ಸಾಮರಸ್ಯ ಬದುಕಿಗೆ ಜಾತ್ರೆಗಳು ಸ್ಪೂರ್ತಿ:ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು

ಸ್ಟೇಶನ್ ಬಬಲಾದ :ಮಾ.31: ಸಾಮರಸ್ಯದ ಬದುಕಿಗೆ ಜಾತ್ರೆಗಳು ಸ್ಪೂರ್ತಿಯಾಗಬೇಕೆಂದು ಹೊನ್ನ ಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ನುಡಿದರು,

ಅವರು ತಾಲೂಕಿನ ಸ್ಟೇಶನ್ ಬಬಲಾದ ಶ್ರೀ ಮಲ್ಲಿಕಾರ್ಜುನ ದೇವರ 59ನೇ ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮಸಭೆಯ ನೇತೃತ್ವ ವಹಿಸಿ ಆರ್ಶೀವಚನದಲ್ಲಿ ನಮಗಾಗಿ ಸುಖ-ಸಂತೋಷ ಹೇಗೆ ಬಯಸುತ್ತೇವೆಯೋ ಅದೇರೀತಿ ಇತರಿಗಾಗಿ ಸುಖ ಸಂತೋಷ ಬಯಸುವುದೇ ನಿಜವಾದ ಧರ್ಮವಾಗಿದೆ ಎಂದು ನುಡಿದರು, ಶ್ರೀಮಠದ ಶಿವಮೂರ್ತಿ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವಚನದಲ್ಲಿ ಲಿಂಗೈಕ್ಯೆ ಸಿದ್ಧಲಿಂಗ ಶಿವಯೋಗಿಗಳ ಹಾಗೂ ಶ್ರೀ ರಂಭಾಪೂರಿ ಜಗದ್ಗುರುಗಳ ಕೃಪಾಶೀರ್ವಾದವು ನಮ್ಮನಿಮ್ಮ ಮೇಲೆ ಇರಲಿ, ಭಕ್ತರ ಸಹಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕೆಲಸ ಮಾಡಲು ಸಹಕಾರ ನೀಡಬೇಕೆಂದು ಕೋರಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕ್ರಪ್ಪ ಸಾಹೂಕಾರ ರಥೋತ್ಸವಕ್ಕೆ ಚಾಲನೆ ನೀಡಿದರು, ಅವರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು. ಚೌದಾಪೂರಿಯ ರಾಜಶೇಖರ ಶಿವಾಚಾರ್ಯರು ಮಾತನಾಡಿದರು. ಅತನೂರಿನ ಗುರುಬಸವ ಶಿವಾಚಾರ್ಯರು, ನವಲಗಲ್ ಸೋಮನಾಥ ಶಿವಾಚಾರ್ಯರು, ತೊನಸನಹಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಪ್ಪೂಗೌಡ ಪಾಟೀಲ ರೇವೂರ, ಸುರಪೂರ ಶಾಸಕರಾದ ರಾಜೂಗೌಡ, ನೀಲಕಂಠ ಮೂಲಗೆ, ದಯಾನಂದ ದಂಡೋತಿ, ಚನ್ನಬಸಪ್ಪ ಮೇಕಾಲೆ, ಶಿವಶರಣಪ್ಪ ಶೀರಿ ಇದ್ದರು. ಅಮರಯ್ಯಸ್ವಾಮಿ ಹಾಗು ಸಿದ್ದು ಬರಗಾಲಿ ನಿರೂಪಿಸಿದರು,