ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಸಂದೇಶ (ಪೆÇೀಸ್ಟ್) ಹಾಕಿದರೆ ಕಠಿಣ ಕ್ರಮ : ಸಿಪಿಐ ರವೀಂದ್ರ ನಾಯ್ಕೋಡಿ

ಅಥಣಿ : ಜೂ.9:ವಿವಾದಾತ್ಮಕ ವಾಟ್ಸಪ್ ಸ್ಟೇಟಸ್‍ನಿಂದ ನೆರೆಯ ಕೊಲ್ಹಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆದ್ದರಿಂದ ಅಥಣಿ ವಲಯದ ನಾಗರಿಕರು ತಮ್ಮ ಮೊಬೈಲ್ ಗಳಲ್ಲಿ ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಯಾವುದೇ ವಿವಾದಿತ / ವಿವಾದಾತ್ಮಕ ಪೆÇೀಸ್ಟ್, ಸ್ಟೇಟಸ್ ಹಾಕಬಾರದು ಎಂದು ಅಥಣಿ ವಲಯದ ಸಿಪಿಐ ರವೀಂದ್ರ ನಾಯ್ಕೋಡಿ ಹೇಳಿದರು.
ಅವರು ಅಥಣಿ ಪೆÇಲೀಸ್ ಠಾಣೆಯಲ್ಲಿ ಇಂದು ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಸಂದೇಶಗಳನ್ನು, ಪೆÇೀಸ್ಟರ್ ಮತ್ತು ಹಾಡುಗಳನ್ನು ಪೆÇೀಸ್ಟ್ ಮಾಡುವುದಾಗಲಿ ಮತ್ತು ಸ್ಟೇಟಸ್ ಇಡುವುದಾಗಲಿ ಮಾಡಬಾರದು. ಒಂದು ವೇಳೆ ಇಂತಹ ವಿವಾದಾತ್ಮಕ ಸಂದೇಶಗಳನ್ನು ಪೆÇೀಸ್ಟ್ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಥಣಿ ಪೆÇಲೀಸ್ ಠಾಣೆಯ ಪಿಎ??? ಶಿವಶಂಕರ ಮುಕರಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಮಾಡಲಾದ ಧಾರ್ಮಿಕ ಸಂದೇಶಕ್ಕೆ ಸಂಬಂಧಿಸಿದಂತೆ ನೆರೆಯ ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಗೆ ಪ್ರಚೋದನೆ ನೀಡದೆ ಎಲ್ಲರೂ ಶಾಂತತೆಯನ್ನು ಕಾಪಾಡಿಕೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಸಂದೇಶಗಳನ್ನು ಪೆÇೀಸ್ಟ್ ಮಾಡಿದವರ ವಿರುದ್ಧ ಕಲಂ 153ಎ, 295 ಎ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೆÇೀಲಿಸ್ ಇಲಾಖೆಯ ಸಿಬ್ಬಂದಿ ಹಾಗೂ ಅಥಣಿ ನಾಗರಿಕರು ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು,