ಸಾಮರಸ್ಯಗಳಿಂದ ಹಬ್ಬ ಆಚರಣೆ ಮಾಡಿ:ಎಸ್.ಪಿ,ಸಂಗೀತಾ ಕರೆ

ಶಹಾಪುರ:ಸೆ.13:ಕೊಮುಗಲಭೆಗಳು ಉಂಟಾಗದಂತೆ. ಸಹೋದರತ್ವದ ಭಾವನೆಗಳಿಂದ ಸಾಮರಸ್ಯಗಳ ಸಮ್ಮಿಲನಗಳೊಂದಿಗೆ, ಈದ್ ಮಿಲಾದ ಮತ್ತು ಗಣೇಶ ಹಬ್ಬ ಆಚರಣೆ ಮಾಡಬೇಕು ಎಂದು ಯಾದಗಿರಿ ಜಿಲ್ಲಾ ಎಸ್.ಪಿ, ಸಂಗೀತಾ ಐಪಿಎಸ್, ರವರು ಕರೆ ನೀಡಿದರು. ಅವರು ಶಹಾಪುರ ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ, ಎರ್ಪಡಿಸಲಾದ ಈಧ ಮಿಲಾದ ಮತ್ತು ಗಣೇಶ ಉತ್ಸವಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಶಾಂತಿ ಮನೋಭಾವನೆಗಳಿಂದ ಪರಸ್ಪರ ಸಹಕಾರಗಳಿಂದ ಹಬ್ಬ ಆಚರಣೆಯಾದಲ್ಲಿ ಯಾದಗಿರಿ ಜಿಲ್ಲೆ ಮತ್ತು ಪೋಲಿಸ್ ಇಲಾಖೆಗೆ ಮೇರಗು ನೀಡಿದಂತಾಗುತ್ತದೆ ಎಂದು ಎಸ್,ಪಿಯವರು ನುಡಿದರು. ಡಿಜೆ ನಿರ್ಭಂಧ ಮಾಡಿಲಾಗಿದೆ, ಪ್ರತಿ ಗಣೇಶ ಪ್ರತಿಷ್ಠಾನದ ಸ್ಥಾನಗಳಲ್ಲಿ ಸಿಸಿ ಕ್ಯಾಮರಗಳು ಕಡ್ಡಾಯಗೊಳಿಸಲಾಗಿದೆ ಎಂದರು, ಗಣೇಶ ಸ್ಥಾಪನೆಗಳಿಗೆ ಸಮಿತಿಗಳು ಕಾನೂನು ನೀತಿ ನಿಯಮಗಳನ್ಚಯ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಡಿವೈಎಸ್,ಪಿ, ಜಾವೇದ ಇನಮದಾರವರು ಮಾತನಾಡಿ. ಕುವೆಂಪು ಹಿತನುಡಿದಂತೆ ನಾವುಗಳು ಯಾವುದೆ ಜಾತಿ ಧರ್ಮಗಳಿಗೆ ಸೀಮಿತರಾಗದೆ, ವಿಶ್ವ ಮಾನವರಾಗೋಣವೆಂದರು. ಈದ್ ಮಿಲಾದ ಮತ್ತು ಗಣೇಶ ಉತ್ಸವಗಳು ಏಕಕಾಲಕ್ಕೆ ಬರುತ್ತಿರುವದರಿಂದ ಮೇರವಣಿಗೆಯ ಮಾರ್ಗಗಳು ಬದವಣೆಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಶಾಂತಿ ಸುವ್ಯವಸ್ಥೆಗಳಿಂದ ಮೇರವಣಿಗೆಗಳು ಸಾಗಬೆಕು, ಪೋಲಿಸ್ ಇಲಾಖೆ ಬೇಂಗವಾಲಾಗಿ ಕರ್ತವ್ಯ ನಿರ್ವಹಣೆ ಮಾಡುತ್ತದೆ.ಪ್ರತಿ ಹಂತದಲ್ಲಿ, ಖಾಸಗಿ ಸಹಭಾಗಿತ್ವದಲ್ಲಿ ಸಿಸಿ ಕ್ಯಾಮರಗಳು ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ತಹಿಸಿಲ್ದಾರ ಉಮಾಕಾಂತ ಹಳ್ಳೆಯವರು ಮಾತನಾಡಿ. ಸಗನರಾಡಿನ ಜನರು ಶಾಂತಿ ಪ್ರೀಯಾರಾಗಿದ್ದಾರೆ ಇದನ್ನು ಇನ್ನೂ ಬುಹುಕಾಲÀಂತರವಾಗಿ ಮುಂದುವರೆಯಲಿ. ಪ್ರತಿಯೊಬ್ಬ ಗಣೇಶ ಸಮಿತಿಗಳು ಸಂಭಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಪಡೆದುಕೊಂಡು ಪ್ರತಿಷ್ಠಾಪನೆಗಳಿಗೆ ಅನೂಕೂಲ ಮಾಡಿಕೊಳ್ಳಬೇಕು ಎಂದರು, ಪಿ,ಐ ಎಸ್,ಎನ್, ಪಾಟೀಲರವರು ಸರ್ವರನ್ನು ಸ್ವಾಗತಿಸಿ ಮಾತನಾಡಿ. ಕಾನೂನು ಸುವ್ಯವಸ್ಥೆಗಳಿಗೆ ದಕ್ಕೆ ಉಂಟಾಗದಂತೆ ಶಾಂತಿ ಕಾಪಾಡಬೇಕು. ಪ್ರತಿ ಸಮಿತಿಗಳು ಸ್ವಯಂ ಸೇವಕರನ್ನು ಹೊಂದಬೇಕು.ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು, ತುರ್ತು ಪರಸ್ಥಿತಿಗಾಗಿ ಸಲಕರಣೆಗಳ ಕಟ್ ಅಲವಡಿಕೊಳ್ಳಬೇಕು. ಪಾಟಾಕಿ ಸಿಡಿಸುವದರಿಂದ ಮತ್ತೊಬ್ಬರಿಗೆ ತೊಂದರೆ ಉಂಟಾಗದಂತೆ ನೊಡಿಕೊಳ್ಳಬೇಕು ಎಂದರು, ಜೆಸ್ಕಾಮ ಎಇಇ ಮರೆಪ್ಪ ಕಡ್ಲೆಕರ್, ನಗರಸಬೆ ಎಇಇ ನಾನಾಸಾಬ್ ಮಡಿವಾಳ್ಕರ್, ಹಿರಿಯ ಆರೋಗ್ಯ ನೀರಿಕ್ಷಕರಾದ ಹಣಮಂತ ಯಾದವ್. ಪಿಎಸ್,ಐ ಸೋಮಲಿಂಗಪ್ಪ ಶ್ಯಾಮಸುಂದರ್ ನಾಯಕ. ಈ ಸಭೆಯಲ್ಲಿ, ಹಿರಿಯ ಮುಖಂಡರಾದ ಸಣ್ಣ ನಿಂಗಣ್ಣನಾಯ್ಕೊಡಿ,ಮಾಹಾದೇವಪ್ಪ ಸಾಲಿಮನಿ. ಸಯದ್ ಕಾಲಿದ . ಸೈಯದುದ್ದಿನ ಖಾದ್ರಿ, ಶರಣು ದೋರನಳ್ಳಿ, ಮಾತನಾಡಿದರು, ಚಮದ್ರಶೇಖರ ಲಿಂಗದಳ್ಳಿ, ಅಮಲಪ್ಪ ದ್ಯಾವಪೂರ. ನಾಗಣ್ಣ ಬಡಿಗೇರ,.ಲಾಲನಸಾಬ್ ಕೂರಶಿ. ಬಸವರಾಜ ನಾಯ್ಕಲ್, ಶಿವುಪುತ್ರ ಜವಳಿ, ಬಸವರಾಜ ತಳವಾರ, ವಿಜಯಕುಮಾರ ಎದರಮನಿ. ಶ್ರೀರಾಮ ಸೇನೆಯ ಅಧ್ಯಕ್ಷರಾದ ಶಿವು ಶಿರವಾಳ. ಸೇರಿದಂತೆ ವಿವಿಧ ಸಮಾಜದ ಮುಖಂಡರು ಪೋಲಿಸ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.