ಸಾನಿಸಾಹೇಬ್ ಜಾತ್ರೆಗೆ ಚಾಲನೆ

ಭಾಲ್ಕಿ: ಜೂ.30:ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಹೊರ ವಲಯದ ಗುಡ್ಡದ ಪರಿಸರದಲ್ಲಿರುವ ಸಾನಿಸಾಹೇಬ್ (ಮಡ್ಡಿಪೀರ್) ದೇವರ ಜಾತ್ರೆಗೆ ಗಂಧಾಭಿಷೇಕ(ಸಂದಲ್) ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.
ಗ್ರಾಮದ ಮಚಕೂರಿ ಓಣಿಯಿಂದ ಆರಂಭವಾದ ಹಜರತ್ ಸಾನಿ ಸಾಹೇಬ್ ಸಂದಲ್ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಗ್ರಾಮದ ಹೊರ ವಲಯದ ಗುಡ್ಡ ಪರಿಸರ ಪ್ರದೇಶದಲ್ಲಿರುವ ಸಾನಿ ಸಾಹೇಬ್ ದರ್ಗಾವರೆಗೆ ತೆರಳಿತು.
ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಕಾಯಿ, ಕರ್ಪೂರ ಅರ್ಪಿಸಲಾಯಿತು.
ಸಲೀಂ ಸಾಬ್ ಮಚಕೂರಿ, ಅಮೀರ್ ಸಾಬ್ ಮಚಕೂರಿ, ಖಾಜಾಮೀಯಾ ಮಚಕೂರಿ, ಗೌಸೋದ್ದಿನ್ ಮಚಕೂರಿ, ನಾಗೇಶ, ಸಹದೇವ ಮಡಿವಾಳ, ಅಶೋಕ ಮಡಿವಾಳ ಇದ್ದರು.