ಸಾಮಾಜಿಕ ಸ್ಥರ ವಿನ್ಯಾಸ ಮತ್ತು ಚಲನಶೀಲತೆ” ಕೃತಿ ಬಿಡುಗಡೆ


ಸಂಜೆವಾಣಿ ವಾರ್ತೆ
ಸಂಡೂರು:ಫೆ: 26: ಸಂಡೂರು: ಸಾಮಾಜಿಕಸ್ಥರವಿನ್ಯಾಸ ಮತ್ತು ಚಲನಶೀಲತೆ ಎನ್ನುವ ವಿಷಯವಸ್ತುವನ್ನು ಬರೆಯುವಂತಹ ಎದೆಗಾರಿಕೆ ಬಹುಮುಖ್ಯವಾಗುತ್ತದೆ, ಕಾರಣ ಇಡೀ ಸಮಾಜದಲ್ಲಿಯ ಅಂಶಗಳು ಸಾಮಾಜಿಕ ಸ್ಥರವಿನ್ಯಾಸದಲ್ಲಿ ಬರುತ್ತವೆ ಅದರಲ್ಲೂ ಪ್ರಮುಖವಾಗಿ ಜಾತಿಯ ವ್ಯವಸ್ಥೆ, ಬಡಕಟ್ಟು ಸಮುದಾಯಗಳ ಶೋಷಣೆಯಂತಹ ಅಂಶಗಳು ಮುಖ್ಯವಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬೇವೂರ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಡಾ. ಗಂಗಮ್ಮ ವಿ ಮಡಿವಾಳರ ಹಾಗೂ ಡಾ. ತ್ರಿವೇಣಿ ಅರ್ ಪೋಳ ಅವರು ಬರೆದ ಸಾಮಾಜಿಕ ಸ್ತರ ವಿನ್ಯಾಸ ಮತ್ತು ಚಲನಶೀಲತೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಪುಸ್ತಕದ ಮುಖಪುಟವೇ ಅದರ ಒಳಗಿನ ಅಂಶಗಳನ್ನು ಬಿತ್ತರಿಸುವ ಉತ್ತಮ ಅಂಶವನ್ನು ಒಳಗೊಂಡಿದೆ, ಪ್ರಮುಖವಾಗಿ ಶ್ರೇಣಿಕರಣದ ಮೂಲ, ಸಾಮಾಜಿಕ ಸ್ತರ ವಿನ್ಯಾಸದ ವೈಶಿಷ್ಟ್ಯಗಳು ಮತ್ತು ರೂಪಗಳು, ಆರ್ಥಿಕ, ರಾಜಕೀಯ, ಸಾಮಾಜಿಕ ಆಯಾಮಗಳ ವಿಸ್ತೃತವಾದ ಅಂಶಗಳು, ಶ್ರೇಣಿ ವ್ಯವಸ್ಥೆಯಲ್ಲಿ ಬರೀ ಪರಿಶಿಷ್ಟ ಜಾತಿ ಮತ್ತು ಪಂಗಡದವರೂ ಮಾತ್ರ ಶೋಷಣೆಗೆ ಒಳಗಾಗಿದ್ದಲ್ಲ ಬುಡಕಟ್ಟು ಸಮುದಾಯಗಳು, ಇತರ ಸಮುದಾಯಗಳಲ್ಲಿಯ ಶೋಷಣೆಗಳನ್ನು ಕಾಣುತ್ತೇವೆ, ಬಿ.ಜಿ.ಎಲ್. ಸ್ವಾಮಿಯವರು ರಚಿಸಿದ ಕೃತಿಯ ಭಾಗದಲ್ಲಿ, ಪತ್ರಿಕೆಯಲ್ಲಿ ಪ್ರಕಟವಾದ ಒಂದು ಭಾರತದ ಆರ್ಥಿಕ ವ್ಯವಸ್ಥೆಯ ಚಿತ್ರಣ ತಿಳಿಸುವಾಗ 70 ಕೋಟಿ ಜನಸಂಖ್ಯೆಗೆ ಬೇಕಾದಷ್ಟು ಸಂಪನ್ಮೂಲ ಭಾರತದಲ್ಲಿದೆ ಅದರೆ ಕೇವಲ 7 ಜನರ ಕಪಿಮುಷ್ಟಿಯಲ್ಲಿದೆ ಎನ್ನುವ ಅಂಶದ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ,  ಅದ್ದರಿಂದ ಚಲನ ಶೀಲತೆ ಎನ್ನುವ ಅಂಶವನ್ನು ಇಟ್ಟುಕೊಂಡ ರಚಿಸಿದ ಈ ಕೃತಿ ಉತ್ತಮ ಕೃತಿಯಾಗಿ ಹೊರ ಹೊಮ್ಮಲಿ, ಪುಸ್ತಕದ ವಿಷಯವಸ್ತು ಅದು ಬೆಳಕಿಗೆ ಬರುವಂತೆ ಮಾಡುತ್ತದೆ ಎಂದರು..
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ. ಹುಚ್ಚು ಸಾಬ್ ಪ್ರಾಂಶುಪಾಲರು ಮಾತನಾಡಿ ವಿದ್ಯೆಯಿಂದ ಉನ್ನತಸ್ಥಾನ ಸಿಗಲು ಸಾಧ್ಯ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ವಿನಯಶೀಲತೆ ಬೆಳೆಸಿಕೊಂಡು ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ, ಪ್ರಜಾವಾಣಿಯಂತ ಪತ್ರಿಕೆಯಲ್ಲಿ ರಾಜಕೀಯ ನಾಯಕರು ಬಳಸುವ ಭಾಷೆಯ ಬಗ್ಗೆ ಖೇಧ ವ್ಯಕ್ತಪಡಿಸಿದು ಕಂಡಾಗ ನಾವು ನಮ್ಮ ಸಂಸ್ಕಾರವನ್ನು ಮರೆಯುತ್ತಿದ್ದೇವೆ, ಇದಕ್ಕೆ ಕಾರಣ ಜ್ಞಾನಾರ್ಜನೆಯ ಕೊರತೆ, ಹಿಂದೆ ಡಾ. ಬಿ.ಅರ್. ಅಂಬೇಡ್ಕರ್ ನಿರಂತರ ಓದಿನಿಂದ ಉನ್ನತಸ್ಥಾನಕ್ಕೇರಿದರು ಇಡೀ ಜಗತ್ತೇ ಅವರನ್ನು ಗುರುತಿಸುತ್ತದೆ, ಗೌರವಿಸುತ್ತದೆ, ಅಂದಿನ ರಾಜಕಾರಣಿಗಳು ಉತ್ತಮ ವಾಗ್ಮೀಗಳಾಗಿದ್ದರು ಕಾರಣ ಅವರು ಓದುತ್ತಿದ್ದರು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕನ್ನು ಸಾಗಿಸುತ್ತಿದ್ದರು, ಅದ್ದರಿಂದ ನಾವು ಉತ್ತಮ ಓದುಗರಾಗಬೇಕು ಎಂದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಬಿ.ಸಿ. ಶಿವಪ್ಪ ಉಪನ್ಯಾಸ ನೀಡಿಶಿಕ್ಷಣದ ಮಹತ್ವ ತಿಳಿಸಿದರು, ಸಿ.ಡಿ.ಸಿ. ಸದಸ್ಯರಾದ ಜಿ. ವೀರೇಶ್ ಅವರು ಸಂಡೂರಿನಲ್ಲಿರುವ ಲೇಖಕರು, ಕವಿಗಳು, ಕನ್ನಡ ಪ್ರೇಮಿಗಳು ಓದಿನ ಗೀಳನ್ನು ತಿಳಿಸಿದರು. ಲೇಖಕರಾದ ಡಾ. ಗಂಗಮ್ಮ ವಿ ಮಡಿವಾಳರ ಸಂಡೂರಿನ ಪರಿಸರ ಮತ್ತು ಅದರಿಂದ ಪಡೆದುಕೊಂಡ ಅಂಶಗಳು ಮತ್ತು ಕೃತಿ ರಚನೆಯಲ್ಲಿಯ ಎಡರು ತೊಡರುಗಳನ್ನು ತಿಳಿಸಿ ಓದುವ ಬರೆಯುವ ಹವ್ಯಾಸ ಎಲ್ಲದಕ್ಕಿಂತಲೂ ಶ್ರೇಷ್ಠ , ಸಂಡೂರು ನನ್ನ ತವರೂರು ಅಗಿತ್ತು, ಕಾರಣ ಇಲ್ಲಿಯ ಜನ ಮತ್ತು ವಿದ್ಯಾರ್ಥಿಗಳ ಪ್ರೀತಿಯನ್ನು ಎಂದಿಗೂ ಮರೆಯಲಾರೆ, ಕಾರಣ ಕಷ್ಟದಲ್ಲಿ ಬಂದೆ ಸುಖದಿಂದ ಹೋಗುತ್ತಿದ್ದೇನೆ ಅಂತಹ ಉತ್ತಮ ಅಂಶಗಳನ್ನು ನನಗೆ ನೀಡಿದ್ದಾರೆ, ಪ್ರಾಂಶುಪಾಲರು ಉತ್ತಮ ವೇದಿಕೆಯನ್ನು ನೀಡಿ ನಮ್ಮನ್ನು ಬೆಳೆಸುವಂತಹ ಮಹತ್ತರ ಕಾರ್ಯ ಮಾಡಿದ್ದಾರೆ ಎಂದರು.
ಉಪನ್ಯಾಸಕ ಬಸವರಾಜ ಬಣಕಾರ್ ನಿರೂಪಿಸಿದರು, ವಿದ್ಯಾರ್ಥಿನಿಯರಾದ ಶಶಿಕಲಾ ಸಂಘಡಿಗರು ಪ್ರಾರ್ಥಿಸಿದರು, ಡಾ. ಅಂಬರೀಶ್ ಸ್ವಾಗತಿಸಿದರು, ವಿದ್ಯಾರ್ಥಿ ದೇವೇಂದ್ರಪ್ಪ ವಂದಿಸಿದರು, ದೊಡ್ಡಪ್ಪ, ಶ್ರೀಕಾಂತ, ಪಯಾಜ್, ಹಾಗೂ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.