ಸಾಮಾಜಿಕ ಜಾಲತಾಣ : ಕಾಲ್ ನಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್

ಎಚ್ಚರಿಕೆ ಇರಲಿ…! ಕಾಮೋದ್ರೇಗಕ್ಕೆ ಬಲಿಯಾಗಬೇಡಿ

ಸಂಜೆವಾಣಿ ವಿಶೇಷ ವರದಿ (ಸೈಬರ್ ಪ್ರಕರಣ)
ರಾಯಚೂರು ಫೆ ೨೬
ಇತ್ತೀಚಿನ ದಿನಗಳಲ್ಲಿ ಕೆಲವು ಸೈಬರ್ ಪ್ರಕರಣಗಳು ಮೋಸದ ಜಾಲದವರು ಮಾಡುವ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಕಾಲ್ ರೆಕಾರ್ಡ್ ಪ್ರಕರಣಗಳು ಜಿಲ್ಲೆಯವರಿಗೂ ಇದರ ಬಿಸಿ ತಟ್ಟಿದೆ ಅದರಲ್ಲಿ ವಿಶೇಷವಾಗಿ ಕಾಮೋದ್ರೇಗಕ್ಕೆ ಒಳಗಾಗಿರುವವರ ಅಶ್ಲೀಲ ವಾಟ್ಸಾಪ್/ಇನ್ಸ್ಟಾಗ್ರಾಮ್ /ಫೇಸ್ಬುಕ್ ಕಾಲ್ ರೆಕಾರ್ಡ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ರಾಜ್ಯದಲ್ಲಿ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ, ಈ ಮೋಸದ ಜಾಲದಲ್ಲಿ ಸಿಕ್ಕಾಕಿಕೊಂಡು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇನ್ನೂ ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ, ದುಡ್ಡು ಕಳೆದುಕೊಂಡರೂ ಸಹ ಸಮಾಜದಲ್ಲಿ ಮಾನ ಮರ್ಯಾದೆ ಕಳೆದುಕೊಂಡವರು ಇದ್ದಾರೆ.
ಪ್ರಕರಣದ ಹಿನ್ನಲೆ
ಮೋಸ ಮಾಡುವ ಜಾಲದಲ್ಲಿವವರು ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಟೆಲಿಗ್ರಾಮ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಸೆಕ್ಸ್ ಚಾಟ್ ಅಂತಾ ಜಾಹಿರಾತು ರೂಪದಲ್ಲಿ ಫೋನ್ ನಂಬರ್ ಜೊತೆಗೆ ಹುಡಿಗಿಯರ ಫೋಟೋ ಹಾಕುತ್ತಾರೆ, ಅದನ್ನು ನೋಡಿ ಅ ನಂಬರ್ ಗಳಿಗೆ ಇವರು ಚಾಟ್ ಮಾಡುತ್ತಾರೆ, ಕೆಲವೊಮ್ಮೆ ವಯಕ್ತಿಕ ಮೆಸೇಜ್ ಕಳಿಸುತ್ತಾರೆ ಈ ಮೋಸದ ಜಾಲಕ್ಕೆ ಬಿದ್ದು ಇವರು ಮೆಸೇಜ್ ಹಾಕಿದ ತಕ್ಷಣ ವಾಟ್ಸಾಪ್ ನಂಬರಿಗೆ ಅಥವಾ ಇನ್ಸ್ಟಾ,ಜಿb ಐಡಿ ಇನ್ಬಾಕ್ಸ್ ಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ವ್ಯವಹಾರಿಸುತ್ತಾರೆ Wheಡಿe ಚಿಡಿe ಥಿou ಅಂತಾ ಸಂದೇಶ ಕಳುಹಿಸುತ್ತಾರೆ ಇವರು ಊome oಡಿ ಖoom ಅಂತಾ ಕಳಿಸಿದ್ರೆ ಗಿiಜeo ಛಿಚಿಟಟ ಎಂದು ಕಳುಹಿಸುತ್ತಾರೆ ಆಗ ಇವರು ವಿಡಿಯೋ ಕಾಲ್ ಮಾಡಿದ್ರೆ ಅ ಕಡೆಯಿಂದ ನಗ್ನವಾಗಿರುವ ಯುವತಿ ವಿಡಿಯೋದಲ್ಲಿ ಲೈವ್ ಬರುತ್ತಾಳೆ ಅದನ್ನು ನೋಡುವ ಇವರು ಕಾಮೋದ್ರೇಗಕ್ಕೆ ಒಳಗಾಗಿ ನೀವೂ ಕೂಡ ನಗ್ನರಾಗಿ ಎಂದು ಚಿಟಟ oಠಿeಟಿ ಜಚಿಡಿಟiಟಿg ಅಂತಾರೆ ಅವಾಗ ಇವರು ನಗ್ನರಾಗಿ ಅವರು ಹೇಳಿದಾ ಹಾಗೇ ಕೇಳುತ್ತಾರೆ ಈ ಆಟವೆನ್ನೆಲ್ಲ ಅವರು ವಾಟ್ಸಪ್ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಇದು ಆದ ಕೆಲವೇ ನಿಮಿಷದಲ್ಲಿ ಇವರಿಗೆ ಅವರು ಮಾಡಿದ ವಿಡಿಯೋ seಟಿಜ ಮಾಡುತ್ತಾರೆ,
ಬಕ್ರಕಾ ಬಲಿ
ಮೋಸ ಮಾಡುವ ಜಾಲದವರು ಸೆಕ್ಸ್ ವಿಡಿಯೋ ಮಾಡುವಾಗಲೇ ಚಾಲಾಕಿತನದಿಂದ ಇವರ ಮೊಬೈಲ್ ಅಲ್ಲಿ ಇರುವ ಕಾಂಟಾಕ್ಟ್ ನಂಬರ್ ಸಮೇತ ಎಲ್ಲಾ ಡಾಟವನ್ನು ಎಗರಿಸಿರುತ್ತಾರೇ, ಇಲ್ಲಿಂದ ಅಸಲಿ ಆಟ ಪ್ರಾರಂಭವಾಗೋದು.
ಅಸಲಿ ಆಟ
ವಿಡಿಯೋ ಕಾಲ್ ಸೆಕ್ಸ್ ಮಾಡಿಕೊಂಡಿರುವ ವಿಡಿಯೋ ಡಿಲೀಟ್ ಮಾಡಬೇಕಾದ್ರೆ ಹಣ ಕೊಡಿ ಇಲ್ಲಾ ಅಂದ್ರೆ ನಿಮ್ಮ ಈ ವಿಡಿಯೋ ಎಲ್ಲರಿಗೂ ಕಳಿಸುತ್ತೇವೆ ಎನ್ನುತ್ತಾರೆ, ಇವರು ಹೇಗೆ ಕಳಿಸುತ್ತಾರೆ ಎಂದು ೫ನಿಮಿಷ ಆಲೋಚನೆ ಮಾಡುವುದರ ಒಳಗೆ ನಿಮ್ಮಲ್ಲಿರುವ ಒಂದೆರಡು ಕಾಂಟಾಕ್ಟ್ ನಂಬರ್ ಗಳಿಗೆ ಫೇಸಬುಕ್ ಅಲ್ಲಿರುವ ಸ್ನೇಹಿತರಿಗೆ ಕಳಿಸುತ್ತಾರೆ ಆಗ ಕಾಮೋದ್ರೆಗಕ್ಕೆ ಒಳಗಾದ ಬಕರಾ ದಯವಿಟ್ಟು ಯಾರಿಗೂ ಕಳಿಸಬೇಡಿ ಅಂದಾ ಮರುಕ್ಷಣವೇ ಹಣದ ಬೇಡಿಕೆ ಇಡುತ್ತಾರೆ ಅವರು ಕೇಳಿದಷ್ಟು ಹಣ ಕೊಡದೆ ಇದಾಗ ಅವರು ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಕಾಂಟಾಕ್ಟ್ ಇರುವವರಿಗೆ ಅ ವಿಡಿಯೋ seಟಿಜ ಮಾಡುತ್ತಾರೆ, ಒಂದು ವೇಳೆ ಹಣ ಕೊಟ್ರು ಅವರಿಗೆ ತೃಪ್ತಿ ಆಗಿಲ್ಲ ಅಂದ್ರೂ ಅ ವಿಡಿಯೋ ಎಲ್ಲರಿಗೂ ಕಳಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ.
ಪ್ರಕರಣದ ಟ್ವಿಸ್ಟ್
ಇವರ ಅಶ್ಲೀಲ ವಿಡಿಯೋ ಯಾವಾಗ ಹರಿದಾಡಲು ಪ್ರಾರಂಭವಾಯಿತೋ ಆಗ ಇವನಿಗೆ ಮಾನ, ಮರ್ಯಾದೆ ಹೋಗುತ್ತೆ ಎನ್ನುವ ಭಯದಲ್ಲಿ ಕೆಲವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ, ಒಂದೇರಡು ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ, ಬೆರಳಣಿಕೆಯಷ್ಟು ಜನರಿಗೆ ಮೋಸ ಮಾಡಿದವರು ಪೊಲೀಸರ ಬಲಿಗೆ ಬಿದಿದ್ದಾರೆ, ಹಲವಾರು ಪ್ರಕರಣಗಳಲ್ಲಿ ಅವರು ಕೈಗೆ ಸಿಕ್ಕಿಲ್ಲಾ,
ಬಾಕ್ಸ್
ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಂಡ್ರು ಎನ್ನುವಂತೆ
ಕೆಲವು ಬುದ್ದಿಜೀವಿಗಳಾದ, ಸಾಹಿತಿಗಳು,ವಕೀಲರು,ರಾಜಕೀಯದವರು,ಡಾಕ್ಟರ್ಸ್, ಪತ್ರಕರ್ತರು,ಯುವಕರು, ಹೆಚ್ಚಾನು ಹೆಚ್ಚು ಇಂತಹ ಕಾಮೋದ್ರೇಗಕ್ಕೆ ಒಳಗಾಗಿ ವಾಟ್ಸಾಪ್ ವಿಡಿಯೋ ಕಾಲ್ ರೆಕಾರ್ಡ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ,ಅಮಾಯಕರು ಯಾರು ಕೂಡ ಇದಕ್ಕೆ ಬಲಿಯಾಗಿಲ್ಲ..

ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ, ಕೆಲವು ಹೊರಗಡೆ ಬಂದಿಲ್ಲ, ಇನ್ನೂ ಕೆಲವು ವಿಡಿಯೋಗಳು ಅಲ್ಲಲ್ಲಿ ಹರಿದಾಡುತ್ತಿವೆ.ಮಾನ ಮರ್ಯಾದೆ ಹೋಗುತ್ತದೆ ಎನ್ನುವ ಭಯದಲ್ಲಿ ಅವರು ಕೇಳಿದಷ್ಟು ಹಣ ನೀಡಿ ಕೈ ಸುತ್ತುಕೊಂಡವರು ಕೂಡ ಇದ್ದಾರೆ.
ಬಾಕ್ಸ್
ಕಾಮೋದ್ರೆಗಕ್ಕೆ ಒಳಗಾಗಿ Sex ಛಿhಚಿಣ viಜeo ಛಿಚಿಟಟ ಅಂತಾ ಟೈಪ್ ಮಾಡಿ ಜಾಹಿರಾತು ಹಾಕಿದ್ದು ನೋಡಿ ಅದರಲ್ಲಿ ಇರುವ ನಂಬರ್ ಗೆ ಕಾಲ್ ಮೆಸೇಜ್ ಮಾಡೋದು ತಪ್ಪು..
ಈ ಮೋಸದ ಜಾಲದಲ್ಲಿ ಹಲವರು ಬಲಿಗೆ ಬಿದಿದ್ದಾರೆ,ಇವರು ಟೀಮ್ ವರ್ಕ್ ಅಲ್ಲಿ ಮೋಸ ಮಾಡುತ್ತಾರೆ,ಇನ್ನೂ ಇಂತಹ ಪ್ರಕರಣಗಳು ನಡಿಯುತ್ತಿರುತ್ತವೆ, ಈ ಜಾಲದಲ್ಲಿ ತೊಡಗಿಕೊಂಡಿರುವವರಲ್ಲಿ ಕರ್ನಾಟಕದವರು ಹೆಚ್ಚು ಇಲ್ಲಾ, ಪಶ್ಚಿಮ ಬಂಗಾಳ, ದೆಹಲಿ,ಉತ್ತರ ಭಾರತದವರೇ ಹೆಚ್ಚು ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದೆ,ರಾಜ್ಯದ ಸೈಬರ್ ಪೊಲೀಸರು ಈಗಗಾಲೇ ಕೆಲವರನ್ನು ಬಂದಿಸಿದ್ದೇವೆ.
ಅಶ್ಲೀಲದ್ದು ಪೋಸ್ಟ್ ಮಾಡಿದ್ದೂ ನೋಡಿದ ನೀವೂ ಅದನ್ನು ಬ್ಲಾಕ್ ಮಾಡಬೇಕು, ಅ ನಂಬರ್ ಗಳಿಗೆ ಫೋನ್,ಮೆಸೇಜ್ ಮಾಡಬಾರದು.ಇದು ಹೆಚ್ಚು ರಾತ್ರಿ ಸಮಯದಲ್ಲಿ ಆನ್ಲೈನ್ ಅಲ್ಲಿ ನಡಿಯುತ್ತದೆ ಒಂದು ವೇಳೆ ಇಂತಹ ಪ್ರಕರಣಗಳು ನಡೆದಾಗ ವಿಚಾಲಿತರಾಗಬೇಡಿ, ಹತ್ತಿರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ, ಅದನ್ನೇ ಮನಸಲ್ಲಿ ಇಟ್ಟುಕೊಂಡು ಆತ್ಮಹತ್ಯೆ, ಇನ್ನಿತರ ಕೆಟ್ಟ ತೀರ್ಮಾನಕ್ಕೆ ಬರಬೇಡಿ ಆದಷ್ಟು ಅಂತಹವುಗಳು ಕಂಡುಬಂದರೆ ಇಗೋನಾರ್ ಮಾಡಿ ಸಾಮಾಜಿಕ ಜಾಲತಾಣ ಒಳ್ಳೆಯದಕ್ಕೂ ಇದೆ ಕೆಟ್ಟದಕ್ಕೂ ಇದೆ ಉಪಯೋಗ ಮಾಡುವವರು ಒಳ್ಳೆಯದಕ್ಕೆ ಜಾಲತಾಣವನ್ನು ಬಳಸಿಕೊಳ್ಳಿ.

ಮಹಾಂತೇಶ್ ಟಿ
ಪೊಲೀಸ್ ಇನ್ಸ್ಪೆಕ್ಟರ್
ಸೈಬರ್ ಪೊಲೀಸ್ ಠಾಣೆ ರಾಯಚೂರು