ಸಾಮಾಜಿಕ ಕ್ರಾಂತಿಯಲ್ಲಿ ಸಿದ್ಧರಾಮೇಶ್ವರ ಕೊಡುಗೆ ಅಪಾರ

ಭಾಲ್ಕಿ:ಜ.15:12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಸಾಮಾಜಿಕ ಕ್ರಾಂತಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಕೊಡುಗೆ ಅಪಾರ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ರಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಸಂಕ್ರಾಂತಿ ಹಬ್ಬದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಲ್ಲಮಪ್ರಭು ಹಾಗೂ ಚನ್ನಬಸವಣ್ಣನವರನ್ನು ಗುರುವಾಗಿ ಸ್ವಿ?ಕರಿಸಿ ಇಷ್ಟಲಿಂಗ ಧರಿಸಿದ ಸಿದ್ದರಾಮರನ್ನು ಅನುಭವ ಮಂಟಪದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಎಂದು ಕರೆಯಲಾಗುತ್ತಿತ್ತು. ಸಿದ್ಧರಾಮೇಶ್ವರರು ರಚಿಸಿದ ಸುಮಾರು 2 ಸಾವಿರದಷ್ಟು ವಚನಗಳು ಲಭ್ಯವಿವೆ. ಸಿದ್ಧರಾಮೇಶ್ವರರ ತತ್ವ ಹಾಗೂ ಸಿದ್ದಾಂತ ಸಾರುವ ನಿಟ್ಟಿನಲ್ಲಿ ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಸಂಕ್ರಮಣ ನಮ್ಮ ನಾಡಿನ ಹಿರಿಮೆ ಗರಿಮೆ ಪರಿಚಯಿಸುವ ಹಬ್ಬ. ಸಂಸ್ಕøತಿಯ ಪ್ರತೀಕ. ನಾಡಿನ ಜನ ಕಹಿ ಮರೆತು ಸಿಹಿ ಹಂಚಿ ನಲಿವು ನಾಡ ಹಬ್ಬ. ಸಂಕ್ರಾಂತಿ ಎಲ್ಲರ ಬಾಳಿನಲ್ಲಿ ನವ ಉತ್ಸಾಹ, ಚೈತನ್ಯ ತರಲಿ. ಎಂದು ಶುಭ ಹಾರೈಸಿದರು.

ಪ್ರಾಚಾರ್ಯ ಬಸವರಾಜ ಮೋಳಕೀರೆ ಮಾತನಾಡಿ, ಸಂಕ್ರಾಂತಿ ಸಹಬಾಳ್ವೆಯಿಂದ ಬಾಳುವ ಮಾನವೀಯ ಮೌಲ್ಯ ಕಲಿಸುವ ಹಬ್ಬವಾಗಲಿ ಎಂದರು.

ಮುಖ್ಯಶಿಕ್ಷಕ ನಾಗರಾಜ ಮಠಪತಿ ಮಾತನಾಡಿ, ಸಂಕ್ರಮಣ ಸೂರ್ಯ ತನ್ನ ಪಥ ಬದಲಿಸುವ ಪರ್ವ. ದಕ್ಷಿಣಾಯನಿಂದ ಉತ್ತರಾಯಣಕ್ಕೆ ಸಾಗುವ ಸೂರ್ಯ ಸಂಕ್ರಮಣ. ಸಂಕ್ರಮಣ ನಮ್ಮ ಪಂರಪರೆಯ ವಾರುಸುದಾರಿಕೆ ಪರಿಚಯಿಸುವ ಹಬ್ಬ ಎಂದು ತಿಳಿಸಿದರು.

ಸಿದ್ರಾಮೇಶ ವಾಲೆ ಮಾತನಾಡಿದರು.

ಪ್ರಮುಖರಾದ ಜಯಕ್ಕಾ ಗಾಂವ್ಕರ್, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಮುಖ್ಯಶಿಕ್ಷಕ ಧರ್ಮಣ್ಣ, ಅನಿಲ್ ಪಾಟೀಲ ಇದ್ದರು.

ರಾಸುರೆ ಗಣೇಶ ನಿರೂಪಿಸಿ, ವಂದಿಸಿದರು.