ಸಾಮಾಜಿಕ ಸಮಾನತೆಗೆ ಮಾಧ್ಯಮಗಳು ಒತ್ತು ನೀಡಲಿ: ಮಾಜಿ ಸಚಿವ ಎಸ್.ಕೆ.ಕಾಂತಾ

ಕಲಬುರಗಿ,ಸೆ.17:ಮಾಧ್ಯಮಗಳು ಯಾರ ಮನಸ್ಸನ್ನು ನೋಯಿಸದೇ ಸಾಮಾಜಿಕ ಸಮಾನತೆಗೆ ಒತ್ತು ನೀಡುವಂತಹ ವರದಿಗಳನ್ನು ಪ್ರಸಾರ ಮಾಡಬೇಕೆಂದು ಮಾಜಿ ಸಚಿವ ಎಸ್.ಕೆ.ಕಾಂತಾ ಹೇಳಿದರು.
ಕಲಬುರಗಿ ನಗರದ ಜನತಾ ಲೇಔಟ್‌ನಲ್ಲಿ ನೂತನ ರೇ ನ್ಯೂಸ್‌ವಾಹಿನಿ ಹಾಗೂ ಪತ್ರಿಕೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ವರಿಗೂ ಸಮಾನ ಅವಕಾಶಗಳು ದೊರಕುವಂತಹ ಸಮಾಜ ನಿರ್ಮಾಣವಾಗಬೇಕು. ಇಡೀ ದಿನ ಯಾರದೋ ವಯಕ್ತಿಕ ಬದುಕಿನ ಅಸಹ್ಯಗಳನ್ನು ಪದೇ ಪದೇ ತೋರಿಸುವುದನ್ನು ಬಿಡಬೇಕು. ಮಾಧ್ಯಮಗಳು ಅಭಿವೃದ್ಧಿಪರ ವರದಿಗಳನ್ನು ಪ್ರಕಟಿಸಬೇಕೆಂದರು.
ಇದೇ ವೇಳೆ, ರೇ ನ್ಯೂಸ್‌ವಾಹಿನಿಯ ಸ್ಟುಡಿಯೋವನ್ನು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು. ಇದ್ದದ್ದನ್ನು ಇದ್ದ ಹಾಗೇ ಟಿವಿಗಳು ಹಾಗೂ ಪತ್ರಿಕೆಗಳು ವರದಿಗಳನ್ನು ಪ್ರಕಟಿಸಬೇಕು. ವೈಭವಿಕರಿಸುವುದಾಗಲೀ ಅಥವಾ ತೇಜೋವಧೆ ಮಾಡುವ ವರದಿಗಳನ್ನು ಮಾಡುವುದು ಸರಿಯಲ್ಲ. ಸಮಾಜದ ಸರ್ವರ ಒಳಿತಿಗಾಗಿ ಮಾಧ್ಯಮಗಳು ಕೆಲಸಮಾಡಬೇಕು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಮಾಧ್ಯಮಗಳಿಗೆ ಯಾವಾಗಲೂ ಬೆಂಬಲವಾಗಿರುತ್ತವೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.
ವಿಧಾನ ಪರಿಷತ್‌ಸದಸ್ಯರಾದ ಶಶೀಲ್‌ಜಿ. ನಮೋಶಿ ಮಾತನಾಡಿ, ನಾಡಿನ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಅಪಾರ ಎಂದು ಬಣ್ಣಿಸಿದರು.
ಸಿಮ್‌ಔಟ್‌ಲೇಯರ್‌ಮೀಡಿಯಾ ಸಂಸ್ಥೆಯ ನಿರ್ದೇಶಕರಾದ ಸಂಗಮೇಶ ಮಹಾಗಾಂವಕರ್‌, ಮಹ್ಮದ್ ಮೈನುದ್ದೀನ್‌‌, ಪ್ರಧಾನ ಸಂಪಾದಕ ಜಗದೀಶ್‌ಕುಂಬಾರ, ಸುರೇಶ್‌ಬುಲ್‌ಬುಲೆ, ಸಂಪತ್‌ಗಿಲ್ಡಾ, ಇಷ್ಟಲಿಂಗಪ್ಪ ಮಹಾಗಾಂವಕರ್‌, ಪ್ರಭುಲಿಂಗ ಮಹಾಗಾಂವಕರ್‌, ಮಹಾಲಿಂಗ ಮಹಾಗಾಂವಕರ್‌, ಶಿವಲಿಂಗಪ್ಪ ಮಹಾಗಾಂವಕರ್‌, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ್‌, ಅರುಣಕುಮಾರ ಪಾಟೀಲ್‌ಕೊಡಲಹಂಗರಗಾ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಚಂದ್ರಶೇಖರ ಪರಸರೆಡ್ಡಿ, ವೀರಶೆಟ್ಟಿ ಖೇಣಿ, ಸುನೀಲ್‌ಪಾಟೀಲ್‌ಸರಡಗಿ, ಅಂಕುಷ್‌ ಶಿವಕಾಂತ ಮಹಾಜನ್‌, ಮಂಜುರೆಡ್ಡಿ ಪಾಟೀಲ್‌, ಪರ್ತಕರ್ತರಾದ ಅಕ್ರಮ ಪಾಷಾ ಮೋಮಿನ್‌, ನಿರೂಪಕಿ ಸಂಗೀತಾ, ಕಿಶೋರಕುಮಾರ ಖಮೀತಕರ್‌, ಜಗನ್ನಾಥ ರೆಡ್ಡಿ ಸೇರಿದಂತೆ ಇತರರು ಇದ್ದರು.
ಚಿತ್ರ ೧ : ಕಲಬುರಗಿ ನಗರದ ಜನತಾ ಲೇಔಟ್‌ನಲ್ಲಿ ರೇ ನ್ಯೂಸ್‌ಚಾನಲ್‌ಕಚೇರಿಯನ್ನು ಮಾಜಿ ಸಚಿವ ಎಸ್.ಕೆ.ಕಾಂತಾ ಉದ್ಘಾಟಿಸಿದರು.
ಚಿತ್ರ: ೨ ಕಲಬುರಗಿ ನಗರದ ಜನತಾ ಲೇಔಟ್‌ನಲ್ಲಿ ರೇ ನ್ಯೂಸ್‌ಚಾನಲ್‌ಸ್ಟುಡಿಯೋವನ್ನು ಸಂಸದರಾದ ಡಾ.ಉಮೇಶ ಜಾಧವ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಎಂಎಲ್ಸಿ ಶಶೀಲ್‌ನಮೋಶಿ ಸೇರಿದಂತೆ ಇತರರಿದ್ದರು.