ಸಾಮಾಜಿಕವಾಗಿ ಪ್ರತಿಯೊಬ್ಬರೂ ಸಮಾನರು- ದೇವಾರಡ್ಡಿ


ಸಂಜೆವಾಣಿ ವಾರ್ತೆ
ಸಂಡೂರು:ಫೆ: 28; ಸಾಮಾಜಿಕವಾಗಿ ಪ್ರತಿಯೊಬ್ಬರೂ ಸಮಾನರು ಎನ್ನುವ ಅಂಶವನ್ನು ಇಡೀ ಜಗತ್ತು ಒಪ್ಪಿಕೊಳ್ಳುವ ಮೂಲಕ ವಿಶ್ವ ಸಾಮಾಜಿಕ ನ್ಯಾಯದ ದಿನವನ್ನು ಹಮ್ಮಿಕೊಂಡಿದ್ದು ಅದರ ಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಧೀಶರಾದ ದೇವರೆಡ್ಡಿಯವರು ತಿಳಿಸಿದರು.
ಅವರು  ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಪುರಷ ಮತ್ತು ಮಹಿಳೆಯರಲ್ಲಿ ಯಾವುದೇ ಭಿನ್ನತೆ ಇಲ್ಲ ಎಲ್ಲರೂ ಸಾಮಾಜಿಕವಾಗಿ ಸಮಾನರು, ಅದರೆ ಅನೇಕ ರೀತಿಯ ಆಚರಣೆಗಳ ಅಡಿಯಲ್ಲಿ ಭಿನ್ನತೆಗಳನ್ನು ಕಾಣುತ್ತೇವೆ ಇದು ನಿಲ್ಲಬೇಕು ಅದಕ್ಕೆ ಕಾನೂನು ರೀತಿಯಲ್ಲಿ ಅನೇಕ ರೀತಿಯ ಸೌಲಭ್ಯಗಳಿದ್ದು ಅವುಗಳನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾಧಿಕಾಋಇ ಶುಭಾದೇವಿ ಮಾತನಾಡಿ ಗ್ರಾಮಾಭಿವೃದ್ದಿ ಸಂಸ್ಥೆಯ ಹೇಮಾವತಿ ಅಮ್ಮನವರು ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ಗ್ರಾಮದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳನ್ನು ಪ್ರಾರಂಭಿಸುವ ಮೂಲಕ ಅವರು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು, ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ, ಲಕ್ಷಾಂತರ ರೂಪಾಯಿ ಸಾಲ ನೀಡುವಂತಹದ್ದು, ಪ್ರತಿ ಮಹಿಳೆಯೂ ಸಹ ಬ್ಯಾಂಕ್ ಖಾತೆ ಹೊಂದುವಂತಹದ್ದು, ಪಾನ್ ಕಾರ್ಡ ಪಡೆಯುವುದು ಆರ್ಥಿಕ ವ್ಯವಹಾರ ನಡೆಸುವುದರ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಸಹ ಉತ್ತಮ ರೀತಿಯಲ್ಲಿ ಮಾಡಲು ಸಹಕಾರಿಯಾಗಿದೆ, ಅದ್ದರಿಂದ ಮಹಿಳೆ ಅಬಲೆಯಲ್ಲ ಸಬಲೇ ಎನ್ನುವುದನ್ನು ತೋರಿಸುತ್ತಿದ್ದಾಳೆ, ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯವರು ರುಡ್ ಸೆಟ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಯುವಕ , ಯುವತಿಯರಿಗೆ ಸ್ವ ಉದ್ಯೋಗ ತರಬೇತಿಯನ್ನು ಕೊಟ್ಟು ಅವರಿಗೆ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಿ ಸ್ವತಂತ್ರರನ್ನಾಗಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಇದು ಸಾಮಾಜಿಕ ನ್ಯಾಯವನ್ನು ನೀಡುವಂತಹ ಮಹತ್ತರ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಮಂಜುನಾಥ ಬಿ.ಎಸ್. ಅವರು ಸಹ ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಾಮಾಜಿಕ ನ್ಯಾಯದ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆ.ಕುಮಾರಸ್ವಾಮಿ ಉಪಾಧ್ಯಕ್ಷರು, ಎನ್. ಎಂ.ನಟರಾಜ್ ಶರ್ಮ ಕಾರ್ಯದರ್ಶಿಗಳು, ಮಂಜುನಾಥ ಗೌಡ ಸದಸ್ಯರು, ಬಿ.ವಿಜಯಕುಮಾರ ಅಧ್ಯಕ್ಷರು ಅಗಮಿಸಿದ್ದದರು, ಉಜ್ಜಿನಪ್ಪ ಪ್ಯಾನಲ್ ವಕೀಲರು ನಿರೂಪಿಸಿದರು, ಜಿ.ಕೆ. ರೇಖಾ ವಕೀಲರು ಸ್ವಾಗತಿಸಿದರು, ಹೆಚ್. ಕುಮಾರಸ್ವಾಮಿ ವಕೀಲರು ವಂದಿಸಿದರು.