ಸಾಮಾಜಿಕ ಚಿಂತನೆಗಳಿಂದ ಜೀವನ ಸಾರ್ಥಕ

ಅಫಜಲಪುರ: ಜೂ.22:ಜನ್ಮ ದಿನಗಳು ಆಡಂಬರದ ಆಚರಣೆಗಳಾಗದೆ ಸಾಮಾಜಿಕ ಚಿಂತನೆಗಳಿಗೆ ಮೀಸಲಿಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ತಾಲೂಕು ಉಪಾಧ್ಯಕ್ಷ ಗುರುಶಾಂತ ಡಾಂಗೆ ಅವರ ಜನ್ಮದಿನದ ಅಂಗವಾಗಿ ಗೆಳೆಯರ ಬಳಗದಿಂದ ಹಮ್ಮಿಕೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ಮತ್ತು ಉನ್ನತ ಜೀವನ ಮಟ್ಟ ಹೊಂದಿದವರು ಸಾಮಾಜಿಕ ಕಳಕಳಿಯ ಕೆಲಸ ಮಾಡಬೇಕು. ಸಮಾಜದ ಕುರಿತ ಜವಾಬ್ದಾರಿ ಅರಿತು ಕೈಗೊಳ್ಳುವ ಸೇವಾ ಚಟುವಟಿಕೆಗಳಿಂದ ಜೀವನ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮದ ಬಳಿಕ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು ಹಾಗೂ ಅಂಧ ಮಕ್ಕಳ ಶಾಲೆಯಲ್ಲಿನ ಮಕ್ಕಳಿಗೆ ಹಣ್ಣು ಹಂಪಲು ಮತ್ತು ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.

ಈ ವೇಳೆ ತಾ.ಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ ಸಾಹುಕಾರ, ಸಂಗ್ರಾಮಗೌಡ ಪಾಟೀಲ್, ಬಸಯ್ಯ ನಂದಿಕೋಲ, ಆನಂದ ರಜಪೂತ,
ಸಂತೋಷ ಮಲಗೊಂಡ, ರಾಜು ಶಿರವಾಳ, ಸಿದ್ದಾರಾಮ ನಾಗಣಸೂರ, ಪ್ರಶಾಂತ ಅತನೂರ, ಧನು ಕೆಂಗನಾಳ, ಧೃವಸಾಗರ, ರವಿ ನೂಲಾ, ಜೆ.ಬಿ.ಆರ್ ಜಾಲಹಳ್ಳಿ, ಶಶಿಧರ ಕಾಚಾಪುರೆ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.