ಸಾಮಾಜಿಕ ಪರಿಶೋಧನೆ ಅಚ್ಚುಕಟ್ಟಾಗಿ ನಡೆಯಲಿ: ರಾಹುಲ್ ಪಾಂಡೆ


ಸಂಜೆವಾಣಿ ವಾರ್ತೆ ‌
ಕೊಪ್ಪಳ, ಅ.12: ಗ್ರಾಮ ಹಾಗೂ ತಾಲೂಕು ಮಟ್ಟದ ಗ್ರಾಮ ಸಭೆ ಅಧ್ಯಕ್ಷತೆ ವಹಿಸುವ ನೋಡಲ್ ಅಧಿಕಾರಿಗಳು, ಜಿಲ್ಲಾ ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕರು, ತಾಲೂಕು ಮಟ್ಟದ ಕಾರ್ಯಕ್ರಮದ ವ್ಯವಸ್ಥಾಪಕರಿಗೆ ಅಕ್ಟೋಬರ್ 11ರಂದು ಕಾರ್ಯಗಾರ ನಡೆಯಿತು.
ಜಿಲ್ಲಾ ಪಂಚಾಯತ್ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಸಾಮಾಜಿಕ ಪರಿಶೋಧನೆಯು ಉತ್ತಮ ರೀತಿಯಿಂದ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸ ಬೇಕು ಮತ್ತು ಜಿಲ್ಲೆಯಾದ್ಯಂತ ಸಾಮಾಜಿಕ ಪರಿಶೋಧನೆಯು ಅಕ್ಟೋಬರ್ 16 ರಿಂದ ಆರಂಭವಾಗಿ 2024ರ ಮಾರ್ಚ 31ರವರೆಗೆ ನಡೆಯಲಿದೆ. ಈ ಗ್ರಾಮ ಸಭೆಯಲ್ಲಿ ಮಹತ್ಮಾಗಾಂಧಿ ರಾಪ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾಗೊಳಿಸಲಾದ ಕಾಮಗಾರಿಗಳ ದಾಖಲಾತಿ ಪರಿಶೀಲನೆ, ಕೂಲಿಕಾರ್ಮಿಕರ ಮನೆ ಭೇಟಿ, ಅನುಷ್ಠಾನಗೊಂಡ ಕಾಮಗಾರಿಗಳ ಕ್ಷೇತ್ರ ಭೇಟಿ ಮಾಡಿ ಸಮುದಾಯದ ಎಲ್ಲ ಜನರೊಂದಿಗೆ ಆಯಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಸಭೆಯನ್ನು ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಹಾಗೂ ಮಹಾತ್ಮಾ ಗಾಂಧಿ ಯೋಜನೆಯ ನೋಡಲ್ ಅಧಿಕಾರಿಗಳಾದ ಟಿ ಕೃಷ್ಣಮೂರ್ತಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿಗಳಾದ ಕುಮಲಯ್ಯ ಹಾಗೂ ಇತರರು ಇದ್ದರು,