ಸಾಮಾಜಿಕ ಕಾರ್ಯದಿಂದ ನೆಮ್ಮದಿ

ಸಿರವಾರ,ಮೇ.೨೨-
ಬಡವರಿಗೆ, ಅಂಧರಿಗೆ, ಅನಾಥರಿಗೆ ಸಹಾಯ ಮಾಡುವ ಸಾಮಾಜಿಕ ಕಾರ್ಯದಿಂದ ಮನುಷ್ಯನಿಗೆ ನೆಮ್ಮದಿ ದೊರೆಯುತ್ತದೆ ಎಂದು ರಾಯಚೂರು ಸೋಮವಾರ ಪೇಟೆ ಹಿರೇಮಠದ ರಾಯಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಸಮೀಪದ ನೀಲಗಲ್ ಗ್ರಾಮದಲ್ಲಿ ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ೨೮ನೇ ಜನ್ಮದಿನದ ಅಂಗವಾಗಿ ಸನ್ಮಾನಿಸಿ ಭಕ್ತರನ್ನು ಕುರಿತು ಮಾತನಾಡಿ ಶ್ರೀಮಠದ ಆಧ್ಯಾತ್ಮಿಕ ಪುರಾಣ, ಪ್ರವಚನ, ಜಾತ್ರೆ, ಸಾಮೂಹಿಕ ವಿವಾಹ, ಸಾಧಕರಿಗೆ ಪ್ರಶಸ್ತಿ ಅನೇಕ ಕಾರ್ಯಗಳು ಮೆಚ್ಚುಗೆಯಾಗಿವೆ, ಚಿಕ್ಕ ವಯಸ್ಸಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಗಳು, ಭಕ್ತರು ಹತ್ತಿರವಾಗಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶ್ರೀಗಳಾದ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು,
ಮಾನವಿ ಕಲ್ಮಠ ಶ್ರೀ ವಿರುಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನ್ ಪುರ ಶಂಭು ಸೋಮನಾಥ ಶಿವಾಚಾರ್ಯ, ಲಕ್ಷ್ಯoಪುರ ಮಠದ ಶ್ರೀಗಳು ಸೇರಿದಂತೆ ಗಣ್ಯ ಮಾನ್ಯರು, ನೀಲಗಲ್ ಸೇರಿ ವಿವಿಧ ಗ್ರಾಮದ ಭಕ್ತರು ಭಾಗವಹಿಸಿದ್ದರು.