ಸಾಮರಸ್ಯ ಬಾಂಧವ್ಯದಿಂದ ಹೋಳಿ ಹಬ್ಬ ಆಚರಣೆ

ಕಲಬುರಗಿ,ಮಾ.08: ಡಿಎಂಎಸ್‍ಎಸ್ ಸಂಘಟನೆಯ ವತಿಯಿಂದ ಎಲ್ಲಾ ಜಾತಿ ಜನಾಂಗದವರು ಸೇರಿ ಸಾಮರಸ್ಯದ ಬಾಂಧವ್ಯದಿಂದ ತಾರಫೈಲ್ ಬಡಾವಣೆಯಲ್ಲಿ ಹೋಳಿ ಹಬ್ಬ ಆಚರಿಸಲಾಯಿತು.
ಡಿಎಂಎಸ್‍ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಪೈಲ್ ರವರು ಮಾತನಾಡಿ ಈ ದೇಶಕ್ಕೆ ಸ್ವತಂತ್ರ ಬರಬೇಕಾದರೆ ಎಲ್ಲಾ ಜಾತಿ ಜನಾಂಗದ ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರಿಶ್ಚಿಯನ್ ಇನ್ನೂ ಹತ್ತು ಹಲವಾರು ಜಾತಿ ಜನಾಂಗದವರಿಂದ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದನ್ನು ನಾವು ಯಾರು ಮರೆಯುವಂತಿಲ್ಲ ಆದಕಾರಣ ನಾವು ಎಲ್ಲಾ ಜಾತಿ ಜನಾಂಗದವರು ಒಂದೇ ತಂದೆ ತಾಯಿಯ ಮಕ್ಕಳು ಇದ್ದಂತೆ ಆದಕಾರಣ ನಾವೆಲ್ಲರೂ ಸೇರಿ ಈ ಹೋಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮಾಜದ ಬಿಷಪ್ ಗೋಪಾಲ್, ಮುಸ್ಲಿಂ ಸಮಾಜದ ಅಪ್ಪಿಜ್ ಹಸೀನ್ ಮೌಲಾನ ಸಾಬ್, ಸಿಖ್ ಸಮಾಜದ ಲಖನ್ ಸಿಂಗ್ ಸರ್ದಾರ್ ಜಿ, ಆಸಿಫ್ ಗಾಣಗಾಪುರ್, ಸಚಿನ್ ತಾರಪೈಲ್, ರಿಯಲ್ ಶಾಂತು ಹಾಗೂ ಇತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.