ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆಯಲು ಡಾ.ರಾಜೇಶ್ವರಿ ಗೋಲಗೇರಿ ಮನವಿ

ವಿಜಯಪುರ, ಮೇ.29-ನಗರದ ವ್ಹಿ.ಎಸ್.ಡಿ.ಈ.ಎಸ್ ವೆಲ್‍ಫೇರ್ ಸೋಸಾಯಿಟಿ ಹಾಗೂ ಗಾನಯೋಗಿ ಸಂಸ್ಥೆಗಳು ಜಂಟಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಸರಕಾರಿ ಆಯುಷ ಆಪ್ಪತ್ರೆಯ ಆವರಣದಲ್ಲಿ ಹಾಡು ಹಾಗೂ ಮನರಂಜನೆಯ ಮೂಲಕ ಕೋವಿಡ್ ಲಸಿಕೆ ಪಡೆಯಲು ಬಂದಿದ್ದ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಕೋವಿಡ್ ಲಸಿಕೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದ ಜಿಲ್ಲಾ ಕುಟುಂಬಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರಾಜೇಶ್ವರಿ ಗೋಲಗೇರಿ ಹಾಗೂ ಡಾ. ಜೈಬುನ್ನಿಸಾ ಬೀಳಗಿ ಜಿಲ್ಲಾ ಮಲೇರಿಯಾ ಅಧಿಕಾರಿಗಳು ಮಾತನಾಡಿ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡರು.
ಇದೇ ಸಮಯದಲ್ಲಿ ನಿರಂತರವಾಗಿ ಸರತಿ ಸಾಲಿನಲ್ಲಿ ಲಸಿಕೆಗಾಗಿ ಕಾದು ನಿಂತಿದ್ದ ಸಾರ್ವಜನಿಕರಿಗೆ ಸಂತೋಷ ಚವ್ಹಾಣ, ಸಚೀನ ವಾಲೀಕಾರ ರವರು ಹಾಡಿನ ಮೂಲಕ ಮನರಂಜನೆ ಮತ್ತು ಜಾಗೃತಿಯನ್ನು ಮೂಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿಗಳಾದ ಆರ್.ಎಮ್ ಹಂಚಿನಾಳ ರವರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಪ್ರಸ್ತುತ ದಿನಗಳಲ್ಲಿ ಜನರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಲಸಿಕೆ ಪಡೆದುಕೊಂಡು ಕೋವಿಡ್ ವಿರುಧ್ದ ಹೋರಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿ.ಎಸ್.ಡಿ.ಈ.ಎಸ್ ಸಂಸ್ಥೆಯ ಪ್ರಶಾಂತ ದೇಶಪಾಂಡೆ ಕೋವಿಡ್‍ನಿಂದ ಬಳಲುತ್ತಿರುವ ಮತ್ತು ಲಸಿಕೆ ಪಡೆಯಲು ಬರುತ್ತಿರುವ ಜನರಲ್ಲಿ ಸಾಮಾನ್ಯವಾಗಿ ಆತಂಕ ಕಾಡುತ್ತಿರುತ್ತದೆ, ಜನರಲ್ಲಿನ ಆತಂಕ ದೂರ ಮಾಡಿ ಮನರಂಜನೆಯ ಮೂಲಕ ಜಾಗೃತಿ ಮತ್ತು ಹೊಸ ಚೈತನ್ಯ ಮೂಡಿಸುವುದು ನಮ್ಮ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಾನಯೋಗಿ ಸಂಸ್ಥೆಯ ಪ್ರಕಾಶ ಆರ್.ಕೆ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು ಹಾಗೂ ಈಗಾಗಲೇ ಕೆಲ ಕೋವಿಡ್ ಸೊಂಕಿತರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಹಾಸ್ಯ, ಹಾಡುಗಳ ಮೂಲಕ ಜನರ ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುವ ಕೆಲಸ ಆರಂಭಿಸಿದ್ದೇವೆ ಹಾಗೂ ವಿಜಯಪುರ ನಗರದÀ ವಿವಿಧ ಭಾಗಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಅನುರಾಧಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ ಕೋಳುರ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಶ್ರೀ.ಎಸ್.ಎಸ್.ಚಟ್ಟೇರ್, ಚಂದ್ರಶೇಖರ, ಹಾಗೂ ವಿ.ಎಸ್.ಡಿ.ಈ.ಎಸ್ ಮತ್ತು ಗಾನಯೋಗಿ ಸಂಸ್ಥೇಯ ಸಚೀನ ಪಾಟೀಲ್, ಸಾಗರ ಮಂಚಾಲಕರ, ಸಾಗರ ಬಾಗಲಕೋಟ ಹಾಗೂ ಇತರರು ಭಾಗವಹಿಸಿದ್ದರು.