ಸಾಮಾಜಿಕ ನ್ಯಾಯದಡಿ ಮೀಸಲಾತಿ ವಿಂಗಡನೆ; ಜಿಲ್ಲಾ ಬಿಜೆಪಿ ಬಣ್ಣನೆ

ದಾವಣಗೆರೆ. ಮಾ.೨೭; ರಾಜ್ಯ ಬಿಜೆಪಿ ಸರ್ಕಾರ  ಇದುವರೆಗೆ ಇದ್ದ ಮೀಸಲಾತಿಯ ಸ್ವರೂಪವನ್ನು ವರ್ಗಗಳ ಬೇಡಿಕೆ ಮತ್ತು ಸಾಮಾಜಿಕ ನ್ಯಾಯದ ಅನುಗುಣವಾಗಿ ಬದಲಿಸಿ ಸಾಮಾಜಿಕ ನ್ಯಾಯದಡಿ ವಿಂಗಡನೆ ಮಾಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೇಶ್ ಹನಗವಾಡಿ ಬಣ್ಣಿಸಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಸರ್ಕಾರದ ಈ ಮುಖ್ಯ ತೀರ್ಮಾನದಿಂದ ಲಿಂಗಾಯತರು, ಒಕ್ಕಲಿಗರ ಬಹುಕಾಲದ ಬೇಡಿಕೆ ಈಡೇರುವುದು ಒಂದೆಡೆಯಾದರೆ ಇನ್ನೊಂದೆಡೆಯಲ್ಲಿ ದಲಿತರಿಗೆ ಒಳಮೀಸಲಾತಿ ತರುವ ಆಲೋಚನೆಯೂ ಅತ್ಯಂತ ಕಠಿಣ ನಿರ್ಣಯವಾಗಿತ್ತು. ಸಾಮಾಜಿಕ ನ್ಯಾಯ, ಬರೀ ಮಾತಿನಲ್ಲಿ ಆಗಬಾರದು ಎನ್ನುವುದು ಉದ್ದೇಶ ದಿಂದ ಇದರ ಲಾಭ ನಷ್ಟಗಳನ್ನು ಯೋಚಿಸದೆ ಸಮಾಜದ ಸರ್ವತೋಮುಖ ಬೆಳವಣಿಗೆಯೇ ಮೊದಲ ಆದ್ಯತೆಯಂತೆ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಈ ಹಿಂದೆ ರಾಜ್ಯ ಸರಕಾರವು ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡ 15ರಿಂದ 17 ಕ್ಕೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 3ರಿಂದ 7ಕ್ಕೂ ಹೆಚ್ಚಿಸಿತ್ತು ಈ ಮೂಲಕ * ಸಮುದಾಯದ ಏಳಿಗೆಗೆ ನಿಜವಾದ ಅರ್ಥದಲ್ಲಿ ಶ್ರಮಿಸಿತು ಆದರೆ ಇದರ ಪರಿಣಾಮವಾಗಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣವು ಶೇಕಡ 50ರ ಗರಿಷ್ಠ ಮಿತಿಯನ್ನು ದಾಟಿ ಶೇಕಡ 56ಕ್ಕೆ ಹೋಗಿದ್ದು ಕೊಂಚ ಚರ್ಚೆಯ ವಿಚಾರವೇ ಆಗಿತ್ತು.
ಬಿಜೆಪಿ ಸರಕಾರ ಕೆಲವು ಐತಿಹಾಸಿಕ ನೀತಿ, ಯೋಜನೆಗಳನ್ನು ನಿರ್ಣಯಿಸಿ ಘೋಷಿಸಿದರೆ ಅದು ದೃಢವಾಗಿ ಜಾರಿ ಆಗುವ ನಿಟ್ಟಿನಲ್ಲಿಯೂ ಬದ್ಧತೆಯಿಂದ ಶ್ರಮಿಸುತ್ತದೆ ಎನ್ನುವುದು ಶತಸಿದ್ಧ ಎಂದು ಸಾಬೀತಾಗಿದೆ ಎಂದರು.ಹೀಗೆ ಎಲ್ಲಾ ವರ್ಗಕ್ಕೂ ಸಾಮಾಜಿಕ‌ ನ್ಯಾಯದಡಿಯಲ್ಲಿ ಮೀಸಲಾತಿ ವಿಂಗಡನೆ ಮಾಡಲಾಗಿದೆ ಎಂದರು.ಸುದ್ಸಿಗೋಷ್ಠಿಯಲ್ಲಿ ಬಿ.ಎಸ್ ಜಗದೀಶ್ಡಿ.ಎಸ್ ಶಿವಶಂಕರ್,ಬಾತಿ ವೀರೇಶ್,ಜಿ.ಮಂಜಾನಾಯ್ಕ್ ಇದ್ದರು.