ಸಾಮಾಜಿಕ ಲೆಕ್ಕ ವರದಿಗಳು ಕಸದ ಬುಟ್ಟಿಗೆ

ನರೇಗಾ ಯೋಜನೆ: ಹಣ ದುರ್ಬಳಕೆ-ತನಿಖೆಗೆ ಒತ್ತಾಯ
ಲಿಂಗಸುಗೂರು.ನ.19- ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಲೆಕ್ಕ ಪರಿಶೋಧನ ಸಮಿತಿ ನೀಡಿರುವ ವರದಿಗಳ ಮೇಲೆ ಕ್ರಮ ಕೈಗೊಳ್ಳುಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ) ಜಿಲ್ಲಾ ಸಮಿತಿಯವರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾ ಮುಖ್ಯಕಾರ್ಯನಿಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯ ತಾಲೂಕುಗಳಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ, ಅರಣ್ಯ ಕೃಷ್ಣ ಭಾಗ್ಯ ಜಲ ನಿಗಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಯೋಜನೆ ಅನುಷ್ಟಾನ ಹೆಸರಿನಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿರುವುದು ಆಯಾ ತಾಲ್ಲೂಕ ಮಟ್ಟದ ಲೆಕ್ಕಪರಿಶೋಧನ ಸಮಿತಿಯವರು ಹಲವು ವರ್ಷಗಳಿಂದ ವರದಿ ಸಲ್ಲಿಸುತ್ತ ಬಂದಿದೆ. ನರೇಗಾ ಯೋಜನೆ ಕೃಷಿ ಕೂಲಿ ಕಾರ್ಮಿಕರನ್ನು ನಿರುದ್ಯೋಗಿಗಳು, ಗ್ರಾಮೀಣ ಕೃಷಿ ಜಂತರ್ಜಲ, ಜಾನುವಾರು ಸಾಗಾಣಿಕೆ ಸೇರಿದಂತೆ ಇತರ ಅಭಿವೃದ್ಧಿಗೆ ಆಶಾದಾಯಕ ಯೋಜನೆಯಾಗಿ ಅನುಷ್ಠಾನಗೊಂಡಿದ್ದು.
ಉದ್ಯೋಗ ಖಾತ್ರಿಯಲ್ಲಿ ಅನುಮೋದಿತ ಕ್ರಿಯಾ ಯೋಜನೆ 8 & 9 ನಮೂನೆ, ಕಡತಗಳ ನಿರ್ವಹಣೆ, ಎಂ.ಬಿ. ಪ್ರತಿ ನಿರ್ವಹಣೆ ವೈಫಲ್ಯ, ಆಡಳಿತದಲ್ಲಿ ತಾಂತ್ರಿಕ ಮಂಜೂರಾತಿ ಮಾಡದಿರುವ ಕಾಮಗಾರಿಗಳ ಮೂರು ಹಂತದ ಕಡತಗಳ ನಿರ್ವತನ, ಕಾಮಗಾರಿ ಆರಂಭ ಆದೇಶ, ಮುಕ್ತಾಯದ ಪ್ರಮಾಣ ಪಶ, ಅಂದಾಜು ಪತ್ರಿಕೆ ಕಡತ ಸೇರಿದಂತೆ ಅಗತ್ಯ ಕಡತಗಳ ನಿರ್ವಹಣೆ ವೈಫಲ್ಯತೆ ಹಾಗೂ ಸ್ಥಳ ಪರಿಶೀಲನೆ ಮಾಡುವಲ್ಲಿ ವಾಸ್ತವ ವರದಿ ಸಲ್ಲಿಸುತ್ತ ಬಂದಿದ್ದರೂ ಕೂಡ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಾಮಾಜಿಕ ಲೆಕ್ಕ ಮಂಶೋಧನ ವರದಿಗಳು ಕಸದ ಬುಟ್ಟಿ ಸೇರುತ್ತಿದೆ. ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಆಧರಿಸಿ ಲಿಂಗಸುಗೂರು ಸೇರಿದಂತೆ ಜಿಲ್ಲೆಯಾದ್ಯಂತ ಯೋಜನೆಗಳ ಹಣ ದುರ್ಬಳಕೆ ಆಗಿರುವ ಮತ್ತು ಆಗುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು,
ಶ್ಯಾಮಿಲಾದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡ ಸಿಬ್ಬಂದಿ ಮತ್ತು ಪಲಾನುಭವಿಗಳ ವಿರುದ್ದ ಕ್ರೀಮಿನಲ್ ಮೊಕದ್ದಮೆ ದಾಖಲಿಸದೆ ಹೋದರೆ ದಾಖಲೆ ಸಮೇತ ಎ,ಸಿ,ಬಿ. ಗೆ ದೂರು ಸಲ್ಲಿಸಲಾಗುವುದೆಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕ ಸಂಚಾಲಕ ನಾಗರಾಜ ಹಾಲಭಾವಿ, ಅಕ್ರಂಪಾಷ, ಅಮರೇಶ ಹೊಸಮನಿ, ಪರಶುರಾಮ ಜಾವೂರು, ಮೌನೇಶ ಗುಡದನಾಳ, ಯಲ್ಲಪ್ಪ ಹಾಲಭಾವಿ, ಕೋರೆಪ್ಪ ಗುಡಿಜಾವೂರು, ಹುಸೇನಪ್ಪ ತರಾಕಾರಿ, ಗ್ಯಾನಪ್ಪ ಮಟ್ಟೂರು, ಬಸವರಾಜ ಯುಕೆಪಿ ಸೇರಿದಂತೆ ಇತರರು ಇದ್ದರು.