ಸಾಮರಸ್ಯಯುತ ಜೀವನದಿಂದ ಕೌಟುಂಬಿಕ ವ್ಯವಸ್ಥೆ ಸಫಲ

ಕಲಬುರಗಿ.ಮೇ.15: ಕುಟುಂಬವು ಸಮಾಜದ ಪ್ರಮುಖ ಘಟಕವಾಗಿದ್ದು, ಪ್ರೀತಿ, ಪ್ರೇಮ, ಬಾಂಧವ್ಯ, ಸಂಬಂಧದ ಬೆಸುಗೆಯಾಗಿದೆ. ಇಂದು ಕಾರಣಾಂತರಗಳಿಂದ ವಿಭಜನೆಯಾಗಿ, ವಿಭಕ್ತ ಕುಟುಂಬಗಳೇ ವ್ಯಾಪಕವಾಗಿ ಕಂಡುಬರುತ್ತಿವೆ. ಪರಸ್ಪರ ತಿಳವಳಿಕೆ, ನಾವೆಲ್ಲರೂ ಒಂದೆ ಎಂಬ ಭಾವನೆಯುಳ್ಳ ಸಾಮರಸ್ಯಯುತ ಜೀವನ ಸಾಗಿಸಿದರೆ, ಕೌಟುಂಬಿಕ ವ್ಯವಸ್ಥೆ ಸಫಲವಾಗಲು ಸಾಧ್ಯವಾಗುತ್ತದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ಬಸವ ಜಯಂತಿ ಮತ್ತು ವಿಶ್ವ ಕುಟುಂಬ ದಿನಾಚರಣೆ ಪ್ರಯುಕ್ತ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ನಗರದ ಹೊರವಲಯದ ರಾಮತೀರ್ಥ ದೇವಾಸ್ಥಾನದ ಸಮೀಪದಲ್ಲಿರುವ ಅಲೆಮಾರಿ ಜನಾಂಗದ ಬಡ ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡಿ ಅವರು ಮಾಡನಾಡುತ್ತಿದ್ದರು.

ಬಸಯ್ಯ ಸ್ವಾಮಿ ಹೋದಲೂರ ಮಾತನಾಡಿ, ಕುಟುಂಬ ಎಂದರೆ ಬಾಂಧವ್ಯದ ಸಾಗರವಾಗಿದೆ. ಪ್ರೀತಿಯ ಸಮುದ್ರವಾಗಿದೆ. ಕುಟುಂಬದಲ್ಲಿರುವ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸಹಕಾರ, ಮನೋಭಾವದಿಂದ ಜೀವಿಸಿ, ಶಾಂತಿಯುತ, ಆದರ್ಶ ಕುಟುಂಬವಾಗಬೇಕು. ಯಾವುದೇ ಕಾರಣಕ್ಕೂ ಬಾಂಧ್ಯವ್ಯದ ಬೆಸುಗೆಯಾದ ಕುಟುಂಬ ಹಾಳಾಗಬಾರದೆಂದು ನುಡಿದರು.

ದೇವೇಂದ್ರಪ್ಪ ಗಣಮುಖಿ, ಪ್ರಕಾಶ ಸರಸಂಬಿ, ಅಣ್ಣಾರಾವ ಎಚ್. ಮಂಗಾಣೆ ಇದ್ದರು.