ಸಾಫ್ಟ್‌ವೇರ್ ಬಳಸಿ ಮಾದಕವಸ್ತು ಮಾರಾಟ ಗ್ಯಾಂಗ್ ಪತ್ತೆ ೨ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು,ಆ.೨-ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾಫ್ಟ್‌ವೇರ್ ಗಳನ್ನು ಬಳಸಿ ನಿರುದ್ಯೋಗಿ ಯುವಕರಿಂದ ಡನ್ಜೋ ಹಾಗೂ ಪೋರ್ಟರ್ ಮೂಲಕ ಗ್ರಾಹಕರಿಗೆ ಮಾದಕವಸ್ತು ಗಳನ್ನು ಸರಬರಾಜು ಮಾಡುತ್ತಿದ್ದ ದೆಹಲಿ ಮೂಲದ ಗ್ಯಾಂಗ್ ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೨ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ದೆಹಲಿ ಮೂಲದ ಗ್ಯಾಂಗ್ ನ ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್, ಸುಬರ್ಜಿತ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ.
ಬಂಧಿತ ಐವರ ಗ್ಯಾಂಗ್ ನಿಂದ ೨ಕೋಟಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್,ಪಿಲ್ಸ್ ಗಳು,ಕೋಕೈನ್,ಹ್ಯಾಶಿಸ್ ಆಯಿಲ್ ,ಚರಸ್
ಗಾಂಜಾವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಬಂಧಿತ ಗ್ಯಾಂಗ್ ನ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಗ್ಯಾಂಗ್ ನಲ್ಲಿದ್ದ ಇತರರ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲೋಕೋಂಟೋ ಮೂಲಕ ನಗರ ಹಾಗೂ ಅಂತರ್ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಹೆಚ್ಚಿನ ವೇತನದ ಆಸೆ ತೋರಿಸಿ ಕೆಲಸಕ್ಕೆ ತೆಗೆದು ಕೊಂಡು ಮಾದಕವಸ್ತು ಸಾಗಾಣೆ ಮಾಡಲು ಬಳಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಕೆಲಸಕ್ಕೆ ತೆಗೆದುಕೊಂಡ ಯುವಕರನ್ನು ಆರೋಪಿಗಳು ಬೆಂಗಳೂರು,ದೆಹಲಿ,ಚೆನ್ನೈ ಹಾಗೂ ಮುಂಬಯಿ ಮಹಾ ನಗರಗಳಲ್ಲಿ ಪಿಜಿ ಹಾಸ್ಟೆಲ್ ಗಳನ್ನು ಬಾಡಿಗೆಗೆ ಪಡೆದು ಅವುಗಳಲ್ಲಿ ಇರಿಸುತ್ತಿದ್ದರು.

ಇಂಟರ್ ನ್ಯಾಷನಲ್ ಕೊರಿಯರ್ ಸರ್ವೀಸ್ ಗಳು ಅಲ್ಲದೇ ಡಾರ್ಕ್ ನೆಟ್ ,ಡ್ರೇಡ್ ವೆಬ್ ಸೈಟ್ ನಲ್ಲಿ ಹಾಗೂ ವಿಕರ್ ಮೀ ಅಪ್ಲಿಕೇಶನ್ ನಲ್ಲಿ ವಿದೇಶಿಯರು ಸ್ಥಳೀಯ ಡ್ರಗ್ಸ್ ವೆಂಡರ್ ಗಳಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಎಂಡಿಎಂಎ ಕ್ರಿಸ್ಟಲ್,ಪಿಲ್ಸ್ ಗಳು,ಕೋಕೈನ್,ಹ್ಯಾಶಿಸ್ ಆಯಿಲ್ ,ಚರಸ್ಗಾಂಜಾವನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದರು.
ಅಲ್ಲಿಂದ ವಿವಿಧ ನಗರಗಲ್ಲಿ ಟೆಲಿಗ್ರಾಂ, ಇನ್ಸಾಟ್ರಾಗ್ರಾಮ್ ,ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ, ಪೋನ್ ಪೇ ಮೂಲಕ ಹಣ ಪಡೆಯುತ್ತಿದ್ದರು.
ಹಣ ಪಡೆದ ಬಳಿಕ ಉದ್ಯೋಗದ ನೆಪದಲ್ಲಿ ಡ್ರಗ್ಸ್ ಕಳುಹಿಸಿ ಯುವಕರ ಮೂಲಕ ಸಾಗಾಣೆ ಮಾಡಿಸುತ್ತಿದ್ದರು ಕೃತ್ಯಕ್ಕೆ ಡನ್ಜೋ ಹಾಗೂ ಪೋರ್ಟರ್ ಮೂಲಕ ಗಿಫ್ಟ್ ಬಾಕ್ಸ್ ಗಳ ಹಾಗೂ ಕೊರಿಯರ್ ಎನ್ ವಲಪ್ ಮುಖಾಂತರ ಡ್ರಗ್ಸ್ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿಗಳಿಂದ ಎರಡು ಕೋಟಿ ಮೌಲ್ಯದ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್?ಗಳನ್ನು ಪೊಲೀಸರು ವಶಕ್ಕೆ ಪಡೆದು ಜೊತೆಗೆ ಐದು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಡಿಸಿಪಿ ಅಂಗಡಿ ಅವರಿದ್ದರು.