ಭಾಲ್ಕಿ:ಜು.4:ಗುರು ಎಂಬ ಶಬ್ದದಲ್ಲಿ ಅದ್ಭುತ ಶಕ್ತಿ ಅಡಗಿದ್ದು, ಗುರುವಿನ ಕೃಪೆಗೆ ಒಳಗಾದರೆ ಸಾಮಾನ್ಯರಿಂದಲೂ ಶ್ರೇಷ್ಠವಾದ ಕಾರ್ಯಗಳು ಜರುಗುತ್ತವೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವಶಂಕರ ಕಾಮಶೆಟ್ಟಿ ಹೇಳಿದರು.
ತಾಲ್ಲೂಕಿನ ಸಿದ್ದೇಶ್ವರ ಕ್ರಾಸ್ ಹತ್ತಿರದ ಶಿವಕುಮಾರ ಸ್ವಾಮೀಜಿ ವೃತ್ತ ಬಳಿ ಸೋಮವಾರ ಸಿದ್ದಗಂಗಾ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿ ಸಂಘದ ವತಿಯಿಂದ
ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕಾದರೆ ತಾಳ್ಮೆ, ಸತತ ಪರಿಶ್ರಮ, ಉತ್ತಮ ಚಾರಿತ್ರ್ಯ, ನೈತಿಕತೆ, ಪ್ರಾಮಾಣಿಕತೆ ಬಹುಮುಖ್ಯ. ಈ ಅಮೂಲ್ಯ ಗುಣಗಳನ್ನು ನಮಗೆ ಕಲಿಸುವರು ಗುರುಗಳು ಎಂದು ತಿಳಿಸಿದರು.
ಸಿದ್ದಗಂಗಾ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ನನ್ನಂತಹ ಅಸಂಖ್ಯ ವಿದ್ಯಾರ್ಥಿಗಳ ಬಾಳು ಬೆಳಗಿದ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಜಗತ್ತಿನ ಶ್ರೇಷ್ಠ ಗುರುಗಳಲ್ಲಿ ಒಬ್ಬರು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ಟಿ.ಸಿ ಅಮರನಾಥ ಪಾಟೀಲ, ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಫುಲೆ, ಪ್ರಥಮ ದರ್ಜೆ ಗುತ್ತಿಗೆದಾರ ಜ್ಯೋತಿಷ ಹಲಬರ್ಗೆ, ಬಸವರಾಜ ಕರೆಪ್ಪನವರ್, ಗ್ರಾಮ ಪಂಚಾಯಿತಿ ಸದಸ್ಯರಾದ ಏಕನಾಥ ಮೇತ್ರೆ, ಮಂಜುನಾಥ ಪಾಟೀಲ, ಪಿಂಟು ಠಾಕೂರ್, ಈಶ್ವರ ರುಮ್ಮಾ, ಸೋಮನಾಥ ತುಗಶೆಟ್ಟೆ, ಅಮರ ಹರಪಳ್ಳೆ, ಪವನ ಬಿರಾದರ ಇದ್ದರು.