ಸಾಮಾಜಿಕ ನ್ಯಾಯದಡಿ ಬಿಜೆಪಿ ಟಿಕೆಟ್ ದೊರೆತಿದೆ: ಬಲ್ಲಾಹುಣಸಿ ರಾಮಣ್ಣ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.18 ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗೆ ಟಿಕೆಟ್ ಹಂಚಿಕೆಯಾಗಿದೆ ಅದರಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನನಗೆ ಸಾಮಾಜಿಕ ನ್ಯಾಯದಡಿ ಟಿಕೆಟ್ ಸಿಕ್ಕಿದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಲ್ಲಾಹುಣಿಸಿ ರಾಮಣ್ಣ ತಿಳಿಸಿದರು.
 ಟಿಕೆಟ್ ದೊರೆತ ಸಂಭ್ರಮದಲ್ಲಿ ಆಗಮಿಸಿ ನಿನ್ನೆ ಅವರ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಇದ್ದ ಕಾರಣ ಸ್ವಲ್ಪ ವಿಳಂಬವಾಗಿರಬಹುದು. ರಾಜ್ಯದ ಎಲ್ಲಾ ಸಮುದಾಯಗಳಿಗೆ ಸರಿಸಮನಾಗಿ ಟಿಕೆಟ್ ಹಂಚಿರುವುದು ಬಿಜೆಪಿ ಪಕ್ಷ ಮಾತ್ರ ಈ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧ ಈ ಬಾರಿ ಹಾಲಿ ಶಾಸಕ ಎಸ್ ಭೀಮ ನಾಯ್ಕ್ ಕಲ್ಲಳ್ಳಿ ತಾಂಡಕ್ಕೆ ಹೋಗುವುದು ಗ್ಯಾರಂಟಿ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಈ ಚುನಾವಣೆಯನ್ನು ಎದುರಿಸುತ್ತೇನೆ ಎಂದರು.