ಸಾಮಾಜಿಕ ಜಾಲತಾಣದಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ನೀಡಲು ಚಿಂತನೆ 

ದಾವಣಗೆರೆ. ಜು.೧೮; ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಸಭೆ  ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ ಅಧ್ಯಕ್ಷತೆಯಲ್ಲಿ ನಡೆಯಿತು, ಅತಿಥಿಗಳಾಗಿ ಸಾಮಾಜಿಕ ಜಾಲತಾಣದ ಜಿಲ್ಲಾ ಉಸ್ತುವಾರಿಗಳಾದ ದೇವಪುತ್ರ ಹಾಗೂ ಎಲ್.ಎಂ.ನಾಯ್ಕ್ ಉಪಸ್ಥಿತರಿದ್ದರು.ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ, ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಸಮಿತಿಗಳಿಗೆ ಇನ್ನೂ ಹೆಚ್ಚಿನ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಸಾಮಾಜಿಕ ಜಾಲತಾಣವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ತೀರ್ಮಾನಿಸಲಾಯಿತು. ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಏಳನ್ನು ಸಹ ಪಕ್ಷ ಗೆಲ್ಲುವ ವಿಶ್ವಾಸವಿದ್ದು, ಸಾಮಾಜಿಕ ಜಾಲತಾಣ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಗಲಿರುಳು ಕಾರ್ಯ ನಿರ್ವಹಿಸಲು ಕರೆ ನೀಡಲಾಯಿತು.ಈ ಸಭೆಯಲ್ಲಿ ಉಪಾಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮೊಹಮದ್ ಜಿಕ್ರಿಯ, ಬೊಮ್ಮಲಿಂಗಪ್ಪ, ರಾಜು ಸಾದತ್, ರುದ್ರಮುನಿ, ಕಾರ್ಯದರ್ಶಿಗಳಾದ ದರ್ಶನ್ ಕಂಸಾಗರ, ನಾಗರಾಜ್ ಬಿ, ಪರಶುರಾಮ್ ಕೆ.ಟಿ, ಮಲ್ಲಿಕಾರ್ಜುನ್, ವೀರಭದ್ರಪ್ಪ, ಹಾಲೇಶ್, ಗುರು ಪಾಟೀಲ್ ಭಾಗವಹಿಸಿದ್ದರು.