ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಗೆ ಅವಹೇಳನ

ಸಿರುಗುಪ್ಪ, ನ.19: ನಗರದ ತಹಶೀಲ್ದಾರ ಕಛೇರಿಯಲ್ಲಿ ಹೇಮಾನಗೌಡ ಎಂಬ ವ್ಯಕ್ತಿಯು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರು ಚೋಟ ಭೀಮ ಎಂದು ಬರೆದು ಕೊಂಡು ಅನುಯಾಯಿಗಳಿಗೆ ಅವಹೇಳಕನಕಾರಿ ಬರೆದುಕೊಂಡಿದ್ದು, ದಲಿತರಿಗೆ ಮುಸ್ಲಿಂರಿಗೆ ಜಾತಿ ಮತ್ತು ಧರ್ಮಗಳ ಮಧ್ಯ ದ್ವೇಷ ಬೀಜ ಬಿತ್ತುತ್ತಿರುವುದು ಮತ್ತು ಕೋಮುಗಲಬೆ ಸೃಷ್ಠಿ ಮಾಡಿದ ಹೇಮನಗೌಡರ ಮೇಲೆ ಐ.ಟಿ.ಆಕ್ಟ್ ಕಾಯ್ದೆಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅತನ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ದಲಿತಪರ ಒಕ್ಕೂಟದವತಿಯಿಂದ ಸರ್ವಸದ್ಯರು ತಹಶೀಲ್ದಾರ ಎಸ್.ಬಿ.ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು.