ಸಾಮಾಜಿಕ ಅಂತರ ಮಾಯ: ಆತಂಕ

ಬ್ಯಾಡಗಿ,ಜೂ 6: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಲಸಿಕೆಯನ್ನು ನೀಡಲು ಮುಂದಾಗಿದ್ದು, ಸಾರ್ವಜನಿಕರು ಮಾತ್ರ ಸಾಮಾಜಿಕ ಅಂತರ ಮರೆತು ಲಸಿಕೆಗಾಗಿ ಗುಂಪು ಗುಂಪಾಗಿ ನೂಕು ನುಗ್ಗಲಾಟ ನಡೆಸಿರುವುದು ಆತಂಕಕ್ಕೆ ಎಡೇ ಮಾಡಿ ಕೊಟ್ಟಿದೆ.
ತಾಲೂಕಾ ಪಂಚಾಯತ ಆವರಣದಲ್ಲಿರುವ ಕಟ್ಟಡದಲ್ಲಿ ತಾಲೂಕಾ ಆಡಳಿತ ವತಿಯಿಂದ 18ರಿಂದ 45ವಯೋಮಾನದ ಒಳಗಿನ ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲದೇ ಜನರು ಗುಂಪು ಗುಂಪಾಗಿ ಲಸಿಕೆ ಹಾಕಿಸಲು ನುಗ್ಗುವಂತಾಗಿದೆ. ಈ ಬಗ್ಗೆ ತಾಲೂಕಾ ಆಡಳಿತ ಯಾವ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕಾ ಆರೋಗ್ಯಾಧಿಕಾರಿ ಡಾ.ಸುಹೀಲ್ ಹರವಿ, ಕೋವಿಡ್ ಸೋಂಕಿನ ಬಗ್ಗೆ ಸಾರ್ವಜನಿಕರು ಹೆಚ್ಚು ಮುಂಜಾಗ್ರತೆ ವಹಿಸುವುದು ಅತ್ಯವಶ್ಯವಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಇರುವುದು ಸೇರಿದಂತೆ ನೂಕಾಟ ನಡೆಸಿರುವುದು ವಿಪರ್ಯಾಸ, ಈ ಬಗ್ಗೆ ತಾಲೂಕಾ ಆಡಳಿತಕ್ಕೆ ತಿಳಿಸಿ ಪೆÇಲೀಸ್ ಬಂದೋಬಸ್ತ್ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.