ಸಾಮಾಜಿಕ ನ್ಯಾಯದಡಿ ಸುಣಗಾರ ಅವರಿಗೆ ಮೇಲ್ಮನೆಗೆ ಆಯ್ಕೆ ಮಾಡಿ

oppo_0

ತಾಳಿಕೋಟೆ:ಮೇ.29: ವಿಧಾನ ಸಭಾ ಭಲದ ಆಧಾರದ ಮೇಲೆ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಸಾಮಾಜಿಕ ನ್ಯಾಯದಡಿ ಮತ್ತು ಹಿಂದೂಳಿದ ಕೋಟಾದಡಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ಗುರುತಿಸಿ ಟಿಕೆಟ್ ನೀಡಿ ಆಯ್ಕೆ ಮಾಡಬೇಕೆಂದು ಪುರಸಭಾ ಸದಸ್ಯ ಕಾಂಗ್ರೇಸ್ ಮುಖಂಡ ಪರಶುರಾಮ ತಂಗಡಗಿ ಅವರು ಒತ್ತಾಯಿಸಿದರು.
ಮಂಗಳವಾರರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಿಂದೂಳಿದ ಸಮಾಜಗಳ ವತಿಯಿಂದ ಕರೆಯಲಾದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕಳೆದ 40 ವರ್ಷಗಳಿಂದಲೂ ಕಾಂಗ್ರೇಸ್ ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಂತಹ ವ್ಯಕ್ತಿಯಾಗಿದ್ದಾರೆ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರೊಂದಿಗೆ ಬೆರೆತುಕೊಳ್ಳುವಂತಹ ವ್ಯಕ್ತಿಯಾಗಿದ್ದಾರೆ ಈ ಹಿಂದೆ ಸಿಂಧಗಿ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ರಾಜಕೀಯ ಸಾಕಷ್ಟು ಅನುಭವವೂ ಕೂಡಾ ಇದ್ದು ಹಿಂದೂಳಿದ ವರ್ಗಗಳ ಕೋಟಾದಡಿ ಪಕ್ಷದಲ್ಲಿ ಯಾವುದೇ ಸ್ಥಾನಮಾನವೂ ಕೂಡಾ ಸಿಕ್ಕಿಲ್ಲಾ ಹೀಗಾಗಿ ಸುಣಗಾರ ಅವರನ್ನು ಮೇಲ್ಮನೆ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಟಿಕೇಟ್ ನೀಡುವದರೊಂದಿಗೆ ಆಯ್ಕೆಗೊಳಿಸಬೇಕೆಂದು ಎಲ್ಲ ಸಮಾಜಗಳ ಪರವಾಗಿ ಕಾಂಗ್ರೇಸ್ ಪಕ್ಷದ ವರಷ್ಠಲ್ಲಿ ಒತ್ತಾಯಿಸುತ್ತೇವೆಂದ ಅವರು ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಗರಡಿಯಲ್ಲಿ ಫಳಗಿದವರಾಗಿದ್ದಾರೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಆಪ್ತರಲ್ಲಿಯೂ ಕೂಡಾ ಒಬ್ಬರಾಗಿದ್ದು ಇವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವದರಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಇನ್ನಷ್ಟು ಭಲ ತುಂಬಲಿದೆ ಅಲ್ಲದೇ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ಮೂಡಲಿದೆ ಎಂದರು.
ಇನ್ನೋರ್ವ ಅಂಬಿಗೇರ ಸಮಾಜದ ನಗರ ಘಟಕದ ಅಧ್ಯಕ್ಷ ರಮೇಶ ಮೂಕೀಹಾಳ ಅವರು ಮಾತನಾಡಿ ಮಾಜಿ ಶಾಸಕ ಸುಣಗಾರ ಅವರು ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಮನೋಭಾವನೆ ಹೊಂದಿದಂತಹ ವ್ಯಕ್ತಿಯಾಗಿದ್ದಾರೆ ಕಾಂಗ್ರೇಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಾ ಬಂದವರಾಗಿದ್ದಾರೆ ಇಂತಹ ಪಕ್ಷ ನಿಷ್ಠ ವ್ಯಕ್ತಿ ಸುಣಗಾರ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗುರುತಿಸಿ ಟಿಕೆಟ್ ನೀಡಿ ಆಯ್ಕೆಗೊಳಿಸಿದಲ್ಲಿ ಜಿಲ್ಲೆಯಲ್ಲಿ ಪಕ್ಷವು ಇನ್ನಷ್ಟು ಭಲಿಷ್ಠಗೊಳ್ಳುವದರಲ್ಲಿ ಯಾವದೇ ಸಂಶಯವಿಲ್ಲಾವೆಂದರು.
ಇನ್ನೋರ್ವ ಮುಖಂಡ ಶಾಂತು ಹೊಸಕೇರಿ, ಮತ್ತು ವಿಶ್ವನಾಥ ತಳವಾರ(ಅಸ್ಕಿ) ಅವರು ಮಾತನಾಡಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕಾಂಗ್ರೇಸ್ ಪಕ್ಷದ ಏಳಿಗೆಗಾಗಿ ದುಡಿದಂತಹ ವ್ಯಕ್ತಿಯಾಗಿದ್ದಾರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಅಲ್ಪದಿನಗಳಲ್ಲಿಯೇ ಟಿಕೇಟ್ ಘೋಷಣೆ ಮಾಡಿದ್ದರಿಂದ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಲು ಆಗಲಿಲ್ಲಾ ಹೀಗಾಗಿ ಸೋಲನ್ನು ಅನುಭವಿಸಬೇಕಾಯಿತು ಸಾಮಾಜಿಕ ಮಾನದಂಡದಡಿ ಶರಣಪ್ಪ ಸುಣಗಾರ ಅವರಿಗೆ ವಿಧಾನ ಪರಿಷತ್‍ಗೆ ಆಯ್ಕೆಗೊಳಿಸುವ ಕಾರ್ಯ ಕಾಂಗ್ರೇಸ್ ಪಕ್ಷದ ಹೈಕಮಾಂಡ ಮಾಡಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಮುಖಂಡ ತೋಟಪ್ಪ ಏವೂರ ಅವರು ಶರಣಪ್ಪ ಸುಣಗಾರ ಅವರಿಗೆ ವಿಧಾನ ಪರಿಷತ್‍ಗೆ ಆಯ್ಕೆಗೊಳಿಸುವದರೊಂದಿಗೆ ಪರಿಷತ್ತಿನಲ್ಲಿ ಹೆಚ್ಚಿನ ಶಕ್ತಿ ಬರಲಿದೆ ಪಕ್ಷಕ್ಕಾಗಿ ದುಡಿದಂತಹ ಕಾರ್ಯಕರ್ತರಿಗೆ ಮಾನ್ಯತೆ ನೀಡಿದಂತಾಗಲಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ ದೇವೇಂದ್ರ ಪೂಜಾರಿ(ಗೊಟಗುಣಕಿ), ಮಾನಪ್ಪ ನಾಯ್ಕೋಡಿ, ಕಾಶಿನಾಥ ಮದರಿ, ಈರಪ್ಪ ನಾಯ್ಕೋಡಿ, ಮಡಿವಾಳಪ್ಪ ಚಿಗರಿ, ಮಲ್ಲಿಕಾರ್ಜುನ ಮದರಿ, ಮಲ್ಲಿಕಾರ್ಜುನ ನೆಲ್ಲಗಿ, ಭೀಮಣ್ಣ ತಳವಾರ, ಸಂಗಮೇಶ ಮದರಿ, ಗೋಪಾಲ ಸುರಪೂರ, ಶಾಂತಪ್ಪ ಇಣಚಗಲ್ಲ, ಜಾಜನಗೌಡ ಬಿರಾದಾರ, ಸಂಗಮೇಶ ಅಂಬಿಗೇರ(ಕಲ್ಲದೆವನಹಳ್ಳಿ), ಸಂಗಮೇಶ ಅಂಬಿಗೇರ(ವನಹಳ್ಳಿ), ದಂಡಪ್ಪ ಬಡಿಗೇರ, ಬಸವರಾಜ ತಳವಾರ, ಮಲ್ಲೇಶ ತಳವಾರ, ಸಚೀನ ತಳವಾರ, ಬಸವರಾಜ ಗುಡ್ಡಕಾಯಿ, ಮುತ್ತು ತಳವಾರ, ಸಿದ್ದು ವಾಲಿಕಾರ, ರಮೇಶ ಯಕ್ತಾಪೂರ, ರಾಜು ವಾಲಿಕಾರ, ಹನೀಪ ನೀರಲಗಿ, ಹರಿಸಿಂಗ್ ಪರಶುರಾಮ ಕೊಕಟನೂರ, ಮೊದಲಾದವರು ಇದ್ದರು.