ಸಾಮಾಜಿಕ ಕ್ರಾಂತಿಸೂರ್ಯ ಡಾ. ಅಂಬೇಡ್ಕರ್

ಬೀದರ:ಎ.15:ಸಂವಿಧಾನಶಿಲ್ಪಿ ಎಂದೇ ಖ್ಯಾತರಾಗಿದ್ದ ಡಾ. ಅಂಬೇಡ್ಕರ್ ಅವರು ಸಾಮಾಜದಲ್ಲಿದ್ದ ಅಸ್ಪøಶ್ಯತೆಯನ್ನು ತೊಡೆದು ಹಾಕಲು ತಮ್ಮ ಇಡಿ ಜೀವನದ್ದುದ್ದಕ್ಕೂ ಹೋರಾಟ ಮಾಡಿದರು ಎಂದು ಸಹಾಯಕ ಪ್ರಾಧ್ಯಾಪಕ ಡಾ. ಬಿ. ವಿ ರವಿಚಂದ್ರ ನುಡಿದರು.
ಬೀದg£ ಕ.ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏ. 14 ರಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಲ್ಲಿ ಮಾತನಾಡುತ್ತ ಸಮಾಜದಲ್ಲಿದ್ದ ಅಸ್ಪøಶ್ಯತೆಯ ಪಿಡುಗನ್ನು ನಿವಾರಿಸಲು ತಮ್ಮ ಬುದುಕಿನುದ್ದಕ್ಕೂ ಶ್ರಮಿಸಿದವರು ಡಾ. ಅಂಬೇಡ್ಕರ್. ಇವರ ದೇಶ ಪ್ರೇಮ, ಸಾಮಾಜಿಕ ಕಳಕಳಿ, ಚಿಂತನೆ ಎಲ್ಲವೂ ದೇಶದ ಹಿತಕ್ಕಾಗಿದ್ದುವು. ಇವರಂತೆ ನಾವೆಲ್ಲರೂ ಸದಾ ರಾಷ್ಟ್ರದ ಏಳಿಗೆಗಾಗಿ ದುಡಿಯುವ ಮನಸ್ಸು ಮಾಡಬೇಕು ಎಂದು ತಿಳಿಸಿದರು.
ರೋನಾಲ್ಡ್ ಸಂಪತ್ ಮಾತನಾಡುತ್ತ ಕಟ್ಟ ಕಡೆಯ ವ್ಯಕ್ತಿಯನ್ನು ಮೆಲೆತ್ತುವ ಕಾರ್ಯ ಅಂಬೇಡ್ಕರ್ ಅವರು ಮಾಡಿದರು. ಅಂಥ ಪವಿತ್ರ ಕೆಲಸ ಮಹಾನ ನಾಯಕರಾಗಿದ್ದ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದರೆಂದರು.
ಸಂಸ್ಥೆಯ ನಿರ್ದೇಶಕರಾದ ರವಿ ಹಾಲಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗೆ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರೋ. ಶ್ರೀಕಾಂತ ದೊಡ್ಡಮನಿ, ಉಪ ಪ್ರಾಚಾರ್ಯರಾದ ಪ್ರೋ. ಅನಿಲಕುಮಾರ ಚಿಕ್ಕಮಾಣೂರ್, ಡಾ. ರಾಜೇಂದ್ರ ಬಿರಾದಾರ, ಡಾ. ಎಂ. ಎಸ್. ಚೆಲ್ವಾ, ಡಾ. ವಿನೋದಕುಮಾರ ಕಾಳೆಕರ್, ಅಶೋಕ ಹುಡೆದ್, ಡಾ. ಮಹಾನಂದಾ ಮಡಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.