ಸಾಮಾಜಿಕ ಸುಧಾರಣೆಗೆ ಕನ್ನಡ ಶಾಲೆಗಳೇ  ಅಡಿಪಾಯ  – ಶಾಸಕ ಡಾ. ಶ್ರೀನಿವಾಸ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.3 :- ಸರ್ಕಾರಿ  ಕನ್ನಡ ಶಾಲೆಗಳು  ಸಾಮಾಜಿಕ ಸುಧಾರಣೆಯ ಅಡಿಪಾಯವಿದ್ದಂತೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಗುಡ್ಡದ ಬೋರಯ್ಯನಹಟ್ಟಿಯ   ರಸ್ತೆ ಪಕ್ಕದಲ್ಲಿದ್ದ ಶಾಲೆಗೆ ತಕ್ಷಣ  ಕಾರು ನಿಲ್ಲಿಸಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೇ ನಡೆಸಿ  ಮಾತನಾಡಿದ ಶಾಸಕರು ಕೂಡ್ಲಿಗಿ  ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ತರದಂತೆ  ಕನ್ನಡದ  ಬಗ್ಗೆ ಅಭಿಮಾನ, ಪ್ರೀತಿ, ವಾತ್ಸಲ್ಯ ಬೆಳೆಸಿಕೊಂಡು ಕನ್ನಡ ಶಾಲೆಗಳನ್ನು ಉಳಿಸಿ  ಬೆಳೆಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದ  ಶಾಲೆಗಳಿಗೆ ಭೇಟಿ ನೀಡಿದ ಕಡೆ ಶಾಸಕರು ಕನ್ನಡ ಶಾಲೆ ಉಳಿಸುವಂತೆ ಮನವಿ ಮಾಡಿ ನಾವಿರುವ ಕಡೆ  ಸಾಮಾಜಿಕ ಸುಧಾರಣೆಯಾಗಬೇಕಾದರೆ  ಕನ್ನಡ ಶಾಲೆಗಳು ಮುಖ್ಯವಾದ  ಅಡಿಪಾಯ  ಎಂಬುದನ್ನು ಜನರು ಅರಿತುಕೊಳ್ಳುವಂತೆ  ತಿಳಿಸಿದರು.
ಗಡ್ಡದ ಬೋರಯ್ಯನಹಟ್ಟಿ  ಸರಕಾರಿ ಶಾಲೆಗೆ ಭೇಟಿ ನೀಡಿದ ಶಾಸಕರು ಶಾಲೆಯ  ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಡುಗೆ ಸಹಾಯಕರ ಯೋಗ ಕ್ಷೇಮ ವಿಚಾರಿಸಿ  ಮೂಲ ಭೂತ ಸೌಕರ್ಯಗಳನ್ನು ಪಟ್ಟಿಮಾಡಿಕೊಂಡು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು. ‌
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಮಂಗಳಮ್ಮ, ವಿ ಗ್ರಾ. ಪಂ. ಅಧ್ಯಕ್ಷರಾದ ಪೆದ್ದ ಮಲ್ಲಯ್ಯ ,ವಿದ್ಯಾರ್ಥಿಗಳು ಇದ್ದರು.