
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.20: ಕರ್ನಾಟಕ ರಾಜ್ಯದಲ್ಲಿ ಶ್ರೀಮಂತರ ಹಿಡಿತದಿಂದ ಊಳುವವನೆ ಒಡೆಯ ಎಂದು ಬಡ ಜನರ ಬದುಕಾದರು ದೇವರಾಜ್ ಅರಸು ಅವರು ಎಂದು ದೇವರಾಜ್ ಅರಸು ವೇದಿಕೆಯ ಅಧ್ಯಕ್ಷ ಕಲ್ಕಂಬ ಪಂಪಾಪತಿ ಹೇಳಿದರು.ನಗರದ ಬಿಡಿಏಏ ಮೈದಾನದಲ್ಲಿ ನಡೆದ ದಿ.ಮುಖ್ಯ ಮಂತ್ರಿ ದೇವರಾಜ್ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ. ಅರಸು ಅವರ ಆಡಳಿತ ಕಾರ್ಯವೈಖರಿ ಮತ್ತು ಅವರ ಬಡ ಜನರ ಬಗ್ಗೆ ಹೊಂದಿದ್ದ ಕಾಳಜಿಯನ್ನು ತಿಳಿಸಿದರು.ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಜಿಪಂ ಸಿಈಓ ಶರಣಪ್ಪ ಸಂಕನೂರು ಮೇಯರ್ ಡಿ.ತ್ರಿವೇಣಿ ಅವರು ಅರಸು ಅವರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರು.ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ, ಪದವಿ ಮೊದಲಾದವುಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯ್ತು.ವೇದಿಕೆಯಲ್ಲಿ ಉಪಮೇಯರ್ ಜಾನಕಿ, ಪಾಲಿಕೆ ಸದಸ್ಯೆ ಎಂ.ರಾಜೇಶ್ವರಿ ಸುಬ್ಬರಾಯುಡು, ಚೋರನೂರು ಕೊಟ್ರಪ್ಪ, ಎಲ್.ಮಾರೆಣ್ಣ, ಮಲ್ಲಿಕಾರ್ಜುನ,ಹೆಚ್.ತಿಪ್ಪಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿ ರಾವ್ ಮೊದಲಾದವರು ಇದ್ದರು.ಶಿಕ್ಷಕ ಅಮಾತಿ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಬಸವ ಗವಾಯಿಗಳು ಡಿ.ಕಗ್ಗಲ್ ಅವರಿಂದ ಸುಗಮ ಸಂಗೀತ ನಡೆಯಿತು.