ಸಾಮಾಜಿಕ ಸಾಮರಸ್ಯದಿಂದ ಕುಟುಂಬ, ಸಮಾಜದ ಪ್ರಗತಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಆ.22: ಸಾಮಾಜಿಕ ಸಾಮರಸ್ಯದಿಂದ ಕುಟುಂಬ, ಸಮಾಜ ಮತ್ತು ರಾಷ್ಟçದ ಪ್ರಗತಿ ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ  ಆಯೋಜಿಸಿದ್ದ ರಾಷ್ಟಿçÃಯ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಭಾರತ ವಿವಿಧ ಆಚರಣೆ, ಧರ್ಮ, ಭಾಷೆಗಳ ನೆಲೆವೀಡಾಗಿದ್ದು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟçವಾಗಿದೆ. ಪ್ರತಿಯೊಬ್ಬರೂ ಪರಸ್ಪರರ ಆಚರಣೆ, ಭಾಷೆಗಳಿಗೆ ಗೌರವ ನೀಡುವುದರಿಂದ ಸಮಾಜದಲ್ಲಿ ಸಾಮರಸ್ಯ ಭಾವನೆ ಮೂಡುತ್ತದೆ. ಭಾವನೆಗಳ ಐಕ್ಯತೆಯಿಂದ ರಾಷ್ಟçದ ಪ್ರಗತಿಯಾಗುವುದರಿಂದ ಶಾಲಾ ಹಂತದಲ್ಲಿ ಶಿಕ್ಷಕರು ಮಹಾತ್ಮರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ರಾಷ್ಟಿçÃಯ ಏಕತೆಯ ಮಹತ್ವವನ್ನು ತಿಳಿಸಬೇಕು. ಸದ್ಭಾವನೆ, ಸೌಹಾರ್ದತೆ ಮನೋಭಾವನೆ ಧನಾತ್ಮಕ ಚಿಂತನೆ ಬೆಳೆಸಬೇಕು ಎಂದರು. ಉಪನ್ಯಾಸಕ ಎಸ್,ಬಸವರಾಜು ಪ್ರತಿಜ್ಞಾವಿಧಿ ಬೋಧಿಸಿದರು.ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶಪ್ಪ, ಹೆಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಕೆ.ಜಿ.ಪ್ರಶಾಂತ್, ಯು.ಸಿದ್ದೇಶಿ, ವಿ.ಕನಕಮ್ಮ, ಬಿ.ಎಸ್.ನಿತ್ಯಾನಂದ, ಎನ್.ಮಂಜುನಾಥ್, ಕಚೇರಿ ಅಧೀಕ್ಷಕರಾದ ಗೀತಾ, ಪ್ರಥಮ ದರ್ಜೆ ಸಹಾಯಕ ಮಂಜುನಾಥ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಇದ್ದರು.