ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನಾಯಕ:ದೋಕಾ

ಸೈದಾಪುರೆು.15:ಅಂಬೇಡ್ಕರವರು ತತ್ವ ಆದರ್ಶಗಳ ಮೂಲಕ ಸಾಮಾಜಿಕ ನ್ಯಾಯ, ಅಸ್ಪøಶ್ಯತೆಯ ನಿವಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಮಾಹಾನಾಯಕರಾಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶ್ರೇಣಿಕ ಕುಮಾರ ದೋಕಾ ಅಭಿಪ್ರಾಯಪಟ್ಟರು.

ಪಟ್ಟಣದ ರೈಲ್ವೇ ಗೇಟ್ ಬಳಿ ಇರುವ ಡಾ. ಬಿ. ಆರ್ ಅಂಬೇಡ್ಕರ ವೃತ್ತದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಂಬೇಡ್ಕರವರು ಇಡೀ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಕಾನೂನುಗಳ ಮೂಲಕ ಸಾಧ್ಯ ಎಂಬುದನ್ನು ಅರಿತು ಸಂವಿಧಾನವನ್ನು ಬರೆದರು. ಅಂದು ಅವರ ಆಲೋಚನೆಯಿಂದಲೇ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು, ಸಮಾನತೆ ಎಂಬುದು ದೊರೆಯುವಂತಾಗಿದೆ ಎಂದು ಹೇಳಿದರು.

ಮಾಜಿ ತಾಲ್ಲೂಕ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಕವಡೆ ಬದ್ದೇಪಲ್ಲಿ ಮಾತನಾಡಿ ಇಂದಿನ ಯುವ ಪೀಳಿಗೆಯವರು ಅಂಬೇಡ್ಕರರ ಮೂರು ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನೇತ್ರಾವತಿ, ಚಂದ್ರಶೇಖರ್ ವಾರದ, ಬಸ್ಸುಗೌಡ ಐರೆಡ್ಡಿ, ಮಹಿಪಾಲರೆಡ್ಡಿ ದುಪ್ಪಲ್ಲಿ, ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಗುರುನಾಥರೆಡ್ಡಿಗೌಡ ರೊಟ್ನಡಗಿ, ರಾಜೇಶ ಶೆಟ್ಟಿ, ರಾಜು ದೊರೆ, ವಲಿಯೋದ್ದೀನ್, ಹಣಮಂತ, ಚಂದ್ರಶೇಖರ ಕರಣಿಗಿ, ಭೀಮರಾಯ ಕೊಟಗೇರಾ ಬಳಿಚಕ್ರ, ಸಾಬಣ್ಣ ಗುತ್ತೇದಾರ ಸೈದಾಪುರ, ಕಾಶಪ್ಪ, ವೆಂಕಟೇಶ ಮೇತ್ರಿ, ನರಸಪ್ಪ ನಾಯಕ. ಮಾರೆಪ್ಪ ನಾಯಕ ಇಂದಿರಾನಗರ, ಮಲ್ಲರೆಡ್ಡಿ ಪಾಟೀಲ್, ಮರೆಪ್ಪ ಕಟ್ಟಿಮನಿ, ಭೀಮಣ್ಣ ಮಡಿವಾಳಕರ್, ಅನಿಲ್ ಭಾಸ್ಕರ್, ನರಸಿಂಗ್ ಕೋರೆ, ಇಮಾಮ್ ಹೆಗ್ಗಣಗೇರಾ, ದೇವಿಂದ್ರಪ್ಪ ಕೂಡ್ಲೂರು, , ಮಹಿಪಾಲರೆಡ್ಡಿ ಮುನಗಾಲ, ನೀಲಕಂಠರೆಡ್ಡಿ, ಮರಿಲಿಂಗ, ನಾಗಪ್ಪ, ಮರಿಲಿಂಗ, ತಾಯಪ್ಪ, ಶಂಕರ, ಆನಂದ, ಕಾಳಪ್ಪ, ಹಣಮಂತ, ಶರಣಪ್ಪ ಶೆಟ್ಟಿಹಳ್ಳಿ, ಮಲ್ಲು ಸಂಗವಾರ, ಮಲ್ಲಪ್ಪ, ಸಂತೋಷ ಬಡಿಗೇರ್, ಚೆನ್ನಮಲ್ಲಪ್ಪ, ಷಣ್ಮುಖ ಬಡಿಗೇರ್, ಸಾಗರ, ರಾಘವೇಂದ್ರ, ಸತೀಶ, ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಘಟಕದ ಪದಾಧಿಕಾರಿಗಳು ಇತರರಿದ್ದರು.