ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಕೆ.ಎಸ್. ನಾಗರಾಜ- ಸಿ.ಎಂ. ಸಿಗ್ಗಾವಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ:3: ಸಂಡೂರು: ಸಮಾಜ ಸೇವೆಯೇ ನನ್ನ ಗುರಿ ಎನ್ನುವ ಮನೋಭಾವನೆ ಹೊಂದಿ ಸಾಮಾಜಿಕ ಕಳಕಳಿಯನ್ನು ಹಒಂದಿದವರು ಬಳ್ಳಾರಿ ಮಾಜಿ ಲೋಕಸಭಾ ಸದ್ಯರಾದ ದಿ. ಕೆ.ಎಸ್. ವೀರಭದ್ರಪ್ಪನವರು, ಪತಿಗೆ ತಕ್ಕ ಸತಿಯಾಗಿ ಸಂಸಾರದಲ್ಲಿ ಬಾಳ ಸಂಗಾತಿಯಾಗಿ ಜೊತೆಗೂಡಿದವರು ರತ್ನಮ್ಮನವರು. ತಂದೆ ತಾಯಿ, ಗುರು ಹಿರಿಯರ ಮಾರ್ಗದರ್ಶನದಂತೆ ನಡೆದು ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು ಕೆ.ಎಸ್. ನಾಗರಾಜ, ತಂದೆ ತಾಯಿಗಳ ಆಶೀರ್ವಾದ, ಮಾರ್ಗದರ್ಶನ ಮಕ್ಕಳಿಗೆ ದಾರಿದೀಪವಾಗಿ ಮಾತೋಶ್ರೀ ರತ್ನಮ್ಮನವರ ಹೆಸರಿನಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಬ್ಯಾಂಕಿಗೆ ಹಸ್ತಾಂತರ ಮಾಡಿದ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಸಿ.ಎಂ. ಸಿಗ್ಗಾವಿಯವರು ತಿಳಿಸಿದರು.
ಅವರು ಪಟ್ಟಣದ 11ನೇ ವಾರ್ಡಿನ ಎಲ್.ಬಿ. ಕಾಲೋಇಯ ಎಸ್.ಪಿ.ಎಸ್. ಬ್ಯಾಂಕ್ ಪಕ್ಕದಲ್ಲಿರುವ ನೂತನ ಕಟ್ಟಡ ರತ್ನಾ ದೀಪಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ ಬೀದಿ ವ್ಯಾಪಾರಿಗಳಿಗೆ ಅಗುವ ಅನ್ಯಾಯವನ್ನು ಸರಿಪಡಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದರ ಜೊತೆಗೆ ಬೀದಿ ವ್ಯಾಪಾರಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಕೆಲಸ ನಿರ್ವಹಿಸಿದರು. ತಂದೆಯಂತೆ ಮಗ ಕೆ.ಎಸ್. ನಾಗರಾಜರವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಲ್ಲಿ ಪ್ರಮುಖರು ಎಂದು ಸಿಗ್ಗಾವಿಯವರು ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ನಾಗರಾಜರವರು ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಜೀವನದಲ್ಲಿ ಮನೋರಂಜನೆ ಕಾರ್ಯಕ್ರಮಗಳು ಅತೀ ಅವಶ್ಯವಾಗಿದ್ದು ಸಂಗೀತವೆನ್ನುವುದು ಒಂದು ಟಾನಿಕ್ ಇದ್ದ ಹಾಗೆ ಸಂಗೀತಕ್ಕೆ ಎಂತಹವರನ್ನು ಅಕರ್ಷಿಸಿಸುವ ಶಕ್ತಿ ಇದೆ. ಮನಸ್ಸನ್ನು ನೆಮ್ಮದಿಗೆ ಶಾಂತಿಗೆ ಸಂಗೀತ ಕಾರ್ಯಕ್ರಮ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಂಗೀತ ಶಿಕ್ಷಕ ಟಿ.ವೆಂಕಟೇಶ್ ಹಾಗೂ ಸಹನಾ ಶಾಸ್ತ್ರಿಯವರು ಬಸವಣ್ಣ, ಚನ್ನಬಸವಣ್ಣ, ದ.ರಾಬೇಂದ್ರೇ, ಪುರಂದರದಾಸರು ಕನಕದಾಸರ , ಅಕ್ಕಮಹಾದೇವಿ ಸಂತ ಶಿಶುನಾಳ ಷರೀಫರ .ಹೆಚ್.ಎಸ್. ವೆಂಕಟೇಶಮೂರ್ತಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳನ್ನು ಹಾಡಿದರು, ಕೊಟ್ರೇಶ್ ಕ್ಯಾಸಿಯೋ, ಕಮ್ಮಾರು ಉಮೇಶ್ ಲಕ್ಷ್ಮೀಪುರ ಇವರ ತಬಲಾ ವಾದನ ಉತ್ತಮವಾಗಿತ್ತು. ಕಾರ್ಯಾನಿರ್ವಾಹಕ ಅಧಿಕಾರಿ ಎಂ.ಎಸ್. ರೇಣುಕಾ, ವ್ಯವಸ್ಥಾಪಕ ಕೆ. ಪ್ರಕಾಶ್, ಬ್ಯಾಂಕಿನ ಅಧಿಕಾರಿಗಳಾದ ಕುಮಾರ್, ವಿಜಯಲಕ್ಷ್ಮೀ ಮಳೇಮಠ , ಅಂಕಮನಾಳ್ ಕೊಟ್ರೇಶ್, ಕಾರ್ಯಕ್ಮರದಲ್ಲಿ ಸಿಬ್ಬಂದಿಯವರಾದ ಕರೂರ ಮಹಾದೇವಪ್ಪ, ವಿಶ್ವ, ಜಗದೀಶ್, ಪೂಜಾ ರಾಮಚಂದ್ರ ಮಸೂತಿ, ಅಲ್ಲದೆ 200ಕ್ಕೂ ಹೆಚ್ಚು ಶ್ರೋತೃಗಳು ಸಂಗೀತದ ರಸದೌತಣವನ್ನು ಸವಿದರು.