ಸಾಮಾಜಿಕ ಬದಲಾವಣೆಯ ಹರಿಕಾರ ಜಗಜೀವನರಾಮ : ಸೂಗುರ ಶ್ರೀ

ಕಾಳಗಿ : ಎ.11:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆದ್ಯತೆ ಕೊಡುವ ಮೂಲಕ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರ ಮಾಡಿ ಸಮಾಜಿಕ ಬದಲಾವಣೆ ಮಾಡಿದ ಕೀರ್ತಿ ಡಾ. ಬಾಬು ಜಗಜೀವನರಾಮ ಅವರಿಗೆ ಸಲ್ಲುತ್ತದೆ ಎಂದು ಸೂಗುರ(ಕೆ) ಪೂಜ್ಯ ಡಾ. ಚೆನ್ನರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.

 ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟದಲ್ಲಿ ಡಾ. ಬಾಬು ಜಗಜೀವನರಾಮ ಜಯಂತೋತ್ಸವ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡ ಜಗಜೀವನರಾಮ ಜಯಂತಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
  ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್‍ರ ಬದುಕು ತಿಳಿಸಿ ಕೊಡುತ್ತದೆ. ಬಾಬುಜೀ ಎಂದೇ ಹೆಸರಾಗಿದ್ದ ಜಗಜೀವನರಾಮ್ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳುವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅವರು ಮೂರು ದಶಕಗಳ ಕಾಲ ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ಅಪಾರ ಆಡಳಿತ ಅನುಭವ ಗಳಿಸಿದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದು ಎಂದರು.
 ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಜಗಜೀವನರಾಮ್ 1935ರಲ್ಲಿ ಮೊದಲ ಚುನಾವಣೆ ನಡೆದಾಗ ನಿರ್ಣಾಯಕ ಪಾತ್ರ ವಹಿಸಿದರು. ಕೋಲ್ಕತ್ತಾ ಮತ್ತು ಬನಾರಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ದೇಶದ ಹಸಿರು ಕಾಂತ್ರಿಗೆ ಬುನಾದಿ ಹಾಕಿದರು. ಶಿಕ್ಷಣದಿಂದಲೇ ಸಮಾಜದ ಬದಲಾವಣೆ ಸಾಧ್ಯವೆಂದು ಬಲವಾಗಿ ನಂಬಿದ್ದರು ಎಂದು ಹೇಳಿದರು.
 ಇದಕ್ಕೂ ಮೊದಲು ಡಾ. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಡಾ. ಬಾಬು ಜಗಜೀವನರಾಮ ಮೆರವಣಿಗೆಗೆ ಸಿಪಿಐ ವಿನಾಯಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಯರ ಹಲಗೆ ನಾದ, ಯುವಕರ ನೃತ್ಯ ಗಮನ ಸೆಳೆಯಿತು.
 ಹಂಪಿ ಮಾತಂಗ ಪರ್ವತದ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಜಿ ಆಶೀರ್ವಚನ ನೀಡಿದರು. ಮಾದಿಗ ಸಮಾಜ ಮುಖಂಡ ಗೋಪಾಲರಾವ ಕಟ್ಟಿಮನಿ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಸಾವಾರರ್ಕರ್ ಮಾತನಾಡಿದರು.
 ಸಂಸದ ಡಾ. ಉಮೇಶ ಜಾಧವ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ಮಾಜಿ ಜಿಪಂ ಸದಸ್ಯ ರಾಜೇಶ ಗುತ್ತೇದಾರ, ಮಲ್ಲಿನಾಥ ಪಾಟೀಲ ಕಾಳಗಿ, ಜಯಂತೋತ್ಸವ ಸಮಿತಿ ಅಧ್ಯಕ್ಷ ಹರಿಶ ಸಿಂಗೆ, ಸುಂದರ ಡಿ. ಸಾಗರ, ಶಾಮ ನಾಟೀಕಾರ, ದಶರಥ ಕಲಗುರ್ತಿ, ಚಂದ್ರಕಾಂತ ನಾಟೀಕಾರ, ಮಾಣಿಕ ಸಿಂಧೆ, ರವಿ ಸಿಂಗೆ, ಡಾ. ಚಂದ್ರಕಾಂತ ಸಿಂಧೆ, ಶಿವರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ಚಂದ್ರಕಾಂತ ವನಮಾಲಿ, ಶಿವಶರಣಪ್ಪ ಗುತ್ತೇದಾರ, ಶಂಕರ ಹೇರೂರ, ಕಲ್ಯಾಣರಾವ ಡೊಣ್ಣೂರ, ಸಂತೋಷ ನರನಾಳ, ಶಿವಕುಮಾರ ಚಿಂತಕೋಟಿ, ಹುಸೇನ್ ಪಟೇಲ್, ದೇವಜಿ ಜಾಧವ, ರವಿದಾಸ ಪತಂಗೆ, ವೇದಪ್ರಕಾಶ ಮೊಟಗಿ, ಪರಮೆಶ್ವರ ಮಡಿವಾಳ, ಜಗನ್ನಾಥ ಚಂದನಕೇರಿ ಇತರರು ಇದ್ದರು.

ಮಾದಿಗ ಸಮಾಜ ಮುಖಂಡ ರೇವಣಸಿದ್ಧ ಕಟ್ಟಿಮನಿ ಸ್ವಾಗತಿಸಿದರು, ಮಾಜಿ ಪಪಂ ಸದಸ್ಯ ಸೂರ್ಯಕಾಂತ ಜಿ ಕಟ್ಟಿಮನಿ ನಿರೂಪಿಸಿ ವಂದಿಸಿದರು.