
ಕಲಬುರಗಿ,ಮಾ,13:ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಡೇ-ನಲ್ಮ್ ಯೋಜನೆಯಡಿ 1 ರಿಂದ 17 ವಾರ್ಡಿನ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಸ್ಥಳ ದಶ ಸೂತ್ರಗಳ ಕುರಿತು ನಗರದ ಶಹಾಬಜಾರ್ ದಾಲಮಿಲ್ಲ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಸಾಮಥ್ರ್ಯ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿಗಳಾದ ವಿಜಯಲಕ್ಷ್ಮಿ ಪಟ್ಟೇದಾರ್ ಅವರು ಸೋಮವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸ್ವ-ಸಹಾಯ ಗುಂಪು ರಚನೆ, ನಿರ್ವಹಣೆ, ಕಾರ್ಯ, ಧ್ಯೇಯ ಉದ್ದೇಶ ಹಾಗೂ ಮತ್ತಿತರ ದಶಸೂತ್ರಗಳ ಕುರಿತು ತಿಳಿ ಹೇಳಿದರು.
ಈ ಸಂಧರ್ಭದಲ್ಲಿ ಡೇ-ನಲ್ಮ್ ಶಾಖೆಯ ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿಗಳಾದ ನಾಗಮ್ಮ ಸಿ., ಫಯಾಜಾ ಯಾಕಾಪುರ, ಶಕೀಲ ಗುನ್ನಾಪುರ ಸೇರಿದಂತೆ 29 ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.