ಹಿರಿಯರ ಶ್ರಮದಿಂದ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಇದರ ಲಾಭ (ಅಧಿಕಾರ) ಇಂದು ನಮಗೆಲ್ಲ ಸಿಗುತ್ತಿದೆ ಎಂದು ಶಿವಾನಂದ ಮಂಠಾಳಕರ್ ಹೇಳಿದರು. ದಂಪತಿ ಸಮೇತ ಆಹ್ವಾನಿಸಿ, ಸನ್ಮಾನಿಸಿದ್ದಕ್ಕಾಗಿ ಎಲ್ಲರೂ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪಕ್ಷದಿಂದ ಹೊಸ ಪರಂಪರೆಗೆ ನಾಂದಿ ಹಾಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.