ಸಾಮಾಜಿಕ ಬದ್ದತೆ ಮೆರೆದ ಪಿಎಸ್‌ಐ ಸುನೀಲ್

ಬಂಗಾರಪೇಟೆ.ಅ೧೨: ಬೂದಿಕೋಟೆ ಯಿಂದ ಗುಲ್ಲಹಳ್ಳಿ ಹೋಗುವ ರಸ್ತೆ ಬದಿಯಲ್ಲಿ ಗಿಡಗಂಟೆಗಳು ಅತಿ ಹೆಚ್ಚು ಬೆಳೆದಿದ್ದ ಹಿನ್ನೆಲೆ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆ ಪಿಎಸ್‌ಐ ಸುನಿಲ್ ರವರು ಜೆಸಿಬಿ ಮುಕಾಂತರ ಗಿಡಗಂಟೆಗಳನ್ನು ಕಾರ್ಯಾಚರಣೆಯನ್ನು ಮಾಡಿ ತೆರವು ಮಾಡುವ ಮೂಲಕ ಸಾಮಾಜಿಕ ಬದ್ಧತೆ ಮೆರೆದರು.
ತಾಲೂಕಿನ ಗುಲ್ಲಹಳ್ಳಿ ಹೋಗುವ ರಸ್ತೆ ಬದಿಯಲ್ಲಿ ಯಥೇಚ್ಛವಾಗಿ ಗಿಡಗಂಟೆಗಳು ಬೆಳೆದ ಹಿನ್ನೆಲೆ ರಸ್ತೆ ತಿರುವುಗಳಲ್ಲಿ ವಾಹರಸವರರಿಗೆ ಮುಂದೆ ಬರುವ ವಾಹನಗಳು ಕಾಣಿಸದೆ ಇರುವುದರಿಂದ ಮೊನ್ನೆಯಷ್ಟೇ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿದ್ದ, ಇಂದು ಸಹ ದ್ವಿಚಕ್ರ ವಾಹನ ಸವಾರ ಸಂಚರಿಸುವ ವೇಳೆ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾನೆ. ಇದನ್ನು ಗಮನಿಸಿದ ಬೂದಿಕೋಟೆಯ ಪಿಎಸ್‌ಐ ಸುನಿಲ್ ರವರು ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದೆ ಎಂದು ರಸ್ತೆ ಬದಿಯಲ್ಲಿ ಇದ್ದಾಗ ಗಿಡಗಂಟೆಗಳನ್ನು ಅವರೇ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಮುಖಾಂತರ ರಸ್ತೆ ಉದ್ದಕ್ಕೂ ಗಿಡಗಂಟೆಗಳನ್ನು ತೆರವುಗೊಳಿಸಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಪಿಎಸ್‌ಐ ರವರ ಕಾರ್ಯ ವೈಖರಿಯನ್ನು ಮೆಚ್ಚಿ ಧನ್ಯವಾದಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಯಾದ ಮುನಿಕೃಷ್ಣ ,ಮೊದಲಾದವರು ಇದ್ದರು.