ಸಾಮಥ್ರ್ಯ ಹೆಚ್ಚಿಸುವಲ್ಲಿ ಎನ್.ಎಸ್.ಎಸ್ ಸಹಕಾರಿ: ಶಿವಾಚಾರ್ಯ ಶ್ರೀ

ಹುಬ್ಬಳ್ಳಿ,ಮಾ19: ವಿದ್ಯಾರ್ಥಿಗಳು ಸ್ಪರ್ಧಾಮನೋಭಾವ ಮೈಗೂಡಿಸಿಕೊಳ್ಳಬೇಕು, ಎನ್.ಎಸ್.ಎಸ್ ನಿಮ್ಮಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಸುಳ್ಳ ಮಠದ ಶ್ರೀ.ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೇಂದ್ರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಬೆಂಗಳೂರಿನ ಪ್ರಾಂತೀಯ ಎನ್,ಎಸ್,ಎಸ್ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಹುಬ್ಬಳ್ಳಿಯ ಜೆ.ಜಿ ಕಾಲೇಜುಗಳ ಸಹಯೋಗದಲ್ಲಿ ನಗರದ ಜಗದ್ಗುರು ಗಂಗಾಧರ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಮಟ್ಟದ 7 ದಿನಗಳ ಸ್ವಚ್ಚತಾ ಶಿಬಿರದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಮಕ್ಕಳು ಕೆಟ್ಟ ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದು ಅದರಿಂದ ಹೊರಬಂದಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕಾಪೆರ್Çರೇಶನ್ ಕಮೀಷನರ್ ಡಾ.ಸುರೇಶ ಇಟ್ನಾಳ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಸ್ವಚ್ಚತೆಯ ಮಂತ್ರ ನಮ್ಮಿಂದಲೇ ಆರಂಭವಾಗಬೇಕು ಅಂದಾಗ ಸುಂದರ ಪರಿಸರವನ್ನು ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಾವೆಲ್ಲ ಶಿಬಿರಾರ್ಥಿಗಳು ಶ್ರಮವಹಿಸಿ ಸ್ವಚ್ಚತೆ ಕೈಗೊಂಡು ಜೊತೆಗೆ ಜಾಗೃತಿ ಮೂಡಿಸಿರುವುದು ಸ್ವಾಗತಾರ್ಹ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಗಳಾದ ಧಾರವಾಡ ಕವಿವಿಯ ಹಣಕಾಸು ಅಧಿಕಾರಿ ಪೆÇ್ರ.ಆರ್ ಆರ್ ಬಿರಾದಾರ ಮಾತನಾಡಿ ಸದಾ ಶಿಸ್ತನ್ನು ಮೈಗೂಡಿಸಿಕೊಂಡು ಶಿಸ್ತಿನ ಸಿಪಾಯಿ ಗಳಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂತೀಯ ಎನ್,ಎಸ್,ಎಸ್, ಕೋಶ ಬೆಂಗಳೂರು ಯುವ ಅಧಿಕಾರಿ ವೈ ಎಂ ಉಪ್ಪಿನ್,ಕವಿವಿ ಎನ್,ಎಸ್,ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಎಂ ಬಿ ದಳಪತಿ, ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಡಿ.ವ್ಹಿ.ಹೊನಗಣ್ಣವರ, ಪೆÇ್ರ.ವಿ.ಎಸ್. ಕಟ್ಟಿಮಠ, ಡಾ.ಎಂ.ಎಸ್.ಹುಲಗೂರ, ಡಾ.ಎನ್.ಎಮ್.ಸಂಗಮ್ಮನವರ, ಪೆÇ್ರ.ಎಂ.ಡಿ.ಪಾಟೀಲ, ಪೆÇ್ರ.ಮೀನಾಕ್ಷಿ.ಬಿ, ಪೆÇ್ರ.ಚನ್ನಬಸಪ್ಪ ಕುಮ್ಮೂರ, ಪೆÇ್ರ.ಕುರಿ, ಪೆÇ್ರ.ರಾಮಚಂದ್ರ ಹೆಗಡೆ, ಡಾ.ಭಾರತಿ ದೊಡ್ಡಮನಿ, ಕಾರ್ಯಕ್ರಮ ಅಧಿಕಾರಿಗಳು, ಶಿಬಿರದ ಸ್ವಯಂಸೇವಕರು ಉಪಸ್ಥಿತರಿದ್ದರು.