ಸಾಮಾಜಿಕ ಹೋರಾಟಗಾರ ಹೀರಾಚಂದ ವಾಘಾಮೋರೆ ಆರೋಗ್ಯ ವಿಚಾರಿಸಿದ ಈಶ್ವರ್ ಸಿಂಗ್ ಠಾಕೂರ್

ಬೀದರ:ಡಿ.10:ತನ್ನ ಜೀವನದುದ್ದಕ್ಕೂ ಹೋರಾಟಗಳ ಮೂಲಕ ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಯ ಹೋರಾಟಗಾರ ಹೀರಾಚಂದ ವಾಘಾಮೊರೆ ಅವರು ಅನಾರೋಗ್ಯದ ಕಾರಣದಿಂದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಬಿಜೆಪಿ ಮುಖಂಡರಾದ ಈಶ್ವರ್ ಸಿಂಗ್ ಠಾಕೂರ್ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಮಾತಾಡಿ ಚಿಕಿತ್ಸೆಗೆ ಅಗತ್ಯ ಇರುವ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.

ಹೀರಾ ಚಂದ ಅವರು ಭಾಲ್ಕಿಯ ನಾಗನಾಥ ವಾಘ್ಮೋರೆ ಮತ್ತು ಲಕ್ಷ್ಮೀಬಾಯಿ ವಾಘ್ಮೋರೆ ದಂಪತಿಗಳ ಮುದ್ದಿನ ಮಗ ,
ಅವರ ತಂದೆ ಅವರು ಆರ್ಯ ಸಮಾಜದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ಹೀಗಾಗಿ ಅವರ ಮನೆಯಲ್ಲಿ ಆರ್ಯ ಸಮಾಜದ ಪ್ರಮುಖರ ಊಟ ವಸತಿಗಾಗಿ ಇವರ ಮನೆಗೆ ಬರುತ್ತಿದ್ದರು ಹೀರಾ ಚಂದ ಅವರ ಮೇಲೆ ಪ್ರಭಾವ ಬೀರಿದ ಪರಿಣಾಮ ಹೀರಚಂದ ವಾಘ್ಮೋರೆ ಆಜನ್ಮ ಬ್ರಹ್ಮಚಾರಿಯಾಗಿ ಬದುಕಿದರು.
1973ರ ಬರಗಾಲ ಸಂದರ್ಭದಲ್ಲಿ ದನ ಕರುಗಳಿಗೆ ಮೇವು ಕೊರತೆಯಾದಾಗ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಪರಿಣಾಮ ರಾಜ್ಯ ಸರ್ಕಾರ ಬಳ್ಳಾರಿಯಿಂದ ದನ ಕರುಗಳಿಗೆ ಮೇವಿನ ವ್ಯವಸ್ಥೆ ಮಾಡುತ್ತದೆ.
ಆರ್ಯ ಸಮಾಜದ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಸಮದಲ್ಲಿ 1975ರಲ್ಲಿ ಆಗಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಳೆಯ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅದನ್ನ ವಿರೋಧಿಸಿ ಭೂಗತರಾಗಿ ಕಾರ್ಯ ನಿರ್ವಹಿಸಿದರು, ನಂತರ ರಾಜ್ಯ ಸರ್ಕಾರದ ಆದರ್ಶ ಗ್ರಾಮ ಯೋಜನೆಯ ಜಾರಿಯಾದಾಗ ಇವರನ್ನ ಭಾಲ್ಕಿ ತಾಲೂಕಿನ ವಳಸಂಗ ಗ್ರಾಮದ ಪ್ರಮುಖರನ್ನು ನೇಮಕ ಮಾಡಲಾಗಿತ್ತು. ಸಮಾಜಕ್ಕೆ ಮಾರಕವಾದ ಸಾರಾಯಿ ವಿರುದ್ಧ , ಗೋ ಹತ್ಯೆ ವಿರುದ್ಧ ಹೀಗೆ ಹತ್ತು ಹಲವು ಹೋರಾಟಗಳ ಮೂಲಕ ಇಂದಿನ ಯುವಕರಿಗೆ ಪ್ರೇರಣಾ ಜ್ಯೋತಿಯಾಗಿ ಬೆಳಕು ನೀಡುತ್ತಿದ್ದಾರೆ.