ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಸಿದ್ದರಾಮಯ್ಯ

(ಸಂಜೆವಾಣಿ ವಾರ್ತೆ)
ಇಂಡಿ;ಜು.25: ಬಡವರ ದೀನದುರ್ಬಲರ, ಅಲ್ಪಸಂಖ್ಯಾತರ ಹಿಂದುಳಿದವರ ಬಗ್ಗೆ ಸಾಮಾಜಿಕ ಕಳಕಳಿಯುಳ್ಳ ಮೇರು ವ್ಯಕ್ತಿತ್ವ ಹೊಂದಿದ ರಾಜಕಾರಣಿಗಳಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಾತ್ರ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪೂರ ರಸ್ತೆಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಂದಿಗೂ ಕೂಡಾ ಜನ್ಮದಿನಾಚರಣೆ ಮಾಡಿಕೊಂಡವರಲ್ಲ ಅವರ ಕಾರ್ಯಕರ್ತರು, ಅಭಿಮಾನಿಗಳ ಸದಾಶೇಯದ ಮೇರೆಗೆ ದಾವಣಗೇರಿಯಲ್ಲಿಆಯೋಜಿಸಲಾಗಿದೆ. ಇಂದೊಂದು ಪಕ್ಷ ಸಂಘಟನೆ ಮತ್ತು ಶಕ್ತಿ ಪ್ರದರ್ಶನ ಎಂದರೆ ತಪ್ಪಾಗುವುದಿಲ್ಲ.
ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ರಾಷ್ಟ್ರ ,ರಾಜ್ಯ ನಾಯಕರುಗಳ ಅಪಾರ ಅಭಿಮಾನಿಗಳು ಸುಮಾರು 8 ರಿಂದ 10 ಲಕ್ಷ ಜನಸೇರುವ ನೀರಿಕ್ಷೆ ಇರುವುದರಿಂದ ನನ್ನ ಮತಕ್ಷೇತ್ರದಿಂದ ಕೂಡಾ ಹೆಚ್ಚಿನ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೋಳ್ಳಬೇಕು. 2013ರಲ್ಲಿ ಮುಖ್ಯ ಮಂತ್ರಿ ಅವಧಿಯಲ್ಲಿ ಇಂಡಿ ಮತಕ್ಷೇತ್ರಕ್ಕೆ ಅನುಧಾನ ಹೊಳೆಯನ್ನೆ ಹರಿಸಿ, ಈ ಭಾಗದ ನೀರಾವರಿ ಯೋಜನೆ ಕಾಯಕಲ್ಪ ನೀಡಿದ್ದಾರೆ. ಯಾರು ಸಹಾಯ ಮಾಡಿದ್ದಾರೆ ಸ್ಮರಿಸುವುದು ಮನುಷ್ಯ ಧರ್ಮ .
ಲಿಂಬೆ ಬೆಳೆಯುವ ರೈತರು ಸಂಕಷ್ಟದಲ್ಲಿರುವದನ್ನು ಕಣ್ಣಾರೆ ಕಂಡ ಅವರು ಲಿಂಬೆ ಅಭಿವೃದ್ದಿ ಸ್ಥಾಪಿಸಿ ಅದಕ್ಕೊಂದು ಸ್ಥಾನ ಬರುವಂತೆ ಮಾಡಿದ್ದಾರೆ. ಅನ್ನಭಾಗ್ಯ , ಶೋಷಿತ ಸಾಲ ಮನ್ನಾ ಇಡೀ ದೇಶದಲ್ಲಿಯೇ ಸಾಲ ಮನ್ನಾ ಮಾಡಿದ ಧಿಮಂತ ನಾಯಕ ಇವರು ಇನ್ನೋಬ್ಬರಿಗೆ ಮಾದರಿ .
ಮುಖ್ಯ ಮಂತ್ರಿಗಳ ಸ್ಥಾನಕ್ಕಾಗಿ ಕಚ್ಚಾಟ ಎಂಬುದು ಮಾಧ್ಯಮಗಳ ಸೃಷ್ಠಿ ಹೈಕಮಾಂಡ್ ವರಿಷ್ಠರ ಅಭಿಪ್ರಾಯ ಯಾರು ರಾಜ್ಯ ಮುನ್ನಡೇಸಿಕೊಂಡು ಹೋಗುವ ಶಕ್ತಿ, ಸಾಮಥ್ರ್ಯ ಇದೆ ಅಂತವರನ್ನು ಮಾಡುತ್ತಾರೆ, ಕಾಂಗ್ರೆಸ್ ದೊಡ್ಡ ಪಕ್ಷ ಗಟಾನುಗಟಿ ನಾಯಕರುಗಳು ಮುಖ್ಯ ಮಂತ್ರಿ ರೇಸ್‍ನಲ್ಲಿ ಇದ್ದಾರೆ ಮೋದಲು ಪಕ್ಷ ಸಂಘಟಿಸೋಣ , ಭ್ರಷ್ಟಾಚಾರ ಮುಕ್ತ, ಪ್ರಮಾಣಿಕತೆ ದೇಶದಲ್ಲಿ ಇರಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಒಂದು ವೇಳೆ ಕಾಂಗ್ರೆಸ್ ಪಕ್ಷ ಇರದಿದ್ದರೆ ಸಾಮಾನ್ಯ ಬಡವರಿಗೆ ದೀನದುರ್ಬಲರಿಗೆ ಉಳಿಗಾಲವಿಲ್ಲ ಎಂದರು.
ಕೆ.ಎಮ್ ಎಫ್ ಅಧ್ಯಕ್ಷ ಸಾಂಬಾಜಿ ಮಿಸಾಳೆ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಕಾಮೇಶ ಉಕಲಿ, ಭೀಮಣ್ಣಾ ಕೌಲಗಿ, ಅಣ್ಣಾರಾಯ ಬಿದರಕೋಟಿ ಮಾತನಾಡಿದರು.
ಕಲ್ಲನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಶ್ರೀಕಾಂತ ಕೂಡಿಗನೂರ, ರಷೀದ ಅರಬ,ಮಂಜು ಕಾಮಗೊಂಡ, ಶ್ರೀಮಂತ ಇಂಡಿ, ಜೈನೂದಿನ ಬಾಗವಾನ, ಸತಾರ ಬಾಗವಾನ,ಮುನ್ನಾ ಡಾಂಗೆ, ಸಂಜು ಚವ್ಹಾಣ, ಮಹಿಬೂಬ ಅರಬ, ಅವಿನಾಶ ಬಗಲಿ, ನಿರ್ಮಲಾ ತಳಕೇರಿ ಸೇರಿದಂತೆ ಅನೇಕ ಮುಖಂಡರು ಇದ್ದರು.