ದಿನಸಿ ಕೊಳ್ಳುವಂತೆ ಮಧ್ಯದ ಅಂಗಡಿ ಮುಂದೆ ಸಾಮಾಜಿಕ ಅಂತರ ಮರೆತ ಜನ

ಮರಿಯಮ್ಮನಹಳ್ಳಿ, ಜೂ.01: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ವಿಧಿಸಿರುವ ಲಾಕ್ ಡೌನ್‌ನಲ್ಲಿ ಒಂದೆಡೆ ಜನರು ದಿನಸಿ ಪದಾರ್ಥಗಳನ್ನು ಕೊಳ್ಳಲು ಮುಗಿಬಿದ್ದರೆ, ಇನ್ನೊಂದೆಡೆ ಮದ್ಯ ಪ್ರಿಯರು ಕೂಡ ತಮ್ಮ ವಾರದ ಮಟ್ಟಿಗಿನ ಮದ್ಯವನ್ನು ಕೊಳ್ಳಲು ಮದ್ಯದಂಗಡಿ ಮುಂದೆ ಮುಗಿಬಿದ್ದಿದ್ದಾರೆ.ಮರಿಯಮ್ಮನಹಳ್ಳಿಯ ಕೆಲ ಮದ್ಯದಂಗಡಿಗಳ ಮುಂದೆ ಮದ್ಯ ಪ್ರಿಯರು ಸಾಲು ಸಾಲಾಗಿ ನಿಂತು ಕೊಳ್ಳುವುದು ಕಂಡು ಬಂತು. ಅಲ್ಲದೇ ಕೆಲ ಅಂಗಡಿಗಳಲ್ಲಿ ಮದ್ಯ ಖಾಲಿಯಾಗಿದ್ದು, ಸ್ಟಾಕ್ ಬರುವುದನ್ನೇ ಕಾಯ್ದು ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೇ ಕುಳಿತು ತಮ್ಮ ಸರತಿಗಾಗಿ ಕಾಯ್ದು ಕುಳಿತಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಆಹಾರಕ್ಕಾಗಿ ನಾಗರಿಕರು ಪರದಾಡುತ್ತಿದ್ದು,  ಇಲ್ಲಿ ಮದ್ಯಕ್ಕೆ ಯಾವುದೇ ಆರ್ಥಿಕ ಕೊರತೆ ಕಾಣದಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಕೆಲವು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.