ಕಲಬುರಗಿ:ಜು.25:ಇತ್ತೀಚೆಗೆ ಜನತೆಯಲ್ಲಿ ಸಾಮಾಜಿಕ ಜಾಲ ತಾಣದ ಹುಚ್ಚು ಹೆಚ್ಚಾಗಿದ್ದು, ಇದರಿಂದಾಗಿ ನೈಜ ಸುದ್ದಿಗಳನ್ನು ಹೊತ್ತುಕೊಂಡು ಬರುವದ ಮುದ್ರಣ ಮಾಧ್ಯಮಕ್ಕೆ ಹಿನ್ನಡೆಯುಂಟಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸೇಡಂ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ಪುರಸ್ಕøತ ಪರ್ತಕರ್ತರಿಗೆ ವಿಶೇಷ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಇಂದಿನ ಯುವ ಸಮೂಹ ದಿನಕ್ಕೆ ಸುಮಾರು ಐದು ಗಂಟೆಗೂ ಅಧಿಕ ಕಾಲ ಮೊಬೈಲ್‍ನಲ್ಲಿಯೇ ಕಾಲಹರಣ ಮಾಡುತ್ತಾರೆ. ಇದು ಸಮಾಜಕ್ಕೆ ಮಾರಕವಾದದ್ದು ಹಿಂದೆ ಪತ್ರಿಕೆ ಓದುವ ಜನರ ಸಂಖ್ಯೆ ಹೆಚ್ಚಿತು. ಆದರೆ ಇದೀಗ ಎಲ್ಲವು ಕ್ಷಣ, ಕ್ಷಣಕ್ಕೆ ಸಿಗುವಂತಾಗಿದ್ದರಿಂದ ಪತ್ರಿಕೆಯ ಆಸಕ್ತಿ ಯುವಕರು ಬೆಳಸಿಕೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಹತ್ತು ವರ್ಷಗಳ ಕಾಲ ಕ್ರಮೇಣದಲ್ಲಿ ಪತ್ರಿಕೆಯನ್ನೇ ಮರೆಯುವ ವಾತಾವರಣ ಸೃಷ್ಠಿಯಾಗಲಿದೆ. ಹಾಗಾಗಿ ಪತ್ರಿಕೆಗಳು ಆನ್‍ಲೈನ್ ಮೂಲಕ ಕೂಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಪತ್ರಕರ್ತರು ನಿವೇಶನ ಸೇರಿದಂತೆ ವಿವಿಧ ಬೇಡಿಕೆಯ ಬಗ್ಗೆ ಗಮನಕ್ಕೆ ತಂದಿದ್ದು, ಮುಂಬರುವ ದಿನಗಳಲ್ಲಿ ಈಡೇರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪಯತ್ನ ಮಾಡುತ್ತೇನೆ. ಅಲ್ಲದೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಕರೊನಾ ಕಾಲದ ನಂತರ ಪತ್ರಿಕೋದ್ಯಮ ನಡೆಸುವದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೂ ನಮ್ಮ ಕಲಬುರಗಿ ಜಿಲ್ಲೆಯ ಪತ್ರಕರ್ತರು ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ತಾಲೂಕು ಕೇಂದ್ರವಾದ ನಮ್ಮಲ್ಲಿ ಕೆಲವರು ಪತ್ರಿಕೆ ನಡೆಸಿದ್ದು ಶ್ಲಾಘನೀಯ ಕಾರ್ಯ. ಇದರೊಟ್ಟಿಗೆ ಪತ್ರಿಕೆ ವಿತರಣೆ ಮಾಡುವದು ಸಹ ದೊಡ್ಡ ಜವಬ್ದಾರಿಯುತ ಕೆಲಸವಾಗಿದೆ. ಮುಂಬರುವ ದಿನಗಳಲ್ಲಿ ಪತ್ರಕರ್ತರು ಮಾಡುವ ಕೆಲಸಕ್ಕೆ ಸದಾ ಬೆಂಬಲವಾಗಿರುತ್ತೇನೆ ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ನಾಡಿನಾದ್ಯಂತ ಹೆಸರು ಮಾಡಿದ ಪತ್ರಕರ್ತರು ಸೇಡಂ ನೆಲದಲ್ಲಿ ಹುಟ್ಟಿ ಬೆಳೆದಿದ್ದಾರೆ ಎನ್ನುವದು ನಮಗೆ ಹೆಮ್ಮೆಯಾಗಿದೆ. ಇಂತಹ ಸಾಲಿನಲ್ಲಿ ಹೆಚ್ಚು ಜನ ಸೇರಬೇಕು. ಇದೀಗ ಯುವ ಸಮೂಹವೇ ಹೆಚ್ಚಾಗಿರುವ ಮಾಧ್ಯಮ ರಂಗದಲ್ಲಿ ನಿರೀಕ್ಷಿತ ಬೆಳವಣಿಗೆ ಆಗಲಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಇಮಡಾಪೂರ ಇದ್ದರು.
ಅನುಷಾ ಬೋರಂಚಿ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ ಪ್ರಾಸ್ತವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ಸ್ವಾಗತಿಸಿದರು. ಉಪಾಧ್ಯಕ್ಷ ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ಸುಧೀರ ಬಿರಾದಾರ ವಂದಿಸಿದರು.
ವಿವಿಧ ಪ್ರಶಸ್ತಿ ಪುರಸ್ಕøತರಿಗೆ, ವಿತರಕರಿಗೆ ಸತ್ಕಾರ
ಮಾದ್ಯಮ ಅಕಾಡೆಮಿ ಹಾಗೂ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ದೇವಿಂದ್ರಪ್ಪ ಅವಂಟಿ, ಹಣಮಂತರಾವ ಭೈರಾಮಡಗಿ, ಬಾಬುರಾವ ಯಡ್ರಾಮಿ, ಶರಣಯ್ಯ ಹಿರೇಮಠ, ನಜೀರಮಿಯಾ ಹಟ್ಟಿ, ಮಂಜುನಾಥ ಜೂಟಿ, ಪ್ರವೀಣ ಪಾರಾ ಪತ್ರಿಕೆ ವಿತರಕ ಗಣೇಶ ನೀಲಹಳ್ಳಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಓಂಶಕ್ತಿ ಬೊಮ್ನಳ್ಳಿ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು
ರಂಗಾಯಣ ಮಾಜಿ ನಿರ್ದೆಶಕ ಪ್ರಭಾಕರ ಜೋಶಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಕಸಾಪ ತಾಲೂಕು ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಆರತಿ ಕಡಗಂಚಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಬಸವರಾಜ ಪಾಟೀಲ್ ಊಡಗಿ, ನಾಗೇಶ್ವರಾವ ಮಾಲೀಪಾಟೀಲ್, ಡಾ.ವಾಸುದೇವ ಅಗ್ನಿಹೋತ್ರಿ, ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ, ಹಾಶರೆಡ್ಡಿ ಮನ್ನೆ, ಮುರುಗೆಪ್ಪ ಕೊಳಕೂರ, ನಾಗೇಂದ್ರಪ್ಪ ಡೊಳ್ಳಾ, ಓಂಪ್ರಕಾಶ ಪಾಟೀಲ್, ಪತ್ರಕರ್ತರಾದ ನಾಗಯ್ಯಸ್ವಾಮಿ ಬೊಮ್ನಳ್ಳಿ, ಮಹ್ಮದ ಮುನೀಬ, ಅವಿನಾಶ ಬೋರಂಚಿ, ಶರಣಯ್ಯಸ್ವಾಮಿ ಬೊಮ್ನಳ್ಳಿ, ರಾಧಾಕೃಷ್ಣ, ಶರಣಪ್ಪ ಎಳ್ಳಿ, ಸುನೀಲ್ ರಾಣೆವಾಲ್, ಮಹ್ಮದ ಶಫಿ, ವಿಜಯಭಾಸ್ಕರರೆಡ್ಡಿ ಮುನ್ನೂರ.