ಸಾಮಾಜಿಕ ಮೌಲ್ಯಗಳು ವಿದ್ಯಾರ್ಥಿ ಹಂತದಲ್ಲಿಯೇ ತಿಳಿಯುವುದು ಸೂಕ್ತ- ಮೆಹತಾಬ್.

ಸಂಜೆವಾಣಿ ವಾರ್ತೆ
ಸಿರುಗುಪ್ಪ ಡಿ 04 : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಲ್ಲಿಯೇ ಸಾಮಾಜಿಕ ಮತ್ತು ವೈಯಕ್ತಿಕ ಸೇವಾ ಮನೋಭಾವನೆಯ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯವು ನಿಟ್ಟಿನಲ್ಲಿ ಮುಂದಾಗುವಂತೆ ಸನ್ಮಾರ್ಗದ ಸಂಪನ್ಮೂಲ ವ್ಯಕ್ತಿ ಮುಖ್ಯಗುರು ಮೆಹತಾಬ್ ತಿಳಿಸಿದರು.
  ತಾಲೂಕಿನ ಪದವಿಪೂರ್ವ ಕಾಲೇಜಿನಲ್ಲಿ ಸನ್ಮಾರ್ಗ ಗೆಳೆಯರ ಬಳಗ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಮಾತನಾಡಿ, ಜಾಗತಿಕರಣದ ವೇಗದಲ್ಲಿ ಮಕ್ಕಳ ಹಂತದಿಂದಲೇ ಮಾನವಿಯತೆ ಮತ್ತು ಸಂಬಂಧಗಳ ಬಗ್ಗೆ ಪೋಷಕರು ಸಹ ಮಕ್ಕಳಲ್ಲಿ ಉತ್ತಮ ಮಾನೋಭವನೆ ಮೂಡಿಸುವ ಮೂಲಕ ದೇಶವನ್ನು ವಸುದೈವ ಕುಟುಂಬ ಎನ್ನುವ ಸೂತ್ರವನ್ನು ಇಂದಿನ ಮಕ್ಕಳಿಗೂ ಸಹ ಉತ್ತಮ ರೀತಿಯಲ್ಲಿ ತಿಳಿಸುವ ಮೂಲಕ ಮನೆಯಲ್ಲಿನ ಸಂಬಂಧಗಳಿಗೆ ಗೌರವ ನೀಡಿವುದನ್ನು ಕಲಿತಲ್ಲಿ ಸ್ವಯಂ ಪ್ರೇರಿತವಾಗಿ ಸಮಾಜದಲ್ಲಿನ ಹಿರಿಯರಿಗೆ ಗೌರವ ಸಲ್ಲಿಸುವ ಪರಿಪಾಠವನ್ನು ಕಲಿಯಲು ಸಹಕಾರಿಯಾಗಲಿದೆ ಎಂದು ತಿಳಿಸಿದ ಅವರು, ಅಮ್ಮನ ಮಹತ್ವದ ಬಗ್ಗೆ ಕಥೆಯೊಂದನ್ನು ತಿಳಿಸುವ ಮೂಲಕ ಭಾವನಾತ್ಮಕ ಸಂಬಂಧಗಳ ಬಗ್ಗೆ ತಿಳಿಸಿಕೊಟ್ಟರು.
ಸಿಪಿ.ಐ ಟಿ.ಆರ್.ಪವಾರ್ ಮಾತನಾಡಿ, ಮಕ್ಕಳು ಆಭ್ಯಾಸ ವೇಳೆಯಲ್ಲಿ ಮೊಬೈಲ್ ಆಟಗಳಿಗೆ ಬಲಿಯಾಗದೆ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಕಾನೂನು ವಿರುದ್ಧವಾಗಿ ವಾಹನ ಚಲಾವಣೆ ಸೇರಿದಂತೆ ಇತರೆ ಕಾನೂನು ವಿರುದ್ಧ ಚಟುವಟಿಕೆಗಳಿಂದ ದೂರ ಇದ್ದು ಶಿಕ್ಷಣದ ಕಡೆ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
 ಖ್ಯಾತ ಹಾಸ್ಯ ಕಲಾವಿದ ಶಿಕ್ಷಕ ಎರ್ರಿಸ್ವಾಮಿ ತಮ್ಮ ಹಾಸ್ಯದ ಮೂಲಕ ಮಾನವೀಯ ಮೌಲ್ಯಗಳ ಜತೆಗೆ ವಿದ್ಯಾರ್ಥಿಗಳನ್ನು ನಗುವಿನ ಅಲೆಯಲ್ಲಿ ತೆಲುವಂತೆ ಮಾಡಿದರು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ವೀರೇಶಪ್ಪ, ಸನ್ಮಾಗದ ಕಾರ್ಯದರ್ಶಿ ಚಂದ್ರಶೇಖರ್ ಅಚಾರಿ, ಸನ್ಮಾರ್ಗದ ಸದಸ್ಯರಾದ ಸತ್ಯನಾರಾಯಣ, ಬಸವರಾಜ ಸೇರಿದಂತೆ ನೂರಾರು ವಿದ್ಯಾರ್ತಿಗಳು ಇದ್ದರು.
 ತೆಕ್ಕಲಕೋಟೆ ಪ್ರೌಢಶಾಲೆಯ ಪರೀಕ್ಷಾ ಪೂರ್ವ ಸಿದ್ದತೆ ಕುರಿತು ಕಾರ್ಯಗಾರ: ಸನ್ಮಾರ್ಗ ಗೆಳೆಯರ ಬಳಗದಿಂದ ತೆಕ್ಕಲಕೋಟೆಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪೂರ್ವ ಸಿದ್ದತಾ ಕಾರ್ಯಗಾರವನ್ನು ಪಿಎಸ್‍ಐ ಶಿವಕುಮಾರನಾಯ್ಕ್ ಉದ್ಘಾಟಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾನೂನಿನ ಸಾಮಾನ್ಯ ಜ್ಞಾನವನ್ನು ಅರಿತುಕೊಳ್ಳುವ ಮೂಲಕ ಸಮಾಜವನ್ನು ಉತ್ತಮ ಸಂಬಂಧಗಳ ಸಮಜವನ್ನಾಗಿ ನಿರ್ಮಿಸುವತ್ತ ಗಮನ ಹರಿಸಿ ಎಂದು ತಿಳಿಸಿದರು.
  ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉತ್ತಮ ಅಂಕಗಳಿಕೆಗೆ ಓದಿನ ಶೈಲಿಯ ಕುರಿತು ಮೆಹಾತಬ್ ಮಾಹಿತಿ ನೀಡಿದರೆ, ಹಾಸ್ಯ ಕಲಾವಿದ ಶಿಕ್ಷಕ ಎರ್ರಿಸ್ವಾಮಿಯವರಿಗೆ ಹಾಸ್ಯದ ಜತೆ ಮಾನವೀಯ ಮೌಲ್ಯಗಳ ಮಾಹಿತಿ ನೀಡಿದರು.
ಈ ವೇಳೆ ಪ್ರೌಡಶಾಲೆಯ ಮುಖ್ಯಗುರು ಭಾಗ್ಯಲಕ್ಷ್ಮೀ, ನಿವೃತ್ತ ಹಿಂದಿ ಶಿಕ್ಷಕ ಅಜಾದ್, ಸನ್ಮಾರ್ಗದ ಕಾರ್ಯದರ್ಶಿ ಚಂದ್ರಶೇಖರ್‍ಅಚಾರಿ, ಸದಸ್ಯರಾದ ಬಸವರಾಜ ಇದ್ದರು ಕಾರ್ಯಕ್ರಮವನ್ನು  ಶಿಕ್ಷಕ ಸತ್ಯನಾರಾಯಣ ನಿರ್ವಹಿಸಿದರು.