ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್, ಸೈನಿಟೈಸರ್ ಬಳಸುವುದು ಮಾತ್ರ ಕೊರೊನಾ ನಿಯಂತ್ರಣಕ್ಕೆ ಸಾಧನಃ ಎಂ.ಬಿ.ಪಾಟೀಲ್

ವಿಜಯಪುರ, ಮೇ.2-ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್, ಸೈನಿಟೈಸರ್ ಬಳಸುವುದು ಮಾತ್ರ ಕೊರೊನಾ ತಡೆಗೆ, ನಿಯಂತ್ರಣಕ್ಕೆ ಸಾಧನಗಳಾಗಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು, ಈ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಹೇಳಿದರು.
ಬಬಲೇಶ್ವರ ವಿಧಾನಸಭಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಲಸಿಕಾ ಅಭಿಯಾನ ಅಂಗವಾಗಿ ವಿವಿಧ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಮಮದಾಪುರದಲ್ಲಿ ಮಾತನಾಡಿದ ಅವರು ಇಂದಿನಿಂದ 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಲಸಿಕೆಗಳ ಅಭಾವದಿಂದ 18-45 ವರ್ಷದವರಿಗೆ ಸಧ್ಯ ಲಸಿಕೆ ನೀಡಲಾಗುತ್ತಿಲ್ಲ. ಆದರೆ 45 ವರ್ಷ ಮೇಲ್ಪಟ್ಟಯಾರೋಬ್ಬರೂ ಉಳಿಯದಂತೆ ಕೂಡಲೇ ಎಲ್ಲರೂ ಸಮೀಪದ ಆರೋಗ್ಯ ಕೇಂದ್ರಗಳಿಗೆ ಅಥವಾ ನಮ್ಮ ಅಭಿಯಾನ ನಿಗದಿ ಪಡಿಸಿದ ಶಾಲೆಗಳಿಗೆ ಭೇಟಿ ನೀಡಿ, ಲಸಿಕೆ ಪಡೆದುಕೊಳ್ಳಬೇಕು. ವಿಶೇಷವಾಗಿ ಯುವಕರು ತಮ್ಮ ಮನೆಯಲ್ಲಿನ, ಕುಟುಂಬ ವರ್ಗದವರ ಹಾಗೂ ಏರಿಯಾದಲ್ಲಿನ 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಗಮನಹರಿಸಬೇಕು ಎಂದರು.
ಮಮದಾಪುರದ ವಿರಕ್ತಮಠದ ಪರಮಪೂಜ್ಯಅಭಿನವ ಮುರುಘೇಂದ್ರ ಸ್ವಾಮಿಗಳು, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಗಂಗೂರ, ಲಕ್ಷ್ಮಣತೇಲಿ, ಅನೀಲ ನಾಯಕ ವೈದ್ಯಾಧಿಕಾರಿಡಾ.ಸಮೀರಜಂಬಗಿ, ಪಿಡಿಓ ಮಹೇಶ ಕಗ್ಗೊಡದವರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಎಂಬಿ.ಪಾಟೀಲ್‍ರವರು ಬಬಲೇಶ್ವರ ಹಾಗೂ ತಿಕೋಟಾ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಲಸಿಕೆ ಪಡೆದುಕೊಳ್ಳಲು ಬರುವಎಲ್ಲರಿಗೂ ಲಘುಪಾನೀಯ ಹಾಗೂ ಬಿಸ್ಕಟ್‍ಗಳನ್ನು ಒದಗಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರುಅದಕ್ಕೆತಗಲುವಎಲ್ಲ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಎಂ.ಬಿ.ಪಾಟೀಲ್‍ರವರು ತಿಳಿಸಿದರು.