ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ಇಡಿ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ:ಜಿ.ಪಂ.ಸಿ.ಇ.ಓ ಗರಿಮಾ ಪನ್ವಾರ್

ಯಾದಗಿರಿ : ಏ.30 : ವಿಧಾನಸಭಾ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯಲು ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ, ಧರ್ಮ, ಜಾತಿ, ಕುರಿತಂತೆ ಅವಹೇಳನಕಾರಿ ಹಾಗೂ ವ್ಯಕ್ತಿಗತ ತೇಜೋವಧೆಗಳಂತಹ ಫೋಸ್ಟ್‍ಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಸಾಮಾಜಿಕ ಜಾಲತಾಣಗಳ ನೋಡಲ್ ಅಧಿಕಾರಿಗಳು ಹಾಗೂ ಮಾಧ್ಯಮ ಕಣ್ಗಾವಲು ಹಾಗೂ ಪ್ರಮಾಣೀಕರಣ ಸಮಿತಿಯ ಸದಸ್ಯರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗರಿಮಾ ಪನ್ವಾರ್ ಅವರು ಸೂಚಿಸಿದ್ದಾರೆ.

 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಎಮ್.ಸಿ.ಎಮ್.ಸಿ ಸಮಿತಿ ಸದಸ್ಯರೊಂದಿಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವ ಕುರಿತಂತೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರುವಿಧಾನಸಭಾ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯಲು ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ, ಧರ್ಮ, ಜಾತಿ, ಕುರಿತಂತೆ ಅವಹೇಳನಕಾರಿ ಹಾಗೂ ವ್ಯಕ್ತಿಗತ ತೇಜೋವಧೆಗಳಂತಹ ಫೋಸ್ಟ್‍ಗಳ ಬಗ್ಗೆ ತೀವ್ರ ನಿಗಾ ಇಡಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದರು.

 ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ನ್ಯಾಯಸಮಾತ ಚುನಾವಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮೇಲಿನಂತೆ ವಿಷಯವುಳ್ಳ ಬರಹದಡಿ ಬರುವ ಛಾಯಾಚಿತ್ರ ಹಾಗೂ ವಿಡಿಯೋಗಳ ಬಗ್ಗೆ ಸಾಮಾಜಿಕ ಜಾಲತಾಣದ ನೋಡಲ್ ಅಧಿಕಾರಿಗಳು ಪತ್ತೆ ಹಚ್ಚಿ, ಮೀಡಿಯಾ ಸ್ಕøಟಿನಿ ಸೆಲ್ ಸಲ್ಲಿಸಿ ಪರಿಶೀಲಿಸಿಕೊಂಡು ನಂತರ ಆಯಾ ಕ್ಷೇತ್ರದ ಚುನಾವಣೆ ಅಧಿಕಾರಿಗಳಿಗೆ ಕಳುಹಿಸಿ ಪ್ರಕರಣ ದಾಖಲಾದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅದರಂತೆ ದೂರು ಕೋಶ ಹಾಗೂ ಪೊಲೀಸ್ ಇಲಾಖೆ ವ್ಯಾಪ್ತಿಯ ಸೈಬರ್ ಕ್ರೈಮ್ ವಿಭಾಗದ ನೇರವನ್ನು ಸಹ ಪಡೆದು ಐ.ಪಿ.ಸಿ 171 (1) (ಜಿ) ಹಾಗೂ ವಿವಿಧ ಕಾಯ್ದೆ ಯಡಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದರು.

 ಈ ಸಭೆಯಲ್ಲಿ ಮಾಧ್ಯಮ ಕಣ್ಗಾವಲು ಹಾಗೂ ಪ್ರಮಾಣೀಕರಣ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಕೃಷಿ ಜಂಟಿ ನಿರ್ದೇಶಕರಾದ ಶ್ರೀ ಅಬಿದ್, ಸಾಮಾಜಿಕ ಜಾಲತಾಣದ ನೋಡಲ್ ಅಧಿಕಾರಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ದೀಪಾ, ದೂರು ಕೋಶದ ನೋಡಲ್ ಅಧಿಕಾರಿ ಅಜೀತ್‍ನಾಯ್ಕ್, ಮಾಧ್ಯಮ ನಿರ್ವಹಣೆ ನೋಡಲ್ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು (ಪ್ರಭಾರಿ) ಸುಲೈಮಾನ್ ಡಿ.ನದಾಫ್ ಸೇರಿದಂತೆ ಎಮ್.ಸಿ.ಎಮ್.ಸಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.