ಸಾಮಾಜಿಕ ಕಳಕಳಿ ಮೆರೆದ ಹೊಂದಿಸಿ ಬರೆಯಿರಿ…

“ಹೊಂದಿಸಿ ಬರೆಯಿರಿ” ಚಿತ್ರದ ಚಿತ್ರೀಕರಣ ಮುಗಿದಿದ್ದು  ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ರಾಮೇನಹಳ್ಳಿ ಜಗನ್ನಾಥ “ಹೊಂದಿಸಿ ಬರೆಯಿರಿ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಿದ್ಯಾರ್ಥಿ ಜೀವನ, ಕಾಲೇಜು ನಂತರದ ಜೀವನದ  ಏರಿಳಿತದ 12ವರುಷಗಳ ಸುದೀರ್ಘ ಕಥಾಹಂದರ  ಹೊಂದಿರುವ ಚಿತ್ರದಲ್ಲಿದೆ.

ಚಿತ್ರ ತಂಡ ಇತ್ತೀಚೆಗೆ ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸಿದೆ.. ಈ ಕ್ಷಣಕ್ಕೆ ಕಲಾವಿದರಾದ ಪ್ರವೀಣ್ ತೇಜ್ , ನವೀನ್ ಶಂಕರ್ , ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ , ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಥ್ ನೀಡಿದ್ದಾರೆ.

ಟೀಸರ್ ಮೂಲಕ ಈಗಾಗಲೇ ಹೊಸ ಭರವಸೆ ಹುಟ್ಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾದ ಮೊದಲ ಹಾಡು ಶೀಘ್ರದಲ್ಲಿ  ಬಿಡುಗಡೆಯಾಗಲಿದೆ.

ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು  ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶಾಂತಿ ಸಾಗರ್‌  ಕ್ಯಾಮೆರಾ ಹಿಡಿದಿದ್ದಾರೆ.  ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.