ಸಾಮಾಜಿಕ ಸೇವೆಗೆ ಆದ್ಯತೆ ನೀಡಿ:  ರಾಜೇಶ್ವರಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.09; ಕೇವಲ‌ ಸರ್ಕಾರವಷ್ಟೇ ಅಲ್ಲದೆ ಸಂಘಟನೆಗಳು ಸಹ ಜನಪರ ಕೆಲಸ ಮಾಡಬೇಕು ಎಂದು ಕಾರ್ಯ ನಡೆಸಲಿ ಎಂದು ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯಡು  ಹೇಳಿದ್ದಾರೆ.
ಅವರು ನಗರದಲ್ಲಿ ಮಾಜಿ ಸಚಿವ ಎಂ. ದಿವಾಕರ ಬಾಬು ಅವರ ೬೫ ನೇ ಜನ್ಮ ದಿನಾಚರಣೆಯ ಅಂಗವಾಗಿ  ವಾಲ್ಮೀಕಿ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಕೇಕ್ ಕತ್ತರಿಸಿ ಮಾತನಾಡುತ್ತಿದ್ದರು.
ನಾಯಕನ ಜನ್ಮ ದಿನವನ್ನು  ಸಮಾಜ ಮುಖಿ ಕಾರ್ಯಗಳನ್ನು ನಡೆಸುವ ಮೂಲಕ  ಆಚರಣೆಗೆ ಮುಂದಾಗಿದ್ದು ಶ್ಲಾಘನೀಯ, ದಿವಾಕರ ಬಾಬು ಅವರು ತಮ್ಮ ಆಡಳಿತ ಅವಧಿಯಲ್ಲಿ ನಗರದ  ಅಭಿವೃದ್ದಿಗೆ ಸಂಕಷ್ಟು  ಶ್ರಮಿಸಿದ್ದಾರೆ. ಅದಕ್ಕಾಗಿ ಅವರ ಮೇಲೆ ಜನತೆಗಿರುವ ಅಭಿಮಾನ ಸಾಕ್ಷಿಯಾಗಿದೆ ಎಂದರು.
ತಮ್ಮ ರಾಜಕೀಯ ಜೀವನಲ್ಲಿ ಎಂದಿಗೂ ಅಧಿಕಾರದ ದರ್ಪ ತೊರಿದವರಲ್ಲ, ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ.ಇವರಿಂದ ಇನ್ನೂ ನಗರದಲ್ಲಿ ಅಭಿವೃದ್ದಿ ಕಾರ್ಯಗಳು  ಕೈಗೊಳ್ಳಬೇಕಿದೆ ಎಂದರು.
ನಗರ ಪಾಲಿಕೆ  ಮಾಜಿ ಸದಸ್ಯ ಎಂ.ವಿವೇಕ್ ಮಾತನಾಡಿ  ಅಂದು ಸಿದ್ದರಾಮಯ್ಯನವರು  ಬೆಂಗಳೂರಿನಿಂದ ಬಳ್ಳಾರಿಗೆ ಕೈಗೊಂಡ ಪಾದಯಾತ್ರೆಯಲ್ಲಿ,  ಬಳ್ಳಾರಿ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು. ಇಂದು ರಾಹುಲ್ ಅವರ ಭಾರತ್  ಜೊಡೋ ಯಾತ್ರೆಯಲ್ಲಿಯೂ ತಮನ್ನು ತೊಡಗಿಸಿಕೊಂಡಿದ್ದರೆಂದರು.
ಕಾಂಗ್ರೆಸ್ ಮುಖಂಡ ಶೇಖರ್ ಮಾತನಾಡಿ  ಎಂ. ದಿವಾಕರ ಬಾಬು ರವರು ಅಂದಿನ ಅಕ್ರಮ ಗಣಿಗಾರಿಕೆಯ ವಿರೋಧಿಸಿ ಬೆಂಗಳೂರಿಗೆ ಬೈಕ್ ರ‍್ಯಾಲಿ, ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಮತ್ತು ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜೈಲುಪಾಲಾಗಿದ್ದ ಅಂದಿನ ದಿನಗಳು ಮರೆಯುಂತಿಲ್ಲ, ದಿಟ್ಟ ಹೋರಾಟಗಾರ  ನೇರ ಮಾತಿನ ನಾಯಕ ಇಂದಿಗೂ ಬಳ್ಳಾರಿ ಜನತೆಯ ಬಹಳಷ್ಟು ಅಭಿಮಾನವಿದ್ದು  ಜನಪರ ಕಾರ್ಯ ನಡೆಸುವ ಮೂಲಕ ಜನತೆಯ ಬಳಿ ತೆರಳುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಬೇವಿನ ಹಾಳ್ ಹನುಮಂತಪ್ಪ, ಪಾಲಿಕೆ ಸದಸ್ಯರುಗಳಾದ ರಾಮಾಂಜಿನೇಯಲು, ಗಾದೆಪ್ಪ,ಎಂ. ಪ್ರಭಂಜನ್, ವಿವೇಕ್, ಕುಬೇರ ,ರಾಜಶೇಖರ್,ಜಬ್ಬಾರ್, ಮಾಜಿ ಸದಸ್ಯ ಸರ್ಮಾಸ್, ಜಗನಾಥ, ಎರ‍್ರಿಸ್ವಾಮಿ, ಶಿಚರಾಜ್ ಹೆಗಡೆ, ದೇವಿನಗರ ಮಹಮ್ಮದ್, ಚಾಂದ್ ಭಾಷ,ವೇಣುಗೋಪಾಲ್,ತೇಜಾ, ಸಗೀರ್ ಅಹಮ್ಮದ್,ಶಿವರಾಮ ಕೃಷ್ಣ,ತರುಣ್, ಅಬ್ಥುಲ್,ಅನ್ವರ ಭಾಷ.ಸೂರಿ,ಸೀನಾ,ಇರ್ಪಾನ್ ಪಠಾಣ ಸೇರಿದಂತೆ ಇನ್ನಿತರು ಭಾಗವಹಿಸಿದ್ದರು,¸