ಸಾಮಾಜಿಕ ತಾರತಮ್ಯ ನಿರ್ಮೂಲನೆಗೆ ಪಣತೊಟ್ಟವರು ಬಸವಣ್ಣನವರು


ಸಂಜೆವಾಣಿ ವಾರ್ತೆ
ಗಂಗಾವತಿ, ಏ.23: ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸುವುದರ ಜೊತೆಗೆ ಸಾಮಾಜಿಕ ತಾರತಮ್ಯ ನಿರ್ಮೂಲನೆಗೆ ಪಣತೊಟ್ಟವರು ಬಸವಣ್ಣನವರು ಎಂದು ದಂತ ವೈದ್ಯರಾದ ಡಾ. ಶಿವುಕುಮಾರ ಮಾಲಿಪಾಟೀಲ್ ಹೇಳಿದರು.
ನಗರದ ಬಸವೇಸ್ವರ ವೃತ್ತದಲ್ಲಿ ಬಸವದಳದಿಂದ ಹಮ್ಮಿಕೊಂಡಿದ್ದ ಮಹಾನ್ ತತ್ವಜ್ಞಾನಿ, ವಚನಕಾರರು,ವಿಶ್ವಗುರು ಬಸವಣ್ಣನವರ 889ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಿದವರು, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದವರು. ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿದವರು. ಇಂತಹ ಮಹಾನ್ ತತ್ವಜ್ಞಾನಿ ವಚನಕಾರ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರ ಪಾಲಿಸಬೇಕು. ಬಸವ ತತ್ವಗಳನ್ನು ಪಾಲಿಸುವವರನ್ನು ಬೆಂಬಲಿಸಿ ಪ್ರೋತ್ಸಾಹಿಸಿ ಎಂದರು.
ಈ ವೇಳೆ ಕಾರ್ಮಿಕ ಮುಖಂಡ ಜೆ.ಭಾರಧ್ವಾಜ್, ಡಾ. ಶಿವುಕುಮಾರ ಮಾಲಿಪಾಟೀಲ್, ಕೆ.ಬಸವರಾಜಸ್ವಾಮಿ, ಮಲ್ಲಿಕಾರ್ಜುನಾ ಹೋಸ್ಕಾರ, ಶ್ರೀಶೈಲ ಪಟ್ಟಣಶೇಟ್ಟಿ, ಎ.ಕೆ ಮಹೇಶ ಕುಮಾರ, ಸೇರಿದಂತೆ ಬಸವದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

One attachment • Scanned by Gmail