ಸಾಮಾಜಿಕ ನ್ಯಾಯದಡಿ ಪದಾಧಿಕಾರಿಗಳ ನೇಮಕ : ಹುಡೇದ

ಬಾಗಲಕೋಟೆ,ಮೇ.31 : ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕಕ್ಕೆ ಜಿಲ್ಲೆಯ ಎಲ್ಲ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಪ್ರಮುಖರನ್ನು ಸಾಮಾಜಿಕ ನ್ಯಾಯದಡಿ ಓಬಿಸಿ ವರ್ಗದಡಿ ಬರುವ ಎಲ್ಲ ಸಮಾಜಗಳಿಗೂ ಆದ್ಯರೆ ನೀಡಿ ನೇಮಕ ಮಾಡಲಾಗಿದೆ ಎಂದು ಓಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಕಾಶಿನಾಥ ಹುಡೇದ ತಿಳಿಸಿದ್ದಾರೆ.
ಓಬಿಸಿ ಘಟಕದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಬಾಗಲಕೋಟೆ ನಗರದ ಗಣಪತಸಾ ದಾನಿ, ಬೀಳಗಿಯ ಪಡಿಯಪ್ಪ ಕರಿಗಾರ, ಬಾದಾಮಿ ತಾಲೂಕು ಬೂದಿಹಾಳದ ಹನಮಂತ ಅಂಬಿಗೇರ, ಮುಧೋಳ ತಾಲೂಕು ಬೆಳಗಲಿಯ ರಾಘವೇಂದ್ರ ನೀಲಣ್ಣವರ, ಜಮಖಂಡಿ ತಾಲೂಕು ಗಣಿ ಗ್ರಾಮದ ಶಶಿಕಾಂತ ಗಲಗಲಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಜಮಖಂಡಿ ಕವಟಗಿಯ ಮಲ್ಲಪ್ಪ ಚಾಮೋಜಿ, ಬೀಳಗಿ ತಾಲೂಕು ಕಲಬಂದಕೇರಿಯ ರಂಗನಾಥ ಮೇಲಿನಮನಿ ಅವರನ್ನು ನೇಮಿಸಿದ್ದು, ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಮುಧೋಳ ತಾಲೂಕು ಇಂಗಳಗಿಯ ಬಸವರಾಜ ಕೋರಿ, ಗುಳೇದಗುಡ್ಡದ ರಮೇಶ ಅಗಸಿಮನಿ, ಲೋಕಾಪುರದ ಹತ್ತಿರದ ಚೌಡಾಪುರದ ಶೆಟ್ಟೆಪ್ಪ ಮಾಳಿ, ಅಮೀನಗಡದ ಲಕ್ಷ್ಮಿ ಪುರತಗೇರಿ ಅವರನ್ನು ನೇಮಿಸಿದ್ದು, ಜಿಲ್ಲಾ ಖಜಾಂಚಿಯನ್ನಾಗಿ ಕುಳಗೇರಿ ಕ್ರಾಸ್‍ನ ವೆಂಕಣ್ಣ ಹೊರಕೇರಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಓಬಿಸಿ ಘಟಕದ ಜಿಲ್ಲಾ ನಿರ್ದೇಶಕರಾಗಿ ಹಿರೇಪಡಸಲಗಿಯ ಸಾಬು ಮಾಳಿ, ಆಲಗೂರಿನ ರಾಮಣ್ಣ ಕಡಕೋಳ, ಉದಗಟ್ಟಿಯ ಶೇಷನಗೌಡ ಪಾಟೀಲ, ಗುಳೇದಗುಡ್ಡ ತಾಲೂಕು ನಾಗರಾಳ ಎಸ್.ಪಿ.ಯ ಲೆಂಕೇಶ ಹಿರೇಕುರುಬರ, ಗುಳೇದಗುಡ್ಡದ ಗಣೇಶ ಹೆಗಡೆ, ಚಿಕ್ಕೂರಿನ ಲಕ್ಕಪ್ಪ ಪೂಜಾರ, ಅಂಬಲಿಕೊಪ್ಪದ ಅರವಿಂದ ಮುರನಾಳ, ಕಮತಗಿಯ ಸಿದ್ದಲಿಂಗಪ್ಪ ಹೊಸಮನಿ, ಮಳಲಿಯ ಭೀಮಪ್ಪ ಇಟಕನ್ನವರ, ಅಗಸನಕೊಪ್ಪದ ರೇಣುಕಾ ಚಿತ್ರಕೋಟಿ, ಲಿಂಗಾಪುರದ ಹಣಮಂತ ಛಬ್ಬಿ, ಬಾಗಲಕೋಟೆಯ ಬರಮು ಪೂಜಾರ, ಲಖಮಾಪುರದ ಹನಮವ್ವ ಕುಳಗೇರಿ, ಬಾದಾಮಿಯ ಲಕ್ಷ್ಮಿಬಾಯಿ ಕಂಬಾರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.