ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರ ; ಸಾಮಾನ್ಯರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯ?

ಗುರುಮಠಕಲ್ :ಅ.30: ತಾಲೂಕಿನ ಅನಪೂರ ಗ್ರಾಮದಲ್ಲಿ ಮಹಾರ್ಷಿ ವಾಲ್ಮಿಕಿ ಪ್ರಷ್ಠಾಪನೆ ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ನೂರಾರು ಜನರಲ್ಲಿ ಬಾಗಿಯಾಗಿ ಗ್ರಾಮದ ಮುಖಂಡರು ಕಾರ್ಯಕರ್ತರು ಹಿಂಬದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ.

ಮಹಾಮಾರಿ ಕೊರೋನಾ ತಡೆಗಟ್ಟಲು ದೇಶದಾದ್ಯಂತ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ, ರಾಜಕೀಯ ನಾಯಕರು ಸಾಮಾನ್ಯರಿಗೆ ಸಹಾಯ ಮಾಡುವ ಕಾರ್ಯಕ್ರಮಗಳು ಸಾಮಾಜಿಕ ಅಂತರ ಉಲ್ಲಂಘನೆ ಮಾಡುವ ವೇದಿಕೆಯಾಗಿದೆ. ಸಾಮಾನ್ಯರು ಎದುರು ಗುಂಪು ಕಟ್ಟಿ ನಿಂತರೆ ಪೆÇಲೀಸರು ಎಚ್ಚರಿಕೆ ನೀಡಿಯೊ, ಅಥವಾ ಲಾಠಿ ತೋರಿಸೋ ಚದುರಿಸೋದು ನೋಡಿದ್ದೇವೆ. ಆದರೆ ರಾಜಕೀಯ ನಾಯಕರು ಬಡವರಿಗೆ ಸಹಾಯ ಮಾಡುವ ವೇದಿಕೆಯಲ್ಲಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರುವುದು ಮೇಲಿಂದ ಮೇಲೆ ಟೀಕೆಗೆ ಒಳಗಾಗುತ್ತಿದೆ.

ತಾಲೂಕಿನಲ್ಲಿ ಕೊರೋನಾ ಮುಂಜಾಗ್ರತಾ ಜವಾಬ್ದಾರಿ ಹೊತ್ತಿರುವ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಕೊರೋನಾ ಸಾಮಾಜಿಕ ಅಂತರವನ್ನೇ ಗಾಳಿಗೆ ತೂರಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲು ನಿಯಮ ಉಲ್ಲಂಘನೆ ಮಾಡಿದ್ದಾರೆ. ಮಾಸ್ಕ್ ಧರಿಸಿದ್ದರು ಕನಿಷ್ಠ ಅಂತರವನ್ನು ಕಾಯ್ದುಕೊಳ್ಳುವ ವಿಚಾರವನ್ನೆ ನಿರ್ಲಕ್ಷ್ಯ ಮಾಡಿದ್ದಾರೆ